ಯಾವ ಯಾವ ನಾಚಿಕೆಗೇಡಿನ ಕೃತ್ಯಗಳನ್ನು ಮಾಡಿ ಪೊಲೀಸರೇ ಸಿಕ್ಕಿಬಿದ್ದಿದ್ದಾರೆ,ನೋಡಿ…

Home

ಒಂದೇ ಗಾಡಿಯಲ್ಲಿ ಮೂವರು ಪೊಲೀಸರ ಪ್ರಯಾಣ, ಆ ಮೂವರು ಮಹಿಳಾ ಪೊಲೀಸರು ಹೆಲ್ಮೆಟ್ ಹಾಕಿಲ್ಲ. ಇನ್ನೊಂದು ಗಾಡಿಯಲ್ಲಿ ಇಬ್ಬರು ಮಹಿಳಾ ಪೊಲೀಸರು ಪ್ರಯಾಣ, ಅವರಲ್ಲಿ ಹಿಂಬದಿಯಲ್ಲಿ ಕೂತಿದ್ದ ಪೊಲೀಸ್ ಹೆಲ್ಮೆಟ್ ಹಾಕಿಲ್ಲ.

ಪೊಲೀಸರೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರ ಎದುರೇ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವೀಡಿಯೋವೊಂದು ಈಗ ಲಭ್ಯವಾಗಿದೆ.

ತ್ರಿಪಲ್, ಹೆಲ್ಮೆಟ್ ಇಲ್ಲ, ನಾವೇ ರೂಲ್ಸ್ ಮಾಡಿ, ನಾವೇ ಬ್ರೇಕ್ ಮಾಡೋದಾ..? ಏನೆನೆಲ್ಲ ರೂಲ್ಸ್ ನೀವು ಬ್ರೇಕ್ ಮಾಡ್ತಿದ್ದೀರಾ ನೋಡಿದ್ರಾ..? ನಾವು ಏನು ಎಕ್ಸಾಂಪಲ್ ಸೆಟ್ ಮಾಡ್ತೀವಿ ಬೇರೆಯವರಿಗೆ..? ದಯವಿಟ್ಟು ಇಳಿಯಿರಿ, ಹೆಲ್ಮೆಟ್ ಹಾಕ್ಕೊಳ್ಳಿ’ ಎಂದು ಸಂಚಾರಿ ಪೊಲೀಸ್ ಅವರು ಹೇಳುತ್ತಿದ್ದಂತೆ ಗಾಡಿಯಲ್ಲಿ ಕೂತಿದ್ದ ಮೂವರಲ್ಲಿ ಇಬ್ಬರು ಮಹಿಳಾ ಪೊಲೀಸರು ಇಳಿದರು.

ಇನ್ನೊಂದು ವೀಡಿಯೋದಲ್ಲಿ ಹಿಂಬದಿಯಲ್ಲಿ ಕೂತಿದ್ದ ಮಹಿಳಾ ಪೊಲೀಸ್ ಹೆಲ್ಮೆಟ್ ಹಾಕಿರಲಿಲ್ಲ. `ರೂಲ್ಸ್ ನಾವೇ ಮಾಡಿ ನಾವೇ ಬ್ರೇಕ್ ಮಾಡೋದಾ..? ಅರ್ಜೆಂಟ್ ಇತ್ತು ಎಂಬ ಆ ಮಹಿಳಾ ಪೊಲೀಸ್ ಗೆ `ಅರ್ಜೆಂಟ್ ಇರಲಿ, ಏನೇ ಇರಲಿ, ಬೇರೆಯವರು ನಮಗೆ ಹೇಳಲ್ವಾ..? ಇವರೇ ರೂಲ್ಸ್ ಬ್ರೇಕ್ ಮಾಡ್ತಾರೆ ಅಂತ’ ಎಂದು ಆ ಟ್ರಾಫಿಕ್ ಪೊಲೀಸ್ ತರಾಟೆಗೆ ತೆಗೆದುಕೊಳ್ತಾರೆ.

ಈ ವೀಡಿಯೋವನ್ನು ಕೊದಂಡಪಾಣಿ ಎಂಬವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್‌ಲೋಡ್ ಮಾಡಿ ಡಿಜಿಪಿ, ಬೆಂಗಳೂರು ಟ್ರಾಫಿಕ್ ಪೊಲೀಸ್, ಬೆಂಗಳೂರು ನಗರ ಪೊಲೀಸ್, ಕರ್ನಾಟಕದ ಮುಖ್ಯಮಂತ್ರಿಗಳು, ಬಸವರಾಜ ಬೊಮ್ಮಾಯಿ ಮತ್ತು ಒಳಾಡಳಿತ ಇಲಾಖೆಯ ಟ್ವಿಟ್ಟರ್ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.

 

ವೀಡಿಯೋ ಟ್ಯಾಗ್ ಆದ 15 ನಿಮಿಷದಲ್ಲಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು `ನಂಬರ್ ಪ್ಲೇಟ್, ಸಮಯ, ಸ್ಥಳ, ದಿನದ ಬಗ್ಗೆ ಕ್ಲಿಯರ್ ಇಮೇಜ್ ಇದ್ದರೆ’ ಕೊಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...