ಮೋದಿ ನೇತೃತ್ವದ ಮಾಸಿಕ 3000 ರೂ. ನೀಡುವ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಯಲ್ಲಿ ಈಗಾಗಲೇ ಬರೋಬ್ಬರಿ 45 ಲಕ್ಷ ಜನರು ನೋಂದಾಯಿಸಿಕೊಂಡಿದ್ದಾರೆ. ‘ಪ್ರಧಾ-ನಮಂತ್ರಿ ಶ್ರಮ ಯೋಗಿ ಮಾನ್ ಧನ್’ ಯೋಜನೆಯಡಿ ಬಡವರು ಮತ್ತು ವೃದ್ಧರಿಗೆ ಅನುಕೂಲವಾಗುವಂತೆ 2019 ರಲ್ಲಿ ಯೋಜನೆ ಆರಂಭಿಸಲಾಗಿದ್ದು, ಇದೇ ಮಾರ್ಚ್ 4, 2021 ರವರೆಗೆ 44.90 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. 60 ವರ್ಷ ತುಂಬಿದ ನಂತರ ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಠ 3000 ರೂಪಾಯಿ ಪಿಂಚಣಿ ನೀಡಲಾಗುವುದು.

18 ರಿಂದ 40 ವರ್ಷ ವಯಸ್ಸಿನ ಮಾಸಿಕ ಕನಿಷ್ಠ 15 ಸಾವಿರ ರೂ. ಆದಾಯ ಮಿತಿ ಹೊಂದಿದವರು ಯೋಜನೆಗೆ ನೊಂದಾಯಿಸಬಹುದು. ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಪ್ರತಿ ತಿಂಗಳು 55 ರಿಂದ 200 ರೂಪಾಯಿ ಹೂಡಿಕೆ ಮಾಡಬಹುದು. 18 ವರ್ಷ ವಯಸ್ಸಿನವರು ತಿಂಗಳಿಗೆ 55 ರೂ., 30 ವರ್ಷ ವಯಸ್ಸಿನವರು ತಿಂಗಳಿಗೆ 100 ರೂ., 40 ವರ್ಷದವರು ತಿಂಗಳಿಗೆ 200 ಪಾವತಿಸಬೇಕಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ರಕ್ಷಣೆ ನೀಡಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

18 ವರ್ಷ ವಯಸ್ಸಿನ ವ್ಯಕ್ತಿ ಯೋಜನೆಗೆ ನೋಂದಾಯಿಸಿಕೊಂಡರೆ ವರ್ಷದಲ್ಲಿ 660 ರೂ. ಠೇವಣಿ ಇಡಬೇಕಾಗುತ್ತದೆ. 60 ವರ್ಷ ವಯಸ್ಸಿನವರೆಗೆ 27,720 ರೂ. ಇಡಲಿದ್ದು, 42 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಿದರೆ 60 ನೇ ವರ್ಷದ ನಂತರ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಬಹುದು. ಯೋಜನೆಯ ನೋಂದಣಿಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ, ಪಾಸ್ ಬುಕ್ ಗಳೊಂದಿಗೆ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ಖಾತೆ ತೆರೆಯಬೇಕಿದೆ. ಖಾತೆ ತೆರೆದ ನಂತರ ಕಾರ್ಮಿಕರಿಗೆ ಶ್ರಮಯೋಗಿ ಕಾರ್ಡ್ ನೀಡಲಾಗುವುದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •