ದಶಕಗಳ ಕಾಲ ಚಿತ್ರರಂಗವನ್ನ ಆಳಿದ ನಟಿ ಪ್ರೇಮಾ. 1995ರಲ್ಲಿ ಬಿಡುಗಡೆಯಾದ ಸವ್ಯಸಾಚಿ ಚಿತ್ರದಿಂದ ಶುರುವಾದ ಪ್ರೇಮಾ ಜರ್ನಿ 2009ರ ವರೆಗೂ ಎಲ್ಲಿಯೂ ನಿಲ್ಲದೇ ಸಾಗಿತ್ತು. ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿ ಮಿಂಚಿದ್ದರು. ಉತ್ತುಂಗದಲ್ಲೇ ಇದ್ದ ಪ್ರೇಮಾ 2009ರ ಬಳಿಕ ದಿಢೀರ್ ಅಂತ ಬೆಳ್ಳಿತೆರೆಯಿಂದ ದೂರವಾದರು.

ಇದೆಲ್ಲ ಆದ ಹಲವು ವರ್ಷದ ನಂತರ ವಿಚ್ಛೇದನ ವಿಚಾರದಲ್ಲಿ ಪ್ರೇಮಾ ಮತ್ತೆ ಸುದ್ದಿಯಾಗ್ತಾರೆ. ಅದಕ್ಕೆ ನಿಜವಾದ ಕಾರಣ ಸಿಗಲ್ಲ. ಹೀಗಾಗಿ, ಈ ವಿಷ್ಯಗಳಿಗೆಲ್ಲಾ ಉತ್ತರ ಸಿಗಬಹುದು ಎಂಬ ಕಾರಣಕ್ಕೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೇಮಾ ಎಪಿಸೋಡ್ ಭಾರಿ ಕುತೂಹಲ ಹುಟ್ಟುಹಾಕಿತ್ತು. ಆದ್ರೆ, ಪ್ರೇಮಾ ಅವರು ಅಲ್ಲಿಯೂ ಸ್ಪಷ್ಟವಾಗಿ ಏನೂ ಹೇಳಿಲ್ಲ. ಆದರೂ ಅವರ ಮಾತಲ್ಲಿ ಕೆಲವೊಂದು ಅರ್ಥವಾಯಿತು. ಏನದು? ಮುಂದೆ ಓದಿ…..

ಪ್ರೇಮಾ ವೈವಾಹಿಕ ಜೀವನದ ಬಗ್ಗೆ ನಿರೂಪಕ ರಮೇಶ್ ಪ್ರಶ್ನಿಸಿದರು. ಮದುವೆ ಆಗುತ್ತೆ, ಅಲ್ಲಿಂದ ಜೀವನ ಹೇಗಿತ್ತು, ಹೇಗಿದೆ, ಈಗ ಹೇಗೆ ನಡೆಯುತ್ತಿದೆ ಎಂದು ಕೇಳಿದ್ದಕ್ಕೆ ಕೆಲವು ಸೆಕೆಂಡ್ ಗಳ ಕಾಲ ಮೌನವೇ ಅವರ ಉತ್ತರವಾಗಿತ್ತು. ನಂತರ ‘ನೋ ಕಾಮೆಂಟ್ಸ್’ ಎಂದು ಹೇಳಿ ಮುಂದೆ ಹೋಗೋಣ ಎಂದು ಸೂಚಿಸಿದರು.

ಗಂಡ, ಮಗು ಇಲ್ಲ….ಸಮಯ ಬಂದಾಗ ಹೇಳ್ತೀನಿ…90ರ ದಶಕದ ಖ್ಯಾತ ನಟಿ ಪ್ರೇಮಾ ಅವರ ಸಿನಿ ಜರ್ನಿ ಮುಂದುವರೆಯಬೇಕಾದರೆ 'ಓಂ' ಚಿತ್ರ ಕಾರಣವಂತೆ! ಯಾಕೆ ಗೊತ್ತಾ? - News 48 Daily

”ನನಗೆ ಮಗುನೂ ಇಲ್ಲ, ಗಂಡನೂ ಇಲ್ಲ. ಸಮಯ ಬಂದಾಗ ನನ್ನ ಅಭಿಮಾನಿಗಳಿಗೆ ನಾನೇ ಹೇಳ್ತೀನಿ. ಆದರೂ ನನ್ನ ಅಭಿಮಾನಿಗಳನ್ನ ಮಿಸ್ ಮಾಡಿಕೊಂಡಿದ್ದೀನಿ. ನನ್ನ ಬಗ್ಗೆ ಯಾಕೆ ವದಂತಿ ಹಬ್ಬಿಸಿದ್ದಾರೋ, ಅವರಿಗೆ ನಾನು ಏನೂ ಮಾಡಿಲ್ಲ. ನನ್ನ ಬಗ್ಗೆ ಯಾಕೆ ಹೊಟ್ಟೆ ಉರ್ಕೊಂಡಿದ್ದಾರೋ ಗೊತ್ತಿಲ್ಲ”

”ಇಷ್ಟು ವರ್ಷ ಸಿನಿಮಾಗಳಲ್ಲಿ ನಟಿಸಿಲ್ಲ. ಅದಕ್ಕೆ ಕಾರಣ ನನಗೆ ಚಾಲೆಂಜಿಂಗ್ ಆಗಿದ್ದ ಪಾತ್ರಗಳು ಸಿಕ್ಕಿಲ್ಲ. ಅದನ್ನ ಬಿಟ್ಟರೇ ಬೇರೇ ಏನೂ ಇಲ್ಲ. ರೂಮರ್ಸ್ ಬಗ್ಗೆ ನಂಬಬೇಡಿ. ಏನೇ ಇದ್ದರೂ ನೇರವಾಗಿ ಬಂದು ನಾನೇ ಹೇಳುತ್ತೇನೆ. ಇಷ್ಟು ದಿನ ನಿಮ್ಮನ್ನು ರಂಜಿಸಲು ಸಾಧ್ಯವಾಗಿಲ್ಲ. ಒಳ್ಳೆ ಪಾತ್ರಗಳು ಸಿಕ್ಕರೇ ಮತ್ತೆ ನಟಿಸುತ್ತೇನೆ. ಅದಕ್ಕೆ ನಿಮ್ಮ ಕ್ಷಮೆ ಇರಲಿ” ಎಂದು ಪ್ರೇಮಾ ಕೇಳಿಕೊಂಡರು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •