ಹೊಳೆಯುವುದೆಲ್ಲ ಬಂಗಾರವಲ್ಲ ಎಂಬ ಗಾದೆ ಎಷ್ಟು ನಿಜವೋ ಕೆಟ್ಟ ಅಭ್ಯಾಸಗಳನು ಕೆಟ್ಟದನ್ನೆ ಮಾಡುವುದಿಲ್ಲ ಎನ್ನುವುದು ಕೂಡ ಅಷ್ಟೇ ನಿಜ. ಏಕೆಂದರೆ ಕೆಲವು ಕೆಟ್ಟ ಅಭ್ಯಾಸಗಳಿಂದ ಒಳ್ಳೆಯ ಫಲಿತಾಂಶಗಳು ಬರುತ್ತದೆ ಅಂತ ಈಗಾಗಲೇ ಸಾಬೀತು ಆಗಿದೆ. ಪ್ರತಿ ಮನುಷ್ಯನಲ್ಲೂ ಕೆಲವು ಒಳ್ಳೆಯ ಅಭ್ಯಾಸಗಳು ಮತ್ತು ಕೆಲವು ಕೆಟ್ಟ ಅಭ್ಯಾಸಗಳು ಎಂಬುದು ಎರಡು ಕೂಡ ಇರುತ್ತದೆ. ಹಾಗಾಗಿ ಅವುಗಳಲ್ಲಿ ಕೆಲವು ಕೆಟ್ಟ ಅಭ್ಯಾಸಗಳನ್ನು ನಾವು ಕಂಟ್ರೋಲ್ ಮಾಡಿಕೊಳ್ಳಬಹುದು ಇನ್ನು ಕೆಲವು ಕೆಟ್ಟ ಅಭ್ಯಾಸಗಳನ್ನು ನಾವು ಕಂಟ್ರೋಲ್ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ನಾವೇ ಅವುಗಳ ಕಂಟ್ರೋಲ್ ಗೆ ಹೋಗುತ್ತೇವೆ ಅಂದರೆ ಒಂದೇ ಮಾತಿನಲ್ಲಿ ಹೇಳಬೇಕಾದರೆ ಕೆಟ್ಟ ಅಭ್ಯಾಸಗಳಿಗೆ ನಾವೇ ದಾಸರಾಗಿ ಹೋಗುತ್ತೇವೆ.

ಸಾಮಾನ್ಯವಾಗಿ ಮನುಷ್ಯರಲ್ಲಿ ಇರುವ ಅಭ್ಯಾಸಗಳು ನಿಮ್ಮ ಮಾನಸಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಿ ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದನ್ನು ಮಾಡುತ್ತದೆ. ಇಂತಹ ಅಭ್ಯಾಸಗಳನ್ನು ಒಳ್ಳೆಯ ಕೆಟ್ಟ ಅಭ್ಯಾಸ ಅಂತಾನೆ ಹೇಳಬಹುದು ನಾವು ಕೆಟ್ಟ ಅಭ್ಯಾಸ ಅಂದು ಕೊಳ್ಳುವ ಒಳ್ಳೆಯ ಅಭ್ಯಾಸಗಳ ಬಗ್ಗೆ ಇಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ. ಇದರಲ್ಲಿ ಒಟ್ಟು 8 ಅಭ್ಯಾಸಗಳು ಇದೆ ಅದರಲ್ಲಿ ಮೊದಲನೆಯದಾಗಿ ಉಗುರು ಕಚ್ಚುವುದು ನಮ್ಮಲ್ಲಿ ಸಾಕಷ್ಟು ಜನರಿಗೆ ಉಗುರು ಕಚ್ಚುವ ಅಭ್ಯಾಸ ಇರುತ್ತದೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬರಲ್ಲಿ ಇರುವ ಕೆಟ್ಟ ಅಭ್ಯಾಸ ಇದು. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಚಿಕ್ಕ ವಯಸ್ಸಿನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಉಗುರು ಕಚ್ಚುವ ಅಭ್ಯಾಸ ಇರುತ್ತದೆ ಆದರೆ ಬರು ಬರುತ್ತ ಈ ಅಭ್ಯಾಸವೇ ಒಂದು ಚಟವಾಗಿ ಬಿಡುತ್ತದೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •