ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಪಿಂಚಣಿ ಯೋಜನೆ ಕೂಡ ಒಂದು, ಹೌದು ವಯಸ್ಸಾದವರಿಗೆ ದುಡಿಯಲು ಸಾಧ್ಯವಿಲ್ಲ ಮತ್ತು ಅವರು ತಮ್ಮ ಅಗತ್ಯತೆಗಳನ್ನ ಪೂರೈಕೆ ಮಾಡಿಕೊಳ್ಳಲು ಇತರರ ನೆರವನ್ನ ಪಡೆಯಬೇಕಾಗುತ್ತದೆ. ಶ್ರೀಮಂತರು ಹೇಗಾದರೂ ಜೀವನವನ್ನ ಮಾಡಬಹುದು, ಆದರೆ ಬಡವರಿಗೆ ವಯಸ್ಸಾದ ಸಮಯದಲ್ಲಿ ಅವರನ್ನ ನೋಡಿಕೊಳ್ಳಲು ಕೆಲವೊಮ್ಮೆ ಯಾರು ಇರುವುದಿಲ್ಲ ಮತ್ತು ಅವರ ಆರೋಗ್ಯಕ್ಕೆ ಬೇಕಾದ ಹಣವನ್ನ ಅವರಿಂದ ಹೊಂದಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಇನ್ನು ವೃದ್ದರು ಇಂತಹ ಕಷ್ಟಗಳಿಗೆ ಒಳಗಾಗಬಾರದು ಎಂದು ನಮ್ಮ ಕೇಂದ್ರ ಸರ್ಕಾರ ಬಹಳ ವರ್ಷಗಳಿಂದ ವೃದ್ಧರಿಗೆ ಪಿಂಚಣಿಯನ್ನ ಕೊಡುತ್ತಿದೆ.

ದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಅದೆಷ್ಟೋ ವೃದ್ದರು ಕೇಂದ್ರ ಸರ್ಕಾರ ಪಿಂಚಣಿ ಯೋಜನೆಯಿಂದ ತಮ್ಮ ಅಗತ್ಯತೆಗಳನ್ನ ಪೂರೈಕೆ ಮಾಡಿಕೊಳ್ಳುತ್ತಿದ್ದು ಅವರು ಯಾರಿಗೂ ಹೊರೆಯಾಗದೆ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಹಲವು ರೀತಿಯ ಪಿಂಚಣಿ ಯೋಜನೆಗಳು ಜಾರಿಯಲ್ಲಿ ಇದ್ದು ಜನರು ವಿವಿಧ ಮೂಲಗಳಿಂದ ಪಿಂಚಣಿ ಸೌಲಭ್ಯವನ್ನ ಪಡೆಯಬಹುದಾಗಿದೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ ಕೇಂದ್ರ ಸರ್ಕಾರ ದೇಶದಲ್ಲಿ ಪಿಂಚಣಿಯನ್ನ ಪಡೆಯುತ್ತಿರುವವರಿಗೆ ಮತ್ತು ಮುಂದಿನ ದಿನಗಳಲ್ಲಿ ಪಿಂಚಣಿ ಪಡೆಯುವ ಎಲ್ಲಾ ಜನರಿಗೆ ಒಂದು ಆದೇಶವನ್ನ ನೀಡಿದ್ದು ಜನರು ಆದಷ್ಟು ಬೇಗ ಈ ಕೆಲಸವನ್ನ ಮಾಡಲಿಲ್ಲ ಅಂದರೆ ಅವರಿಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಪಿಂಚಣಿ ಸಿಗುವುದಿಲ್ಲ.

ವೃದ್ದಾಪ್ಯ-ವೇತನ

ಹಾಗಾದರೆ ಕೇಂದ್ರ ಸರ್ಕಾರ ನೀಡಿರುವ ಆ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ದೇಶದಲ್ಲಿ ಪಿಂಚಣಿಯನ್ನ ಪಡೆಯುತ್ತಿರುವವರು ಡಿಸೆಂಬರ್ 30 ರ ತಿಂಗಳ ಒಳಗಾಗಿ ತಮ್ಮ ಜೀವನ ಪ್ರಮಾಣವನ್ನ ಪತ್ರವನ್ನ ಬ್ಯಾಂಕು ಅಥವಾ ನೀವು ನೀವು ಪಿಂಚಣಿ ಪಡೆಯುವ ಸಂಸ್ಥೆಗೆ ಕೊಡಬೇಕು ಮತ್ತು ನೀವು ನಿಮ್ಮ ಜೀವನ ಪ್ರಮಾಣ ಪತ್ರವನ್ನ ಕೊಡದೆ ಇದ್ದ ಪಕ್ಷದಲ್ಲಿ ನಿಮಗೆ ಮುಂದಿನ ದಿನಗಳಲ್ಲಿ ಪಿಂಚಣಿ ಹಣ ಸಿಗುವುದಿಲ್ಲ.

ಇನ್ನು ಪಿಂಚಣಿದಾರರು ಬ್ಯಾಂಕ್ ಅಥವಾ ಆನ್ಲೈನ್ ಮೂಲಕ ಕೂಡ ತಮ್ಮ ಜೀವನ ಪ್ರಮಾಣವನ್ನ ಪತ್ರವನ್ನ ಸಲ್ಲಿಸಬಹುದಾಗಿದೆ. ಇನ್ನು ದೇಶದಲ್ಲಿ ಕರೋನ ಆತಂತಕದ ಹಿನ್ನಲೆಯನ್ನ ದೇಶದ ಪ್ರತಿಯೊಬ್ಬ ಪಿಂಚಣಿದಾರನು ತಮ್ಮ ಪಿಂಚಣಿ ಖಾತೆಗಾಗಿ ಜೀವನ ಪ್ರಮಾಣ ಪತ್ರವನ್ನ ನವೀಕರಣ ಮಾಡುವುದು ಅತ್ಯವಶ್ಯಕವಾಗಿದೆ. ಇನ್ನು ಪಿಂಚಣಿ ಖಾತೆ ಹೊಂದಿರುವ ಯಾವುದೇ ಖಾತೆಗೆ ಹೋಗಿ ತಮ್ಮ ಜೀವನ ಪ್ರಮಾಣ ಪತ್ರವನ್ನ ಸಲ್ಲಿಸಬಹುದಾಗಿದೆ ಮತ್ತು ಈ ಪ್ರಮಾಣ ಪತ್ರವನ್ನ ಬ್ಯಾಂಕುಗಳ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು ಸಲ್ಲಿಸಬಹುದಾಗಿದೆ.

ಪಿಂಚಣಿ ಅನ್ನುವುದು ಪ್ರತಿಯೊಬ್ಬರಿಗೂ ಅತ್ಯಾವಶ್ಯವಾಗಿ ಬೇಕೇ ಬೇಕು, ಆದರೆ ಸರ್ಕಾರ ಈ ಯೋಜನೆ ದುರುಪಯೋಗ ಆಗಬಾರದು ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿಯಮವನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈಗಾಗಲೇ ಪಿಂಚಣಿ ಪಡೆಯುತ್ತಿರುವವರು ಮತ್ತು ಮುಂದಿನ ದಿನಗಳಲ್ಲಿ ಪಿಂಚಣಿ ಪಡೆಯುವವರು ಈ ಮಾಹಿತಿಯನ್ನ ತಿಳಿದುಕೊಂಡಿರುವುದು ಅವಶ್ಯಕವಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ದೇಶದಲ್ಲಿ ಪಿಂಚಣಿ ಪಡೆಯುವ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •