ವರದಕ್ಷಿಣೆ ಭೂತ ನಮ್ಮ ದೇಶದಿಂದ ಕಿತ್ತೆಸೆಯುವುದು ಇನ್ನುವರೆಗೂ ಕಷ್ಟಸಾಧ್ಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ದೇಶ, ಜಗತ್ತು ಎಷ್ಟೇ ಮುಂದುವರಿದರೂ ವರದಕ್ಷಿಣೆಗಾಗಿ ಅಮಾಯಕ ಹುಡುಗಿಯರ ಜೀವ ಮಾತ್ರ ಹೋಗುವುದು ಇನ್ನೂ ನಿಂತಿಲ್ಲ. ಭಾರತದ ಕಾನೂನು ಮಾತ್ರ ವರದಕ್ಷಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಇವೆರಡು ಕಾನೂನು ಬಾಹಿರವಾಗಿದೆ ಎಂದು ಹೇಳುತ್ತದೆ. ಇಷ್ಟಾದರೂ ಜನರು ಈ ಎರಡು ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಎಷ್ಟೋ ಬಡತನದಲ್ಲಿರುವ ಕುಟುಂಬಗಳು ಮತ್ತು ಜೀವಗಳು ಸರ್ವನಾಶವಾಗಿವೆ. ವರದಕ್ಷಣೆಗೆ ಸಂಬಂಧಿಸಿದಂತೆ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪಂಜಾಬ್ ರಾಜ್ಯದ ಗುರುದಾಸ್ಪುರ್ ನಲ್ಲಿ ನಡೆದ ಘಟನೆ ನಿಜಕ್ಕೂ ಮನಕಲಕುವ ಘಟನೆಯಾಗಿದೆ. ಇಲ್ಲಿ ಒಬ್ಬಳು ಮಹಿಳೆ ಮದುವೆಯಾದ ನಂತರ 8 ತಿಂಗಳಿಂದ ಗಂಡನ ಮನೆಯಲ್ಲಿ ಇದ್ದಳು. ಮೊದಮೊದಲು ಎಲ್ಲವೂ ಸರಿಯಾಗಿಯೇ ನಡೆದಿತ್ತು. ನಂತರ ಮಾತ್ರ ವರದಕ್ಷಿಣೆಯ ಕಾರಣದಿಂದ ಆಕೆಯನ್ನು ಪೀ ಡಿಸಲು ಶುರು ಮಾಡಿದರು.

Pregnant

ಊರಿನ ಸರಪಂಚರಾದ ಪ್ರೀತ್ ಸಿಂಗ್ ಅವರು ಹೇಳುವ ಪ್ರಕಾರ, ಅವರ ಅಂಕಲ್ ಹರಜೀತ್ ಸಿಂಗ್ ಅವರ ಮಗಳಾದ ಮನಜೀತ್ ಕೌರ್ ಳ ಮದುವೆ 22 ಅಕ್ಟೋಬರ್ 2020 ರಂದು ಸಮೀರ್ ಹೆಸರಿನ ಯುವಕನ ಜೊತೆಗೆ ನಡೆದಿತ್ತು. ಮದುವೆಯ ಸಂದರ್ಭದಲ್ಲಿ ಮನಜೀತ್ ತಂದೆ ತಮ್ಮ ಶಕ್ತಿ ಮೀರಿ ವರದಕ್ಷಿಣೆಯನ್ನು ನೀಡಿದ್ದರು. ವರದಕ್ಷಿಣೆ ತೆಗೆದುಕೊಂಡ ನಂತರವೇ ಯುವಕ ಮದುವೆಯ ತಯಾರಿ ಮಾಡಿದ್ದನು. ಅನಂತರ ತುಂಬಾ ವಿಜೃಂಭಣೆಯಿಂದ ಮದುವೆ ನೆರವೇರಿತ್ತು. ಮದುವೆಯಾದ ಕೆಲವು ತಿಂಗಳ ನಂತರ ಯುವತಿಗೆ ವರದಕ್ಷಣೆ ಕಾರಣದಿಂದ ಪೀಡಿಸಲು ಪ್ರಾರಂಭಿಸಿದರು. ಬಲ್ಲ ಮೂಲಗಳ ಪ್ರಕಾರ ಮದುವೆಯ ನಂತರವೇ ಮನಜೀತ್ ಳ ಗಂಡನ ಮನೆಯವರು ಆಕೆಯನ್ನು ವರದಕ್ಷಿಣೆಗಾಗಿ ಶೋಷಿಸಲು ಪ್ರಾರಂಭಿಸಿದ್ದರು.

ಮಹಿಳೆಯ ತಂದೆ-ತಾಯಿಗೆ ವರದಕ್ಷಿಣೆಯ ಸಲುವಾಗಿ ಅನೇಕ ಸಲ ಫೋನ್ ಮಾಡಿ ವರದಕ್ಷಣೆಯ ಡಿಮಾಂಡ್ ಮಾಡಿ ನೋವನ್ನು ಕೊಡುತ್ತಿದ್ದರು. ನಿಮಗೆ ಓದಿ ಆಶ್ಚರ್ಯವಾಗಬಹುದು ಕಾರಣ ಮನಜೀತಳನ್ನು ಮದುವೆಯಾದ ಹುಡುಗ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದನು.

ಸೈನ್ಯದಲ್ಲಿದ್ದರೂ ಹುಡುಗನು ತನ್ನ ಪತ್ನಿಗೆ ಮತ್ತು ಮಾವನಿಗೆ ವರದಕ್ಷಿಣೆಗಾಗಿ ಪೀಡಿಸಿದನು. ನೆರೆಹೊರೆಯವರ ಹೇಳಿಕೆಯ ಪ್ರಕಾರ ಎರಡು ದಿವಸಗಳ ಹಿಂದೆ ಮನಜೀತಳ ಪತಿ ಸೈನ್ಯದಿಂದ ಮನೆಗೆ ಬಂದಿದ್ದನು. ಮನೆಗೆ ಬಂದು ಹೆಂಡತಿಯ ಜೊತೆಗೆ ಜಗಳವಾಡಿ ಮತ್ತೆ ತನ್ನ ಸೇವೆಗೆ ಹೋಗಿದ್ದನು. ನಂತರ ಎರಡನೆಯ ದಿವಸ ಯುವತಿಯು ತಂದೆಗೆ ಫೋನ್ ಮಾಡಿ ಗಂಡನ ಮನೆಯವರು ತನ್ನನ್ನು ತುಂಬಾ ಹಿಂಸಿಸುತ್ತಿದ್ದಾರೆ ಎಂದು ಹೇಳಿದ್ದಳು. ಒಂದು ವೇಳೆ ವರದಕ್ಷಣೆ ಕೊಡದಿದ್ದರೆ ನನ್ನನ್ನು ಜೀವಸಹಿತ ಹೊಡೆಯುತ್ತಾರೆ ಎಂದೂ ಹೇಳಿದಳು. ಮಗಳ ಈ ಮಾತುಗಳನ್ನು ಕೇಳಿ ತಂದೆ ಶೀಘ್ರದಲ್ಲಿ ಮಗಳ ಮನೆಗೆ ಬಂದಿದ್ದರು.

ಮಗಳ ಮನೆಗೆ ಬಂದ ನಂತರ ಅಲ್ಲಿಯ ಮಗಳ ಅವಸ್ಥೆಯನ್ನು ನೋಡಿ ತಂದೆ ತಬ್ಬಿಬ್ಬಾದರು. ಏಕೆಂದರೆ ಮಗಳ ಮೃತದೇಹವನ್ನು ಮನೆಯ ಲಾಬಿಯಲ್ಲಿ ಇಟ್ಟು ಬಿಟ್ಟಿದ್ದರು. ಇದೆಲ್ಲವನ್ನು ನೋಡಿ ತಂದೆ ನಡೆದ ಘಟನೆಯ ವರದಿಯನ್ನು ಪೊಲೀಸರಿಗೆ ಒಪ್ಪಿಸಿದರು.

ಆನಂತರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಗಂಡನ ಮನೆಯವರ ಮೇಲೆ ಕೇಸು ದಾಖಲಿಸಿದರು. ಆರೋಪ ಪತ್ರ ದಾಖಲಿಸಿದ ಸಮಯದಿಂದಲೇ ಗಂಡನ ಮನೆಯ ಸದಸ್ಯರೆಲ್ಲರೂ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •