ದಕ್ಷಿಣ ಭಾರತದವರಿಗೆ ನನ್ನ ಮುಖಕ್ಕಿಂತ ಹೊಕ್ಕಳ ಮೇಲೆ ಹೆಚ್ಚು ಆಸಕ್ತಿ; ವಿವಾದ ಸೃಷ್ಟಿಸಿದ ಪೂಜಾ ಹೆಗ್ಡೆ

ತೆಲುಗು ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಈಗ ನಂಬರ್ ಒನ್ ನಟಿ. ಒಂದರ ಮೇಲೆ ಒಂದು ಹಿಟ್ ಚಿತ್ರ ನೀಡುತ್ತಿರುವ ಈಕೆ ವಿವಾದವನ್ನು ಮೇಲೆಳೆದುಕೊಂಡಿದ್ದಾರೆ. ಈ ಹಿಂದೆ ನಟಿ ಸಮಂತಾಳನ್ನು ನೀನು ಸುಂದರವಾಗಿಲ್ಲ‌ ಎಂದು ಮೂದಲಿಸಿ ಸಮಂತಾಳ ಸಿಟ್ಟಿಗೆ ಗುರಿಯಾಗಿದ್ದಳು.

Pooja-Hegde

ಹೃತಿಕ್​ ರೋಷನ್​ ನಟೆಯ ಮೊಹೆಂಜೋ ದಾರೋ ಸಿನಿಮಾ ಮೂಲಕ ಒಂದು ಮಟ್ಟಕ್ಕೆ ಹೆಸರು ಮಾಡಿದ್ದ ಪೂಜಾ ಹೆಗ್ಡೆ ಅಲ್ಲು ಅರ್ಜುನ್ ನಟೆಯ ಡಿಜೆ ಚಿತ್ರದ ಮೂಲಕ ಪೂಜಾ ಹೆಗ್ಡೆ ಖ್ಯಾತಿ ಹೆಚ್ಚಿಸಿಕೊಂಡರು. ನಂತರ ಸಾಲು ಸಾಲು ಟಾಲಿವುಡ್​ ಚಿತ್ರಗಳಲ್ಲಿ ಬಣ್ಣ ಹಚ್ಚಿದರು ಪೂಜಾ ಹೆಗ್ಡೆ. ಸದ್ಯ, ಮೋಸ್ಟ್​ ಎಲಿಜಬೆಲ್​ ಬ್ಯಾಚುಲರ್​ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇದರ ಜೊತೆ ರಾಧೆ ಶ್ಯಾಮ್​ ಸಿನಿಮಾದಲ್ಲೂ ಪೂಜಾ ನಟಿಸುತ್ತಿದ್ದಾರೆ. ಇದೆರಡೂ ಚಿತ್ರಗಳು ತೆಲುಗು ಭಾಷೆಯದ್ದೇ ಆದರೂ ಪೂಜಾ ಹೆಗ್ಡೆ ಮಾತ್ರ ದಕ್ಷಿಣ ಭಾರತ ಸಿನಿಮಾ ಬಗ್ಗೆ ತುಚ್ಛ ಹೇಳಿಕೆ ಕೊಟ್ಟಿದ್ದಾರೆ.

ದಕ್ಷಿಣ ಭಾರತದವರಿಗೆ ನನ್ನ ಮುಖಕ್ಕಿಂತ ನನ್ನ ಹೊಟ್ಟೆ ಹಾಗೂ ಹೊಕ್ಕಳ ಮೇಲೆ ಹೆಚ್ಚು ಆಸಕ್ತಿ ಇದೆ. ಅಲ್ಲು ಅರ್ಜುನ್​ ನಟನೆಯ ಅಲಾ ವೈಂಕುಂಟಂಪುರಂಲು ಸಿನಿಮಾದಲ್ಲಿ ನನ್ನ ಕಾಲು ಹಾಗೂ ಹೊಟ್ಟೆಯ ಭಾಗವನ್ನೇ ಹೆಚ್ಚಾಗಿ ತೋರಿಸಿದ್ದಾರೆ ಎಂದಿದ್ದಾರೆ ಪೂಜಾ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •