ರಾಧಿಕಾ ಕುಮಾರಸ್ವಾಮಿ ಅವರು ಮೊದಲಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ ಮೊದಲು ಕುಮಾರಸ್ವಾಮಿ ಅವರನ್ನು ಮದುವೆಯಾಗಿದ್ದಾಗ ಸುದ್ದಿಯಾಗಿದ್ದರು. ಮತ್ತೆ ಸಿನಿಮಾ ರಂಗಕ್ಕೆ ರೀ ಎಂಟ್ರಿ ಕೊಟ್ಟಾಗ ಬಾರಿ ಸುದ್ದಿಯಾಗಿತ್ತು ಹೀಗೆ ಒಂದಲ್ಲ ಒಂದು ವಿಷಯದಲ್ಲಿ ರಾಧಿಕಾ ಕುಮಾರಸ್ವಾಮಿಯವರು ಸುದ್ದಿಯಾಗುತ್ತಲೆ ಇರುತ್ತಾರೆ‌. ಇದೀಗಾ 2021 ರಲ್ಲಿ ಬಾರಿ ದೊಡ್ಡ ಪ್ರಕರಣದಲ್ಲಿ ಸಿಲುಕಿ ರಾಧಿಕಾ ಅವರು ಮತ್ತೆ ಸುದ್ದಿಯಾಗುವುದರ ಮೂಲಕ ಮತ್ತೆ ವಾಪಸ್ ಬಂದಿದ್ದಾರೆ. ಯುವರಾಜ್ ಸ್ವಾಮಿ ಎಂಬ ವ್ಯಕ್ತಿ ರಾಧಿಕಾ ಕುಮಾರಸ್ವಾಮಿ ಅವರ ಮನೆಯ ಜ್ಯೋತಿಷ್ಯದವರು ಅವರು ಹೇಳಿದಂತೆ ಆಗುತ್ತದೆ ಅಂತ ರಾಧಿಕಾ ಕುಮಾರಸ್ವಾಮಿ ಅವರು ಸುಮಾರು 17 ವರ್ಷದಿಂದ ನಂಬಿಕೆ ಇಟ್ಟಿದ್ದರು ಆದರೆ ಈಗ ಆರೆಸ್ಸೆಸ್ ಮುಖಂಡ ಮತ್ತು ಬಿಜೆಪಿಯ ಮುಖಂಡ ಅಂತ ಎಲ್ಲರ ಬಳಿ ಹೇಳಿಕೊಂಡು ಹಣವನ್ನು ವಸೂಲಿ ಮಾಡುತ್ತಿದ್ದ ಅಂತ ಇದೀಗ ಪೊಲೀಸರು ಬಂಧಿಸಿದ್ದಾರೆ.

ಹಾಗೂ ಮುಖ್ಯವಾಗಿ ರಾಧಿಕಾ ಕುಮಾರಸ್ವಾಮಿ ಅವರ ಕಡೆಯಿಂದ ಕೋಟ್ಯಂತರ ರೂಪಾಯಿಗಳ ಹಣ ವರ್ಗಾವಣೆ ಆಗಿದೆ ಎಂಬುದಕ್ಕೆ ರಾಧಿಕಾ ಅವರನ್ನು ವಿಚಾರಣೆಗೆ ಕರೆ ತಂದಿದ್ದು ಇದೀಗಾ ಇದರ ಬಗ್ಗೆ ಮಾತನಾಡಿರುವ ಯುವರಾಜ್ ಸ್ವಾಮಿಯ ಪತ್ನಿ ಈ ರೀತಿ ವಿವರಿಸಿದ್ದಾರೆ ನನ್ನ ಪತಿಯದು ಏನು ತಪ್ಪಿಲ್ಲ. ರಾಜಕೀಯ ಒತ್ತಡದಿಂದ ಈ ರೀತಿ ಅವರನ್ನು ಬಂಧಿಸಿದ್ದಾರೆ ಅವರು ಹೊರಗಡೆ ಬಂದ ನಂತರ ಎಲ್ಲಾರ ಬಣ್ಣವನ್ನು ಸಾಕ್ಷ್ಯ ಸಮೇತ ಬಯಲು ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.ವಿವರ ಮನೆ ರೈಡ್ ಮಾಡಿದಾಗ 91 ಕೋಟಿ ಮೌಲ್ಯದ ಚೆಕ್ ಗಳು ದೊರೆತಿದೆ ಮತ್ತು ಕೆಲವು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಕೂಡ ಯುವರಾಜ್ ಸ್ವಾಮಿಯ ಮೇಲೆ ವಂಚನೆ ಮಾಡಿರುವ ಆರೋಪಗಳು ಇದ್ದವು.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •