ಪ್ರಕಾಶ್‌ ರೈ ತಮ್ಮ ಅದ್ಭುತ ಅಭಿನಯದಿಂದ ಮನೆ ಮಾತಾಗಿರುವ ನಟ. ಕನ್ನಡ ಚಿತ್ರರಂಗದಿಂದ ಕೆರಿಯರ್‌ ಶುರು ಮಾಡಿ ತಮಿಳು ನಂತರ ಹಿಂದಿಯಲ್ಲೂ ನಟನಾ ಕೌಶ್ಯಲ್ಯದಿಂದ ಹೆಸರು ಮಾಡಿದ್ದಾರೆ.ಪಾಲಿಟಿಕ್ಸ್‌ಗೂ ಎಂಟ್ರಿಕೊಟ್ಟು ಏಲೆಕ್ಷನ್‌ನಲ್ಲಿ ಸ್ಪರ್ಧಿಸಿದ್ದರು. ತಮ್ಮ ರಾಜಕೀಯ ನಿಲುವಿಗೆ ಸಖತ್‌ ಟ್ರೋಲ್‌ ಆಗಿದ್ದಾರೆ ಕೂಡ. ಕನ್ನಡದ ಪ್ರಕಾಶ್‌ ರೈ ತಮಿಳಿನಲ್ಲಿ ಪ್ರಕಾಶ್‌ ರಾಜ್‌ ಎಂದೇ ಖ್ಯಾತಿಯಾಗಿತುವ ಇವರ ಬರ್ತ್ಡೇ ಇವತ್ತು. ಅವರ ಜೀವನದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ತಿಳಿಯೋಣ.

Prakash-Rai

26 ಮಾರ್ಚ್‌ 1965ರಲ್ಲಿ ಜನಿಸಿದ ಪ್ರಕಾಶ್‌ರಾಜ್‌ ನಟ ಜೊತೆಗೆ ಡೈರೆಕ್ಟರ್‌ ಹಾಗೂ ಪ್ರೋಡ್ಯೂಸರ್‌.1994ರಲ್ಲಿ ಮದುವೆಯಾಗಿದ್ದ ನಟಿ ಲಲಿತ ಕುಮಾರಿಯಿಂದ 2009ರಲ್ಲಿ ಡೈವರ್ಸ್‌ ಪಡೆದರು.2010ರಲ್ಲಿ ತಮಗಿಂತ 12 ವರ್ಷ ಕಿರಿಯ ಕೋರಿಯೊಗ್ರಾಫರ್‌ ಪೋನಿ ವರ್ಮಾರನ್ನು ವರಿಸಿದರು.
ಎರಡು ಮದುವೆಯಾಗಿರುವ ಇವರಿಗೆ 4 ಮಕ್ಕಳು. ಆದರೆ ಮೊದಲ ಪತ್ನಿಯ ಮಗ ಈಗ ಇಲ್ಲ.

Prakash-Rai

ರಂಗಭೂಮಿಯಲ್ಲಿ ಮೊದಲಿಗೆ ಕೆಲಸ ಮಾಡಲು ಶುರುಮಾಡಿ ನಂತರ ಟಿವಿ ಸಿರಿಯಲ್‌ಗಳಲ್ಲೂ ಕೆಲಸ ಮಾಡಿದ್ದಾರೆ. ನಂತರ ನಿಧಾನವಾಗಿ ಫಿಲ್ಮಂಗಳಲ್ಲಿ ಆ್ಯಕ್ಟಿಂಗ್ ಶುರುಮಾಡಿ ಫೇಮಸ್‌ ಆಗಿರುವ ಪ್ರಕಾಶ್‌ ರೈ ಕನ್ನಡ, ತಮಿಳು, ಮಲೆಯಾಳಿ, ಹಿಂದಿ ಮರಾಠಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಹಲವು ತರದ ರೋಲ್‌ಗಳನ್ನು ನಿಭಾಯಿಸಿದರೂ ವಿಲನ್‌ ಆಗಿ ಹೆಚ್ಚು ಛಾಪು ಮೂಡಿಸಿರುವ ಬಹುಭಾಷಾ ನಟ. ಅಭಿನಯಕ್ಕಾಗಿ ನ್ಯಾಷನಲ್‌ ಆವಾರ್ಡ್‌ ಪಡೆದಿದ್ದಾರೆ.ಫಿಲ್ಮಂ ಇಂಡಸ್ಟ್ರಿ ಅಲ್ಲಿ ಮ್ಯಾನೇಜರ್‌ ಹೊಂದಿರದ ಏಕೈಕ ನಟ.ಫೋನ್ ಕರೆಯಿದ ಹಿಡಿದು ಚಿತ್ರದ ಆಯ್ಕೆ, ಕಥೆ ಮತ್ತು ಶುಲ್ಕದವರೆಗೆ ಎಲ್ಲವನ್ನೂ ಅವರೇ ಮ್ಯಾನೇಜ್‌ ಮಾಡುವ ಪ್ರಕಾಶ್ ರಾಜ್ ಅವರ ಗಳಿಕೆಯ 20% ದಾನ ಮಾಡುತ್ತಾರಂತೆ.

Prakash-Rai

ಚಿತ್ರ ನಿರ್ಮಾಪಕರು ಪ್ರಕಾಶ್ ರಾಜ್ ಅವರು ಸಮಯಕ್ಕೆ ಚಿತ್ರೀಕರಣಕ್ಕೆ ಬರುವುದಿಲ್ಲ ಎಂದು ಆರೋಪಿಸಿದ್ದೂ ಇದೆ. ಈ ವಿಷಯದ ಬಗ್ಗೆ, ಯಾವುದೇ ಚಿತ್ರಕ್ಕೆ ಸಹಿ ಹಾಕುವ ಮೊದಲು, ಚಿತ್ರೀಕರಣಕ್ಕೆ ಹೋಗುವ ಸಮಯವನ್ನು ಮೊದಲೇ ಸ್ಪಷ್ಟಪಡಿಸುತ್ತೇನೆ ಎಂದು ಪ್ರಕಾಶ್ ರಾಜ್ ವಿವರಿಸುತ್ತಾರೆ. ಪ್ರಕಾಶ್ ರಾಜ್ ರಾತ್ರಿ 3 ಗಂಟೆಗೆ ಮಲಗಿ ಮತ್ತು ಬೆಳಿಗ್ಗೆ 9 ಗಂಟೆಗೆ ಏಳುವ ಅಭ್ಯಾಸ ಹೊಂದಿದ್ದಾರಂತೆ.

Prakash-Rai

ಅದ್ಭುತ ನಟನೆಯಿಂದ ಹೆಸರುವಾಸಿಯಾದ ಪ್ರಕಾಶ್ ರಾಜ್ ತೆಲಂಗಾಣದ ಹಿಂದುಳಿದ ಮಹಬೂಬ್‌ನಗರ ಜಿಲ್ಲೆಯ ಹಳ್ಳಿಯನ್ನು ದತ್ತು ಪಡೆದಿದ್ದಾರೆ.ತೆಲುಗು ಚಲನಚಿತ್ರ ನಿರ್ಮಾಪಕರು ಇವರನ್ನು ಚಿತ್ರರಂಗದಲ್ಲಿ ಕೆಟ್ಟ ವರ್ತನೆಗಾಗಿ 6 ಬಾರಿ ನಿಷೇಧಕ್ಕೊಳಾಗಿದ್ದರು. ಈ ಕುರಿತು ಪ್ರಕಾಶ್ ರಾಜ್ ಅವರು ತಮ್ಮದೇ ಆದ ನಿಯಮಗಳನ್ನು ಅನುಸರಿಸುತ್ತಾರೆ ಅದನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ನಿಷೇಧ ಕೆಲವು ದೊಡ್ಡ ನಾಯಕ ನಿರ್ಮಾಪಕರ ಪಿತೂರಿ ಎಂಬ ವರದಿಗಳು ಬಂದವು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

………………..
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •