ಮುಂಗಾರು ಮಳೆ ನಟಿ ಪೂಜಾ ಗಾಂಧಿ ಈಗ ಎಲ್ಲಿದ್ದಾರೆ,ಯಾಕೆ ಅವರಿಗೆ ಸಿನಿಮಾಗಳಿಲ್ಲ ಗೊತ್ತಾ!

Cinema/ಸಿನಿಮಾ Crime/ಅಪರಾಧ Home Kannada News/ಸುದ್ದಿಗಳು

2006 ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ, ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಕ್ಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಮುಂಗಾರು ಮಳೆ ಚಿತ್ರದಿಂದ ಇಡೀ ದೇಶವೇ ಕನ್ನಡ ಚಿತ್ರಗಳ ಕಡೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ನಮ್ಮ ಯೋಗರಾಜ್ ಭಟ್! ಮುಂಗಾರು ಮಳೆ ಚಿತ್ರದಿಂದ ಹಲವಾರು ಹೊಸ ಪ್ರತಿಭೆಗಳ ಜೀವನವೇ ಬದಲಾಯಿತು. ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್, ಹೀರೋಯಿನ್ ಆಗಿ ನಟಿಸಿದ್ದ ಪೂಜಾ ಗಾಂಧಿ, ಗೆಸ್ಟ್ ಪಾತ್ರ ಮಾಡಿದ್ದ ದಿಗಂತ್, ತಂತ್ರಜ್ಞರಾದ ಸಿನೆಮೆಟೋಗ್ರಾಫರ್ ಕೃಷ್ಣ ಸೇರಿದಂತೆ ಹಲವಾರು ಪ್ರತಿಭೆಗಳಿಗೆ ಒಂದು ಅಡಿಪಾಯ ಹಾಕಿ ಕೊಟ್ಟಿತು. ಮುಂಗಾರು ಮಳೆ ಚಿತ್ರದಿಂದ ದಕ್ಷಿಣ ಭಾರತದಲ್ಲಿ ಚಿರ ಪರಿಚಿತರಾದ ನಟಿಯೆಂದರೆ ಅದು ಪೂಜಾ ಗಾಂಧಿ! ಪೂಜಾ ಗಾಂಧಿ ಅವರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ, ಮದುವೆ ಆಗಿದ್ಯಾ, ಯಾಕೆ ಅವರಿಗೆ ಸಿನಿಮಾಗಳಿಲ್ಲ ಗೊತ್ತಾ! ತಿಳಿಯಲು ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ

ಹೌದು! ಮುಂಗಾರು ಮಳೆ ಚಿತ್ರದ ನಂತರ ನಟಿ ಪೂಜಾ ಗಾಂಧಿ ಅವರಿಗೆ ಸಿನಿಮಾ ಅವಕಾಶಗಳ ಸುರಿಮಳೆಯೇ ಬಂತು. ಒಂದರ ಹಿಂದೆ ಒಂದರ ಹಾಗೆ ಸುಮಾರು 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ. ಕನ್ನಡ ಅಲ್ಲದೆ, ತೆಲುಗು, ಹಿಂದಿ, ತಮಿಳು, ಹಾಗು ಬಂಗಾಳಿ ಭಾಷೆಯ ಚಿತ್ರಗಳಲ್ಲಿ ಕೂಡ ಪೂಜಾ ಗಾಂಧಿ ನಟಿಸಿದರು. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ, ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಜೊತೆ, ಅಜಯ್ ರಾವ್ ಜೊತೆ, ಪ್ರಜ್ವಲ್ ದೇವರಾಜ್ ಸೇರಿದಂತೆ ಸಾಕಷ್ಟು ಹೆಸರಾಂತ ಸ್ಟಾರ್ ನಟರ ಜೊತೆ ಕೂಡ ಕೆಲಸ ಮಾಡಿದ್ದಾರೆ. ಇದಲ್ಲದೆ ದಂಡುಪಾಳ್ಯ ಎಂಬ ಚಿತ್ರದಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿ ಕರ್ನಾಟಕದ ಮನೆ ಮಾತಾಗಿದ್ದರು. ಆದರೆ ಬರ್ತಾ ಬರ್ತಾ ಪೂಜಾ ಗಾಂಧಿ ಅವರಿಗೆ ಕನ್ನಡ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆಗುತ್ತಾ ಬಂತು! ಕಾರಣ ಏನು ಗೊತ್ತಾ ಮುಂದೆ ಓದಿರಿ

pooja-gandhi

ಹೌದು! ದಂಡುಪಾಳ್ಯ ಚಿತ್ರ ಪಾರ್ಟ್ 01 2012 ರಲ್ಲಿ ಬಿಡುಗಡೆ ಆಯಿತು, ನಂತರ ಅದೇ ಚಿತ್ರದ ಪಾರ್ಟ್ 02 ಹಾಗು ಪಾರ್ಟ್ 03 ಕೂಡ ಬಿಡುಗಡೆ ಆಗಿ ಒಳ್ಳೆಯ ಯೆಶಸ್ಸನ್ನು ಕಾಣಿತು. ದಂಡುಪಾಳ್ಯ ಚಿತ್ರದ ಸಮಯದಲ್ಲಿ ಪೂಜಾ ಗಾಂಧಿ ಅವರು ಲೆಕ್ಕಕ್ಕಿಂತ ಹೆಚ್ಚೇ ತಮ್ಮ ತೂಕವನ್ನು ಪಾತ್ರಕ್ಕಾಗಿ ಹೆಚ್ಚಿಸಿಕೊಂಡಿದ್ದರು. ಇವರ ಹೆಚ್ಚು ತೂಕವೇ ಇವರಿಗೆ ಮು-ಳ್ಳಾಗಲು ಶುರು ಆಯಿತು. ಸಿನಿಮಾ ಅವಕಾಶಗಳು ಕಡಿಮೆ ಆಗಲು ಶುರು ಆದಮೇಲೆ ಪೂಜಾ ಗಾಂಧಿ ಅವರು ಸಿನಿಮಾ ನಿರ್ಮಾಣ ಮಾಡಲು ಕೈ ಹಾಕಿ “ಜಿಲೇಬಿ” ಎಂಬ ಚಿತ್ರವನ್ನು ತಾವು ಸಿನಿಮಾದಲ್ಲಿ ದುಡಿದಿದ್ದ ಹಣವನ್ನೆಲ್ಲ ಸುರಿದು ನಿರ್ಮಾಣ ಮಾಡಿದರು. ಆದರೆ “ಜಿಲೇಬಿ” ಚಿತ್ರ ಚಿತ್ರಮಂದಿರ ಗಳಲ್ಲಿ 2 ದಿನ ಕೂಡ ಒಡಲಿಲ್ಲ! 2016 ರಲ್ಲಿ ಪೂಜಾ ಗಾಂಧಿ ಅವರು ಬಿಗ್ ಬಾಸ್ ನಲ್ಲಿ ಕೂಡ ಸ್ಪರ್ದಿಯಾಗಿ ಕಾಣಿಸಿಕೊಂಡಿದ್ದರು.

ಇವೆಲ್ಲದರ ನಡುವೆ ಪೂಜಾ ಗಾಂಧಿ ಅವರು 2012 ರಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯಾದ ಆನಂದ್ ಗೌಡ ಎಂಬುವರನ್ನು ಪ್ರೀತಿಸಿ ಅವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತಾರೆ. ಆದರೆ ಕಾರಣಾಂತರ ಗಳಿಂದ ವಯಕ್ತಿಕ ಕಾರಣ ಗಳಿಂದ ಅದೇ ವರ್ಷ ಆನಂದ್ ಗೌಡ ಅವರ ಜೊತೆ ಬ್ರೇ-ಕ್ ಅ-ಪ್ ಮಾಡಿಕೊಳ್ಳುತ್ತಾರೆ. ಇದಾದ ನಂತರ 2012 ರಲ್ಲಿ JDS ಪಕ್ಷವನ್ನು ಕೂಡ ಸೇರುತ್ತಾರೆ ಪೂಜಾ ಗಾಂಧಿ ಅವರು. ರಾಜಕೀಯದಲ್ಲಿ ಕೂಡ ಪೂಜಾ ಗಾಂಧಿ ಅವರು ಅಂದುಕೊಳ್ಳುವ ಅಷ್ಟು ಯೆಶಸ್ಸು ಗಳಿಸಿಲ್ಲ! ಪೂಜಾ ಗಾಂಧಿ ಅವರು ನಟಿಸಿದ್ದ ಕೊನೆಯ ಕನ್ನಡ ಚಿತ್ರವೆಂದರೆ ಅದು 2018 ರಲ್ಲಿ ಬಿಡುಗಡೆಯಾದ ದಂಡುಪಾಳ್ಯ ಭಾಗ 3 . ಆ ನಂತರ ಕನ್ನಡ ಚಿತ್ರಗಳಿಂದ, ದೂರ ಉಳಿದ್ದಿದ್ದಾರೆ! ಇತ್ತೀಚಿಗೆ 2019 ರಲ್ಲಿ ಪೂಜಾ ಗಾಂಧಿ ಅವರು ಒಂದು 5 ಸ್ಟಾರ್ ಹೋಟೆಲ್ ನಿಂದ ಹಣ ಪಾವತಿಸಿದೆ ಪರಾರಿ ಆಗಿದ್ದ ಕಾರಣಕ್ಕೆ ಸುದ್ದಿಯಲ್ಲಿ ಇದ್ದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...