ಡಿಸಿ ರೋಹಿಣಿ ಸಿಂಧೂರಿ, ರಾಜ್ಯದ ಖಡಕ್ ಹಾಗೂ ದಕ್ಷ ಅಧಿಕಾರಿಗಳ ಪೈಕಿ ಮುಂಚೂಣಿಯಲ್ಲಿ ಕಾಣಸಿಗ್ತಾ ಇರುವ ಹೆಸರು. ಸಂಸದರು, ಶಾಸಕರು ಎಲ್ಲರನ್ನು ತರಾಟೆಗೆ ತೆಗೆದುಕೊಳ್ಳುವ ರೆಬಲ್ ವ್ಯಕ್ತಿತ್ವ. ಆಂಧ್ರಪ್ರದೇಶದಲ್ಲಿ ಹುಟ್ಟಿದ ರೋಹಿಣಿ ಅವರು ಚಿಕ್ಕ ವಯಸ್ಸಿನಲ್ಲೇ ಪಾಠದ ಜೊತೆ ಪಠ್ಯೇತರ ವಿಷಯದಲ್ಲಿಯೂ ಲವಲವಿಕೆಯಿಂದ ತೊಡಗಿಕೊಂಡಿದ್ದರು. ಇವರು ಓದಿದ್ದು ಕೆ’ಮಿಕಲ್ ಇಂಜಿನಿಯರಿಂಗ್ ಆದ್ರೂ ಸಹ ಸಮಾಜ ಸೇವೆಯಲ್ಲಿ ಮುಂದುವರೆಯುವ ವೃತ್ತಿ ಮಾಡಬೇಕು ಅಂತ ಆಸೆ ಪಡ್ತಾರೆ. ಮುಂದೆ ಮುಂದೆ ಕೆ’ಮಿಕಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಲು ಇಚ್ಚಿಸದೇ ಸಿವಿಲ್ ಪರೀಕ್ಷೆ ಬರೆಯಲು ಮುಂದಾಗ್ತಾರೆ.

ನಂತರ ಸತತ ಶ್ರಮದಿಂದ ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗ್ತಾರೆ. ಎಷ್ಟರಮಟ್ಟಿಗೆ ಅಂದ್ರೆ ದೇಶದಲ್ಲಿಯೇ ರೋಹಿಣಿ ಸಿಂಧೂರಿಯವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 43ನೇ ರ‍್ಯಾಂಕ್ ಪಡೆದುಕೊಳ್ತಾರೆ. ನಂತರ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸ್ತಾರೆ.
ತೆಲುಗು, ಕನ್ನಡ, ತಮಿಳು, ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಬಲ್ಲ ರೋಹಿಣಿ ಸಿಂಧೂರಿ ಸದ್ಯ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿವಹಿಸ್ತಾ ಇದ್ದಾರೆ. ರೋಹಿಣಿ ಅವರ ವೈಯಕ್ತಿಕ ಬದುಕಿನ ಬಗೆಗೆ ಹೇಳೋದಾದ್ರೆ ಇವರು ಆಂಧ್ರ ಮೂಲದ ಸುಧೀರ್ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದಾರೆ. ಇವರಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ.ಗಂಡ ಹಾಗೂ ಇಬ್ಬರು ಮುದ್ದಾದ ಮಕ್ಕಳ ಜೊತೆಗೆ ರೋಹಿಣಿ ಅವರು ಮೈಸೂರಿನ ಸರ್ಕಾರಿ ಡಿಸಿ ನಿವಾಸದಲ್ಲಿ ವಾಸವಾಗಿದ್ದಾರೆ. ಇನ್ನು ರೋಹಿಣಿ ಅವರಿಗೆ ಒಬ್ಬರು ತಂಗಿಯಿದ್ದು, ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಐಎಎಸ್ ಅಧಿಕಾರಿಯಾಗಿದ್ದಾಗ ಹಾಸನ, ಮಂಡ್ಯ ಕ್ಷೇತ್ರಗಳಲ್ಲಿ ತಮ್ಮ ಅದ್ಭುತ ಕಾರ್ಯಗಳಿಂದ ಜನಮನ ಗೆದ್ದಿದ್ದಾರೆ. ಹಾಸನ, ಮಂಡ್ಯದಲ್ಲಿ ಕಡ್ಡಾಯ ಶೌಚಾಲಯ ಮಾಡಿ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ಕರ್ತವ್ಯ ನಿಷ್ಠೆಗೆ ಇನ್ನೊಂದು ಹೆಸರೇ ರೋಹಿಣಿ ಸಿಂಧೂರಿ ಎಂಬಂತೆ ಜನಮನ್ನಣೆ ಗಳಿಸಿದ್ದಾರೆ.
ಇತ್ತೀಚಿಗಷ್ಟೇ ರೋಹಿಣಿ ಅವರು ಕುಟುಂಬದ ಜೊತೆ ಹೊರಗೆ ಹೋಗುವಾಗ ಕಾರ್‌ನ ಟಯರ್ ಪಂಚರ್ ಆಗಿದ ವಿಡಿಯೋ ಹರಿದಾಡಿತ್ತು.

ಆಗ ರೋಹಿಣಿ ಅವರು ಕಾರ್‌ಗೆ ಜಾಕ್ ಹಾಕುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈ’ರೆಲ್ ಆಗಿತ್ತು. ವಿಡಿಯೋ ನೋಡಿ ನೆಟ್ಟಿಗರು ಡಿಸಿಯವರನ್ನು ಹಾಡಿ ಹೊಗಳಿದ್ರು. ಇನ್ನು ರೋಹಿಣಿ ಅವರು ಇಲ್ಲಿಯವರೆಗೆ ಸುಮಾರು 80ರಿಂದ 90 ಲಕ್ಷ ಸಂಪಾದನೆ ಮಾಡಿದ್ದಾರೆ. ಖಾರ ನುಡಿ ನೇರ ವ್ಯಕ್ತಿತ್ವ ದಿಟ್ಟ ನಿರ್ಧಾರಗಳಿಂದ ಪ್ರಸಿದ್ಧಿ ಪಡೆದಿರುವ ಡಿಸಿ ರೋಹಣಿ ಸಿಂಧೂರಿ ಬಗ್ಗೆ ನಿವೇನ್ ಹೇಳ್ತೀರಾ? ಮೈಸೂರಿನಲ್ಲಿ ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸ್ತೀರಾ? ನಿಮ್ಮ ಅಭಿಪ್ರಾಯವೇನು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •