ಉತ್ತರಪ್ರದೇಶದಿಂದ ಪೊಲೀಸ್ ಅಧಿಕಾರಿಯೊಬ್ಬನ ನಾಚಿಕೆಗೇಡಿನ ಘಟನೆಯೊಂದು ವರದಿಯಾಗಿದೆ. ಪ್ರಸ್ತುತ ಘಟನೆಯು ಉನ್ನಾವ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿಯ ವರಿಷ್ಠ ಪೊಲೀಸ್ ಅಧಿಕಾರಿಯೊಬ್ಬನು ಮೇಲಾಧಿಕಾರಿಗೆ ಮಗಳ ಮದುವೆಯ ಕಾರಣ ನೀಡಿ ರಜೆ ಬೇಡಿ ನಂತರ ಲೇಡಿ ಪೊಲೀಸಳ ಜೊತೆಗೆ ಮಜಾ ಮಾಡಲು ಹೋಗಿದ್ದನು. ಆತ ಮಾಡಿದ ಈ ಯತ್ನದಲ್ಲಿ ತಾನೇ ಸಿಕ್ಕಿಬಿದ್ದಿದ್ದಾನೆ.

ಮಗಳ ಮದುವೆಯ ಕಾರಣ ನೀಡಿ ರಜೆಗಳನ್ನು ಪಡೆದನಂತರ ಪೊಲೀಸ್ ಅಧಿಕಾರಿಯು ಲೇಡಿ ಪೊಲೀಸಳ ಜೊತೆಗೆ ಮಜಾ ಮಾಡಲು ಹೋಗಿದ್ದನು. ಆ ಸಂದರ್ಭದಲ್ಲಿ ಇವರಿಬ್ಬರು ತಾವು ಮಾಡಿದ ತುಂಟಾಟಗಳ ವಿಡಿಯೋ ತಾವೇ ಶೂಟ್ ಮಾಡಿಕೊಂಡಿದ್ದಾರೆ.

ಇವರಿಬ್ಬರು ಹೋಟೆಲ್ಲಿಗೆ ಹೋದನಂತರ ಪೊಲೀಸ್ ಅಧಿಕಾರಿಯ ಪತ್ನಿಯು ಗಂಡನಿಗೆ ಫೋನ್ ಮಾಡಲು ಯತ್ನಿಸಿದ್ದಾಳೆ. ಇತ್ತ ಪತಿ ಮಹಾರಾಯ ಫೋನ್ ಸ್ವಿಚ್ ಆಫ್ ಮಾಡಿದ್ದನು. ಇತ್ತ ಮಹಿಳೆಗೆ ಪತಿಯ ಬಗ್ಗೆ ಚಿಂತೆ ಶುರುವಾಯಿತು. ಆಕೆಗೆ ಗಂಡನ ಕೊಲೆಯೇ ಆಗಿರಬೇಕು ಎಂಬ ಸಂಶಯ ಹುಟ್ಟಿತು. ಹೀಗಾಗಿ ಆ ಮಹಿಳೆಯು ತಕ್ಷಣ ಪೊಲೀಸ್ ಸ್ಟೇಷನ್ ಗೆ ಹೋಗಿದ್ದಾಳೆ.

ಪೊಲೀಸರು ಅಧಿಕಾರಿಯನ್ನು ಶೋಧಿಸಲು ಶುರುಮಾಡಿದರು. ಅಧಿಕಾರಿಯ ಕೊನೆಯ ಲೊಕೇಶನ್ ಕಾನ್ಪುರದ ಹೋಟೆಲ್ ತೋರಿಸುತ್ತಿತ್ತು. ಅಲ್ಲಿಗೆ ಪೊಲೀಸರು ಹೋದ ನಂತರ ಗೊತ್ತಾಯ್ತು, ಇಬ್ಬರು ಪೊಲೀಸರು (ಪೊಲೀಸ್ ಅಧಿಕಾರಿ ಮತ್ತು ಲೇಡಿ ಪೊಲೀಸ್) ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಬಾಡಿಗೆ ರೂಮನ್ನು ತೆಗೆದುಕೊಂಡಿದ್ದು. ಅಲ್ಲಿಯ ಸಿಸಿಟಿವಿ ಫುಟೇಜ್ ಗಳನ್ನು ಸಹ ಚೆಕ್ ಮಾಡಿದರು.

ಆಮೇಲೆ ನಡೆದ ಎಲ್ಲ ಘಟನೆಗಳು ಬೆಳಕಿಗೆ ಬಂದಿತು. ಅವರಿಬ್ಬರ ದೈಹಿಕ ಸಂಬಂಧದ ವಿಡಿಯೋ ಸಹಿತ ವೈರಲ್ ಆಗಿತ್ತು. ಪೊಲೀಸ್ ವರಿಷ್ಠಾಧಿಕಾರಿಗಳು ಈ ಇಬ್ಬರನ್ನು ಅಮಾನತಗೊಳಿಸಿ ಈ ಪೊಲೀಸರ ಕಾಮಕೇಳಿಯ ಸಂಪೂರ್ಣ ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •