ಸ್ಯಾಂಡಲ್ ವುಡ್’ನ ಜನಪ್ರಿಯ ಹಾಸ್ಯನಟ ಕುರಿ ಪ್ರತಾಪ್ ಅವರು ಆರ್ ಸಿ ಬ್ರದರ್ಸ್ ಚಿತ್ರದಲ್ಲಿ ನಾಯಕನಾಗಿ ನಟಿಸಲು ಸಜ್ಜಾಗಿದ್ದಾರೆ. ಇದು ಒಡಹುಟ್ಟಿದವರ ಕಥೆಯಾಗಿದ್ದು, ಚಿತ್ರವನ್ನು ಪ್ರಕಾಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಪ್ರತಾಪ್ ತಬಲಾ ನಾಣಿಯೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರವು ಮಾರ್ಚ್’ನಲ್ಲಿ ಪ್ರಾರಂಭವಾಗಲಿದೆ ಎಂದು ಪ್ರತಾಪ್ ತಿಳಿಸಿದ್ದಾರೆ. ಚಿತ್ರದ ಕುರಿತು ಮಾತನಾಡಿರುವ ಪ್ರತಾಪ್, ತಬಲಾ ನಾಣಿ ಈ ಚಿತ್ರದಲ್ಲಿ ನನ್ನ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ನಾನಿಯ ಪಾತ್ರವು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿರುವ ಸಂದರ್ಭದಲ್ಲಿ ನಾನು ಮದುವೆಯಾಗುತ್ತೇನೆ. ಆದರೆ ಕೆಲವು ಕಾರಣಗಳಿಂದಾಗಿ ನನ್ನ ಹೆಂಡತಿಯನ್ನು ಭೇಟಿಯಾಗಲು ನನಗೆ ಅವಕಾಶವಾಗುವುದಿಲ್ಲ. ಹೀಗೆ ಕಥೆ ಸಾಗುತ್ತದೆ ಎಂದು ಚಿತ್ರದ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದ್ದಾರೆ.

ಕುರಿ ಪ್ರತಾಪ್

ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡಿರುವ ಪ್ರತಾಪ್, ನನಗೆ, ಎಲ್ಲಾ ಪಾತ್ರಗಳು ಒಂದೇ ಆಗಿರುತ್ತವೆ. ಏಕೆಂದರೆ ನಾಯಕರಾದ ನಂತರ ಹಾಸ್ಯನಟರು ಪೋಷಕ ಪಾತ್ರಗಳಿಂದ ದೂರವಿರುತ್ತಾರೆ. ಆದರೆ ನಾನು ಇದನ್ನು ಅನುಸರಿಸುವುದಿಲ್ಲ. ನಾನು ಸ್ಯಾಂಡಲ್ ವುಡ್ ಸ್ಟಾರ್’ಗಳೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಬಯಸುತ್ತೇನೆ. ಒಂದು ವೇಳೆ ನಾನು ಪ್ರಮುಖ ಪಾತ್ರಗಳನ್ನು ಮಾಡಿದರೆ ಅದು ಸಾಧ್ಯವಾಗುವುದಿಲ್ಲ” ಎಂದು ಪ್ರತಾಪ್ ಹೇಳಿದ್ದಾರೆ. ಪ್ರಸ್ತುತ ಪ್ರತಾಪ್ ಅವರು ‘ಪೊಗರು’ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಕುರಿ ಪ್ರತಾಪ್

ಪ್ರತಾಪ್ ಅವರು ಕುರಿ ಪ್ರತಾಪ್ ಎಂದೇ ಫೇಮಸ್. ಉದಯ ಟವಿಯಲ್ಲಿ ಪ್ರಸಾರವಾಗುತ್ತಿದ್ದ ಕುರಿ ಬಾಂಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೇಲೆ ಪ್ರತಾಪ್ ಅವರು ಕುರಿ ಪ್ರತಾಪ್ ಎಂದು ಜನಪ್ರಿಯರಾದರು. ಮಂಡ್ಯದಲ್ಲಿ ಜನಿಸಿದ ಪ್ರತಾಪ್ ಅವರು ಹಾಸ್ಯನಟರಾಗಿ ಜನಪ್ರಿಯತೆ ಪಡೆದಿದ್ದಾರೆ. 2007 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕುರಿ ಪ್ರತಾಪ್ ಅವರು ಅನಾಥರು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಆ ನಂತರ ನವಗ್ರಹ, ಮಿಸ್ಟರ್ ತೀರ್ಥ, ರಾಂಬೊ ಆಟೋ ರಾಜ, ವಿಕ್ಟರಿ, ಕೂಲ್ ಗಣೇಶ, ರಾಧನ ಗಂಡ, ಚಂಡ, ಬ್ರಹ್ಮ, ಅಗ್ರಜ, ಅಧ್ಯಕ್ಷ, ವಜ್ರಕಾಯ, ರಾಮ್ ಲೀಲಾ, ಮಿಸ್ಟರ್ ಪ್ರೇಮಿ, ರಾಕ್ಷಸಿ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಕುರಿ ಪ್ರತಾಪ್ ಅವರು ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಮಜಾ ಟಾಕೀಸ್ ಎಂಬ ಕಾರ್ಯಕ್ರಮದಲ್ಲಿ ಕಡ್ಲೆ ಪುರಿ ಪಾತ್ರದಲ್ಲಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ. ಯುವರತ್ನ ಚಿತ್ರದಲ್ಲಿಯೂ ಕುರಿ ಪ್ರತಾಪ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕುರಿ ಪ್ರತಾಪ್

ಇದು ತೆಲುಗು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. 2021ರಲ್ಲಿ ಬಿಡುಗಡೆಯಾಗುತ್ತಿರುವ ತ್ರಿಬಲ್ ರೈಡಿಂಗ್, ಸಖತ್ ಚಿತ್ರದಲ್ಲಿಯೂ ಕುರಿ ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್’ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಕುರಿ ಪ್ರತಾಪ್ ಅವರು ಟ್ರೋಫಿ ಗೆಲ್ಲದಿದ್ದರೂ, ವೀಕ್ಷಕರ ಮನಗೆದ್ದು ರನ್ನರ್ ಅಪ್ ಆದರು. ಜೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೊದಲನೇ ಸೀಸನ್’ನಲ್ಲಿಯೂ ಕುರಿ ಪ್ರತಾಪ್ ಭಾಗವಹಿಸಿದ್ದರು. ಇವರ ಜೊತೆ ಹಾಸ್ಯ ನಟ ಚಿಕ್ಕಣ್ಣ ಕೂಡ ಈ ಶೋನಲ್ಲಿ ಭಾಗವಹಿಸಿದ್ದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •