ಬೆಂಗಳೂರು: ನಟ, ನಟಿಯರಿಗೆ ಫೋಟೋ ಶೂಟ್ ಎಂದರೆ ಹಬ್ಬವಿದ್ದಂತೆ. ಹಲವರು ವಿವಿಧ ರೀತಿಯ, ಇನ್ನೂ ಹಲವರು ಅಚ್ಚರಿ ಪಡುವ ರೀತಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ರಾಜಕುಮಾರ ಸಿನಿಮಾ ಮೂಲಕ ಪರಿಚಿತರಾಗಿರುವ ತಮಿಳು ನಟಿ ಪ್ರಿಯಾ ಆನಂದ್ ಫೋಟೋ ತಮ್ಮ ವಿಭಿನ್ನ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ.

ರಾಜಕುಮಾರ ಸಿನಿಮಾ ಬಳಿಕ ಜೇಮ್ಸ್ ಸಿನಿಮಾ ಮೂಲಕ ಪುನೀತ್ ರಾಜ್‍ಕುಮಾರ್ ಜೊತೆಗೆ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಜೇಮ್ಸ್ ಚಿತ್ರೀಕರಣ ಭರದಿಂದ ಸಾಗಿದ್ದು, ಅಪ್ಪು, ಅನುಪ್ರಭಾಕರ್, ಪ್ರಿಯಾ ಆನಂದ್ ಸೇರಿದಂತೆ ಚಿತ್ರತಂಡ ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದೆ. ಇತ್ತೀಚೆಗೆ ಬಳ್ಳಾರಿಯ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಪಸಿದ್ದಾರೆ.

ಜೇಮ್ಸ್ ಮಾತ್ರವಲ್ಲದೆ ಪ್ರಿಯಾ ಆನಂದ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಮಾತ್ರವಲ್ಲದೆ ಶಿವರಾಜ್‍ಕುಮಾರ್ ಅವರ ಆರ್‍ಡಿಎಕ್ಸ್ ಸಿನಿಮಾಗೆ ಸಹ ಆಯ್ಕೆಯಾಗಿದ್ದಾರೆ.

ಇದೀಗ ಎರಡು ಸಾವಿರ ರೂ.ಗಳ ಗರಿ ಗರಿ ನೋಟುಗಳ ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ. ಅಂದಹಾಗೆ ಈ ಫೋಟೋಗಳನ್ನು ಲಾಕ್‍ಡೌನ್ ವೇಳೆ ಹಿಂದಿಯ ‘ಎ ಸಿಂಪಲ್ ಮರ್ಡರ್ ‘ ವೆಬ್ ಸಿರೀಸ್ ಚಿತ್ರೀಕರಣದ ವೇಳೆ ತೆಗೆಯಲಾಗಿದೆ ಎನ್ನಲಾಗಿದೆ.

ಜೇಮ್ಸ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಈ ಹಿಂದೆ ರಾಜಕುಮಾರ ಬೆಡಗಿ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮೂಲಕ ಅಪ್ಪು ಜೊತೆ ಎರಡನೇ ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದರು. ಈ ಮೂಲಕ ಕನ್ನಡದಲ್ಲಿ ನಾಲ್ಕನೇ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಜೇಮ್ಸ್ ಚಿತ್ರ ನಿರ್ದೇಶಿಸುತ್ತಿದ್ದು, ಅನು ಪ್ರಭಾಕರ್, ತೆಲುಗು ನಟ ಆದಿತ್ಯ ಮೆನನ್ ಜೇಮ್ಸ್ ಚಿತ್ರ ತಂಡವನ್ನು ಸೇರಿರುವುದು ಕುತೂಹಲ ಕೆರಳಿಸಿದೆ. ಯಾವ ರೀತಿ ಪಾತ್ರ ನಿರ್ವಹಿಸಲಿದ್ದಾರೆ, ಚಿತ್ರ ಯಾವ ರೀತಿ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!