ನಟಿ ಪ್ರೇಮ

ಬಹಳ ದಿನಗಳ ನಂತರ ತನ್ನ ಲವರ್ ಬಗ್ಗೆ ಹೇಳಿಕೊಂಡ ನಟಿ ಪ್ರೇಮ.. ಯಾರದು ಗೊತ್ತಾ?

Home

ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿಯರು ಅನೇಕರಿದ್ದರು. 90ರ ದಶಕದ ಫೇವರೇಟ್ ಹಿರೋಯಿನ್ಸ್ ಅಂತ ಕರೆಸಿಕೊಳ್ಳುವ ಅನೇಕ ನಟಿಯರು ಇಂದಿಗೂ ಸಹ ಸಿನಿಮಾದಲ್ಲಿ ಆ್ಯಕ್ಟೀವ್ ಇದ್ದಾರೆ. ಆಗ ತೆರೆ ಮೇಲೆ ಬಂದು ಮೋಡಿ ಮಾಡಿದ್ದ ಮಾಲಾಶ್ರೀ ಅವರು ಶೃತಿ ಅವರು ಅನು ಪ್ರಭಾಕರ್ ಅವರು ಸುಧಾರಾಣಿ ಅವರು ರಂಭಾ ಅವರು ಪ್ರೇಮ ಅವರು ಹೀಗೆ ಸಾಕಷ್ಟು ನಟಿಯರು ಈಗಲೂ ಸಹ ಎಂಭತ್ತು ತೊಂಭತ್ತರ ದಶಕದ ಜನರೇಷನ್ ಅವರಿಗೆ ಫೇವರೇಟ್ ಅನ್ನಬಹುದು.

ಇನ್ನೂ ಕೆಲವರು ವಯಕ್ತಿಕ ಕಾರಣಗಳಿಗಾಗಿ ಚಿತ್ರರಂಗದಿಂದ ದೂರ ಹೋಗಿ ಮತ್ತೆ ಕಂಬ್ಯಾಕ್ ಮಾಡಿ ಸಿನಿಮಾರಂಗದಲ್ಲಿಯೇ ಬದುಕು ಕಟ್ಟಿಕೊಂಡವರು ಇದ್ದಾರೆ.. ಅಂತಹ ಅನೇಕ ಕಮ್ ಬ್ಯಾಕ್ ಕ್ವೀನ್ಸ್​​​ಗಳಲ್ಲಿ ಪ್ರೇಮ ಅವರು ಕೂಡ ಒಬ್ಬರು ಸದ್ಯ ಪ್ರೇಮ ಅವರು ಒಂದು ಹೊಸ ಸಮಾಚಾರವನ್ನು ಹಂಚಿಕೊಂಡಿದ್ದಾರೆ. ನಟಿ ಪ್ರೇಮ ಹಂಚಿಕೊಂಡ ಸುದ್ದಿ ಏನು ಗೊತ್ತಾ? ಪ್ರೇಮ ಅವರ ಲವರ್ ಬಗ್ಗೆ ಸದ್ಯ ಪ್ರೇಮ ಹೇಳಿಕೊಂಡಿದ್ದಾರೆ. ಹೌದು ಪ್ರೇಮ ಅವರ ಲವರ್ ಬಗ್ಗೆ ಖುದ್ದು ಪ್ರೇಮ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಪ್ರೇಮ ಅವರ ಲವರ್ ಯಾರು ಗೊತ್ತಾ ಹೇಳ್ತೀವಿ ಕೇಳಿ.

Prema: ಪ್ರೇಮಾರ ಎರಡನೇ ಮದುವೆ ಸುದ್ದಿ: ಸ್ಪಷ್ಟನೆ ಕೊಟ್ಟ ನಟಿ..!

ಪ್ರೇಮ ಅವರ ವೈಯಕ್ತಿ ಬದುಕಿನ ಬಗ್ಗೆ ಗೊತ್ತೇಯಿದೆ. ಆದರೂ ಅವರಿಗೆ ಹುಷಾರಿಲ್ಲ, ಆರೋಗ್ಯ ಹಾಳಾಗಿದೆ ಹೀಗೆ ಒಂದಷ್ಟು ಗಾಸಿಪ್​ಗಳು ಹರಿದಾಡ್ತಾನೇ ಇತ್ತು. ಈ ಬಗ್ಗೆ ಎಲ್ಲೂ ಕೂಡ ಪ್ರೇಮ ಅವರು ತುಟಿ ಬಿಚ್ಚಲಿಲ್ಲ, ಆದ್ರೆ ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರೇಮ ಅವರೇ ಹೇಳಿಕೊಂಡಿದ್ರು, ಇದೆಲ್ಲ ಸುಳ್ಳು ಸುದ್ದಿ. ಇದೀಗ ವೆಡ್ಡಿಂಗ್ ಗಿಫ್ಟ್ ಎನ್ನುವ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದೇ ಸಿನಿಮಾದ ಕುರಿತು ಮಾತನಾಡುವಾಗ ತಮ್ಮ ನಿಜ ಜೀವನದ ಲವರ್ ಯಾರು ಅಂತ ಪ್ರೇಮ ಹೇಳಿದ್ದಾರೆ. ನಾನು ಚಿತ್ರರಂಗದಿಂದ ರಿಟೈರ್ ಆಗಿಲ್ಲ.. ಬ್ರೇಕ್ ಪಡೆದಿದ್ದೆ ಅಷ್ಟೇ.. ಆನಂತರ ಒಳ್ಳೆ ಕತೆ ಸಿಕಿರಲಿಲ್ಲ.. ಆದರೆ ಈಗ ವೆಡ್ಡಿಂಗ್ ಗಿಫ್ಟ್ ಸಿನಿಮಾ ಒಪ್ಪಿಕೊಂಡಿದ್ದೀನಿ.. ಇದೊಂದು ವಿಭಿನ್ನ ಕತೆ ಇದೆ.. ನಾನು ಮಾಡೋದೇ ಆತರ..

ನಟಿ ಪ್ರೇಮ ಪ್ರೇಮಿಸಿದ್ದು, ಈಗಲೂ ಪ್ರೀತಿಸುತ್ತಿರುವ ಲವರ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ..?

ಪಾತ್ರಗಳು ನನಗೂ ಇಷ್ಟವಾಗಬೇಕು ಪ್ರೇಕ್ಷಕರಿಗೂ ಇಷ್ಟವಾಗಬೇಕು.. ಸಾಕಷ್ಟು ಜನ ಹಬ್ಬಿಸಿಕೊಂಡು ಬರ್ತಾ ಇದ್ದಾರೆ.. ಪ್ರೇಮ ಅವರು ಮಾಡಲ್ಲ.. ಸಿನಿಮಾ ಒಪ್ಪಿಕೊಳ್ಳಲ್ಲ ಅಂತ.. ಆದರೆ ಅದು ನಿಜ ಅಲ್ಲ.. ನನಗೆ ಆ ಪಾತ್ರದ ಬಗ್ಗೆ ತೃಪ್ತಿ ಇರಬೇಕು.. ಸಿನಿಮಾ ಮುಗಿದ ನಂತರ ನಾನು ಏನೋ ಒಂದು ಮಾಡಿ ಬಂದಿದ್ದೀನಿ ಅಂತ ಅನಿಸಬೇಕು.. ಸಿನಿಮಾ ಅನ್ನೋದು ಖುಷಿ ಇರಬೇಕು.. ಪಾತ್ರ ತೃಪ್ತಿ ತರಬೇಕು.. ಇವಳು ಏನೋ ಮಾಡುದ್ಳು ಅಂತ ಜನ ಹೇಳಬಾರದು ಅದೇ ನನ್ನ ಉದ್ದೇಶ.. ಇನ್ನು ನೀವೆಲ್ಲಾ ನನ್ನ ಲವರ್ ಯಾರು ಅಂತ ಕೇಳಬಹುದು.. ಆಗ ನಾನು ಹೇಳೋದೆ ನನ್ನ ಲವರ್ ಯಾವಗಲೂ ಕೂಡ ಕ್ಯಾಮರಾ.. ಹೌದು ಕ್ಯಾಮರಾನೇ ನನ್ನ ಲವರ್.. ಐ ಲವ್ ಕ್ಯಾಮರಾ.. ಕ್ಯಾಮರಾ ಮುಂದೆ ನಿಂತರೆ ಪ್ರೇಕ್ಷಕರು ನನ್ನನ್ನು ನೋಡ್ತಾ ಇದ್ದಾರೆ ಅಂತ ಅನಿಸ್ತಾ ಇರುತ್ತದೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...