ಮಹಿಳೆಯರ ಅಸ್ತಿ ಹಕ್ಕು ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ಭಾರತದಲ್ಲಿ ಪ್ರತಿಯೊಬ್ಬ ಮಹಿಳೆಯು ಆಸ್ತಿಗೆ ಸಂಬಂಧಿಸಿದಂತೆ ಕೆಲವು ಹಕ್ಕುಗಳನ್ನು ಹೊಂದಿದ್ದಾಳೆ. ಹಿಂದೂ ಉತ್ತರಾಧಿಕಾರದ ಕಾಯ್ದೆ 2005ರ ತಿದ್ದುಪಡಿಯ ಪ್ರಕಾರ, ಮಹಿಳೆಯರಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕನ್ನು ನೀಡಲಾಗಿದೆ. ಅದರ ಸಂಪೂರ್ಣ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ನೋಡೋಣ.

ಆಸ್ತಿ ಎಂದರೆ ಅದು ಕೇವಲ ಪುರುಷರಿಗೆ ಸಂಬಂಧಿಸಿದ್ದು ಎಂದು ಭಾವಿಸುವ ಮಹಿಳೆಯರು ಪುನಃ ಒಮ್ಮೆ ಆಲೋಚಿಸಬೇಕಿದೆ. ಭಾರತದಲ್ಲಿ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೂ ಸಹ ಪುರುಷರಷ್ಟೇ ಸಮಾನ ಹಕ್ಕಿದೆ.ಕಡಿಮೆ ಆರ್ಥಿಕ ಸ್ಥಿರತೆಯನ್ನು ಹೊಂದಿರುವ ಮಹಿಳೆಯರನ್ನು ಸಬಲೀಕರಣಗೊಳಿಸಲು ಸಾಕಷ್ಟು ಕಾನೂನು ಕ್ರಮವನ್ನು ಹೊಂದಿದೆ. ಭಾರತದ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ, ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಸರ್ಕಾರ ನೀಡುವ ಜಮೀನುಗಳನ್ನು ಮಹಿಳೆಯರ ಹೆಸರಲ್ಲಿಯೇ ನೀಡಲಾಗುವುದು.

ಭಾರತದಲ್ಲಿ ಧಾರ್ಮಿಕ ಅಂಗಸಂಸ್ಥೆಯ ಆಧಾರದ ಮೇಲೆಯೇ ಕುಟುಂಬ ಕಾನೂನುಗಳು ವೈಯಕ್ತಿಕ ಸ್ಥಿತಿ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ. ಕೆಲವು ರಾಜ್ಯಗಳಲ್ಲಿ ಇದು ಜಾರಿಯಲ್ಲಿದ್ದರೆ, ಇನ್ನೂ ಕೆಲವು ರಾಜ್ಯಗಳು ಧಾರ್ಮಿಕ ಆಚರಣೆಗಳ ಆಧಾರದ ಮೇಲೆ ಕೊಂಚ ಬದಲಾವಣೆಯನ್ನು ಮಾಡಿಕೊಂಡಿವೆ ಎಂದು ಲೆಕ್ಸ್ ಫಾವಿಯೋಸ್ನ ವ್ಯವಸ್ಥಾಪಕ ಪಾಲುದಾರ ಸುಮ್ಸ್ ದಿವಾನ್ ಹೇಳಿದ್ದಾರೆ.

ತನ್ನ ತಂದೆಯ ಆಸ್ತಿಯಲ್ಲಿ ಮಗನಷ್ಟೇ ಮಗಳಿಗೂ ಸಮಾನ ಉತ್ತರಾಧಿಕಾರವಿದೆ. ತಾಯಿ ಮತ್ತು ತಂದೆಯ ಆಸ್ತಿಯಲ್ಲಿ ಸಮಾನವಾದ ಪಾಲನ್ನು ಪಡೆದುಕೊಳ್ಳಲು ಅವಳಿಗೆ ಹಕ್ಕಿದೆ. ಅವಳಿಗೆ ನೀಡಿದ ಪಾಲಿನ ಸಮಾನತೆಯ ಪ್ರಮಾಣದಲ್ಲೇ ಸಹೋದರ ಹಾಗೂ ಸಹೋದರಿಗೂ ನೀಡಲಾಗುವುದು. ಆಕೆ ತಾನು ಪಡೆದ ಪಾಲನ್ನು ಮಾರಾಟದ ಮೂಲಕ, ವಿಲ್ ಮೂಲಕ ಅಥವಾ ಉಡುಗೊರೆಯ ರೂಪದಲ್ಲಿ ವಿಲೇವಾರಿ ಮಾಡಬಹುದು.

ಅವಳು ಗಳಿಸಿದ ಆಸ್ತಿಯನ್ನು ಉಡುಗೊರೆಯಾಗಿ ನೀಡುವ ಅಥವಾ ವಿಲ್ ಮಾಡುವ ಎಲ್ಲಾ ಬಗೆಯ ಹಕ್ಕನ್ನು ಹೊಂದಿರುತ್ತಾಳೆ.ವಿವಾಹಿತ ಮಹಿಳೆ ಗಳಿಸಿದ, ಉಡುಗೊರೆಯಾಗಿ ಪಡೆದ ಮತ್ತು ವಿಲ್ ಮೂಲಕ ಗಳಿಸಿದ ಆಸ್ತಿಗಳಿಗೆ ಆಕೆ ಒಬ್ಬಳೇ ಏಕಸ್ವಾಮ್ಯ ಹಕ್ಕನ್ನು ಪಡೆದುಕೊಂಡಿರುತ್ತಾಳೆ. 2005ರ ನಂತರದ ತಿದ್ದು ಪಡಿಯ ಕಾನೂನು ಪ್ರಕಾರ ತಂದೆಯ ನಿಧನದ ಬಳಿಕ ಮಹಿಳೆಯರಿಗೆ ತನ್ನ ತಂದೆಯ ಆಸ್ತಿಯಲ್ಲಿ ಹಕ್ಕಿರುತ್ತದೆ. ಮಹಿಳೆಯರು ತಾವು ಪಡೆದ ಆಸ್ತಿಯನ್ನು ವಿಲ್ ಮೂಲಕ ಅಥವಾ ಉಡುಗೊರೆಯ ಮೂಲಕ ಯಾರಿಗಾದರೂ ವಿಲೇವಾರಿ ಮಾಡುವ ಹಕ್ಕನ್ನು ಹೊಂದಿರುತ್ತಾರೆ.

ಅಂತೆಯೇ ಗಂಡನಿಂದಲೂ ನಿವಾಸವನ್ನು ಒದಗಿಸುವ ಹಾಗೂ ನಿರ್ವಹಣೆಯನ್ನು ಹೊಂದುವ ಹಕ್ಕನ್ನು ಪಡೆದುಕೊಂಡಿರುತ್ತಾಳೆ. ಅವಿಭಕ್ತ ಕುಟುಂಬದಲ್ಲಿ ಇರುವಾಗ ವಿಭಜನೆಯನ್ನು ಮಾಡಿದರೆ ಗಂಡ ಮತ್ತು ಮಕ್ಕಳಷ್ಟೇ ಸಮಾನ ಹಕ್ಕನ್ನು ಹೊಂದಿರುತ್ತಾಳೆ. ಅದೇ ರೀತಿ, ಗಂಡನ ಮರಣದ ನಂತರ ಅವಳ ಮಕ್ಕಳು ಮತ್ತು ಗಂಡನ ತಾಯಿಯ ಆಸ್ತಿಯಲ್ಲೂ ಸಮಾನವಾದ ಪಾಲನ್ನು ಪಡೆದುಕೊಳ್ಳಲು ಅರ್ಹಳಾಗಿರುತ್ತಾಳೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...