ಜೀವನದ ಜಂಜಾಟದಲ್ಲಿ ಸಿಕ್ಕಿ ಹಾಕಿಕೊಂಡು ನಮ್ಮನ್ನು ನಮ್ಮ ಉದ್ದೇಶವನ್ನು ಮರೆತು ಏನೂ ಶಾಶ್ವತವಲ್ಲಾ ಅಂಥ ತಿಳಿದಿದ್ದರು ದ್ವೇಶ, ಅಸೂಯೆಗಳಲ್ಲಿ ಮುಳುಗುತ್ತೇವೆ.. ನಮ್ಮ ಮೂಲಕ ಭೂಮಿಗೆ ಬಂದ ಮಕ್ಕಳಿಗೆ ಒಂದು ಒಳ್ಳೆಯ ದಾರಿಯನ್ನು ತೋರಿಸಿ ಅವರಿಗೆ ಅವರು ಬದುಕುವಂತೆ ಮಾಡುವ ಬದಲು, ಅವರಿಗೆ ಆಸ್ತಿ ಮಾಡಲು ಹೋಗಿ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ.. ಹಾಗೆ ಅವರನ್ನು ಆ ಸುಳಿಯಲ್ಲಿ ಸಿಲುಕಿಸುತ್ತೇವೆ. ನಮಗೆ ನಾವೇ ಬಾವಿ ತೋಡಿಕೊಂಡು ಇದೇ ಜೀವನ, ಇದೇ ಪ್ರಪಂಚ ಎಂದು ಗೆರೆ ಎಳೆದುಕೊಂಡು ಸಮುದ್ರವನ್ನು ನೋಡುವ ಮನಸ್ಸು ಮಾಡದೇ ಬಾವಿಯಲ್ಲೇ ಬದುಕನ್ನು ಕೊನೆ ಮಾಡುತ್ತೇವೆ.. ಇದೇನಾ ಜೀವನಾ ಇಷ್ಟಕ್ಕೇನಾ ನಾವು ಹುಟ್ಟಿರೋದು. ಗೆರೆಗಳನ್ನು ದಾಟಿ ಸಮುದ್ರಗಳನ್ನು ಮುಟ್ಟಿ ಆಕಾಶಕ್ಕೆ ಕೈ ಆಕಿ ಪ್ರತಿಕ್ಷಣವನ್ನು ಕುತೂಹಲಕಾರಿಯನ್ನಾಗಿ ಮಾಡಿಕೊಂಡು ಜೀವಿಸುವುದು ಜೀವನ ಅಲ್ಲವೇ.

ಇಂತಹ ಪ್ರಶ್ನೆಗಳು ತುಂಬಾ ಜನರಲ್ಲಿ ಮೂಡುತ್ತದೆ.. ಕೆಲವರಿಗೆ ಮುಂದೆ ಏನಾಗುತ್ತದೆ ಎಂದು ಅರಿವಾಗುತ್ತದೆ. ನೇಚರ್ ಸೈಕಾಲಜಿ ಪ್ರಕಾರ ಕೆಲವರಿಗೆ ದೈವ ಶಕ್ತಿ ಇರುತ್ತದೆ.. ದೈವಶಕ್ತಿ ಅಂದ್ರೆ ದೇವರು ಅಂತಲ್ಲಾ. ಕಾಲವನ್ನು ಬಲ್ಲವರು, ಹಾಗಾಗಿಯೇ ಮಾನವರಾಗಿ ಹುಟ್ಟಿದ ಹಲವಾರು ಜನರು ದೈವ ಮಾನವರಾಗಿದ್ದು, ದೈವ ಶಕ್ತಿ ಇದೆಯೇ ಎಂದು ತಿಳಿಯುವುದು ಹೇಗೆ ಎಂದು ನೋಡೊಣ. ನೀವು ಒಂದು ಕೆಲಸ ಮಾಡುವಾಗ ಈ ಕೆಲಸ ನಾನು ಈಗಾಗ್ಲೆ ಮಾಡಿದ್ದೇನೆ ಅನಿಸುತ್ತದೆ.. ಅಷ್ಟೇ ಅಲ್ಲದೇ ಈ ಕೆಲಸ ಮಾಡಿದರೆ ಮುಂದೆ ಏನಾಗುತ್ತದೆ ಎಂದು ಸಹ ನಿಮಗೆ ಗೊತ್ತಾಗುತ್ತದೆ. ಆ ಸಮಯದಲ್ಲಿ ನಿಮ್ಮ ಬಗ್ಗೆ ನೀವೇ ಆಶ್ಚರ್ಯವಾಗುತ್ತದೆ.. ಜನಗಳ ಮಧ್ಯೆ ಇರುವಾಗ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂದು ಕೆಲವರಿಗೆ ಸುಲಭವಾಗಿ ಗೊತ್ತಾಗುತ್ತದೆ.

ಹಾಗೆ ಬೇರೆಯವರು ಏನೋ ಅಲೋಚಿಸುತ್ತಿದ್ದಾರೆ ಎಂದು ಸಹ ದೈವ ಶಕ್ತಿ ಇರುವವರಿಗೆ ಗೊತ್ತಾಗುತ್ತದೆ.. ರಾತ್ರಿ ಕನಸು ಬಂದರೆ ಬೆಳಗ್ಗೆ ಹೊತ್ತಿಗೆ ಮರೆತುಹೋಗುತ್ತದೆ.. ಆದರೆ ಯಾರಿಗೆ ದೈವ ಶಕ್ತಿ ಇರುತ್ತದೆಯೋ ಅವರ ಕನಸಲ್ಲಿ ಏನೆಲ್ಲಾ ನಡೆದಿರುತ್ತೋ ಅದನ್ನೆಲ್ಲಾ ಬೆಳಗ್ಗೆ ಹೇಳುತ್ತಾರೆ. ಯಾರು ಕನಸನ್ನು ಜ್ಞಾಪಕ ಇಟ್ಟುಕೊಳ್ಳುತ್ತಾರೋ ಅವರಿಗೆ ದೈವ ಶಕ್ತಿ ಇರುತ್ತದೆ. ನಾವು ಎಲ್ಲಾದರು ಪ್ರಯಾಣ ಮಾಡುತ್ತಿದ್ದಾಗ ಅಥವಾ ಇದ್ದಾಗ ಅಪರಿಚಿತ ವ್ಯಕ್ತಿಗಳು ಬಂದು ಅವರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ.. ಕಾರಣ ದೈವ ಶಕ್ತಿ ಇರುವವರ ಕಡೆ ಕಷ್ಟ ಇರುವವರು ಆಕರ್ಷಿತರಾಗುತ್ತಾರೆ.

ಬೇರೆಯವರು ನಮಗೆ ಕೆಡಕು ಮಾಡಿದರು ದ್ವೇಷ ಸಾಧಿಸುವ ಬದಲು ಮುಂದೆ ಸಾಗೋಣ ಅನಿಸುತ್ತದೆ.. ಯಾರೇ ಕಷ್ಟದಲ್ಲಿ ಇದ್ದರು.. ನಿಮ್ಮ ಶತ್ರುಗಳೇ ಕಷ್ಟದಲ್ಲಿದ್ದರು‌. ಅವರಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸು ಹುಟ್ಟುತ್ತದೆ. ಹಾಗಾಗ ಈ ಪ್ರಪಂಚ ಭೂಮಂಡಲ ಸಾ’ವಿನ ಬಗ್ಗೆ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತವೆ.. ಅವುಗಳ ಮೂಲ ತಿಳಿಯಲು ಪ್ರಯತ್ನ ಮಾಡಬೇಕು ಎನಿಸುತ್ತದೆ. ಪ್ರಕೃತಿಯ ಜೊತೆ ಹೆಚ್ಚು ಕಾಲ ಕಳೆಯಬೇಕು ಅನಿಸುತ್ತದೆ.. ಈಗೆ ಯಾರಿಗೆಲ್ಲಾ ಅನಿಸುತ್ತದೆಯೋ.. ನೇಚರ್ ಸೈಕಾಲಜಿ ಕೆಲವು ಮಾಹಿತಿಯ ಪ್ರಕಾರ ಅವರಿಗೆ ದೈವ ಶಕ್ತಿ ಇದೆ ಎಂದು ಹೇಳಲಾಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •