ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ತಹಸಿಲ್‌ನಲ್ಲಿ ಬುಧವಾರ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವೃದ್ಧ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ತಮ್ಮ ಜಮೀನುಗಳನ್ನೆಲ್ಲಾ ಮಾಡಲು ತಹಸಿಲ್ ಗೆ ಬಂದಿದ್ದರು. ವೃದ್ದೆಯ ಜಮೀನನ್ನು ಪ್ರಧಾನ ಮಂತ್ರಿಯ ಹೆಸರಿಗೆ ಮಾಡಲು ಬಂದಿದ್ದ ವೃದ್ದೆಯ ನಿರ್ಧಾರಕ್ಕೆ ವಕೀಲರು ಕೂಡ ಆಶ್ಚರ್ಯಚಕಿತರಾಗಿದ್ದರು. ಆದರೆ ಮಹಿಳೆ ಮಾತ್ರ ತನ್ನ ಎಲ್ಲಾ ಜಮೀನನ್ನು ಪ್ರಧಾನಿ ಮೋದಿಯವರ ಹೆಸರಿನಲ್ಲಿ ಮಾಡಬೇಕೆಂದು ಹೇಳುತ್ತಿದ್ದರು. ವೃದ್ಧೆಯ ಈ ನಡೆಯ ಹಿಂದೆ ಭಾವನಾತ್ಮಕ ಕಾರಣವಿತ್ತು.

ವಿಕಾಸ್ ಖಂಡ್ ಕಿಶ್ನಿಯ ಚಿಟಾಯನ್ ಗ್ರಾಮದ ನಿವಾಸಿ ದಿವಂಗತ ಪುರಾನ್ ಲಾಲ್ (85) ಅವರ ಪತ್ನಿ ಬಿಟ್ಟನ್ ದೇವಿ ಬುಧವಾರ ಮಧ್ಯಾಹ್ನ ತಹಸಿಲ್ ನಲ್ಲಿ, ವಕೀಲ ಕೃಷ್ಣಪ್ರತಾಪ್ ಸಿಂಗ್ ಅವರ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ತನ್ನ ಎಲ್ಲಾ ಜಮೀನನ್ನು ಮಾಡಿ ಎಂದು ತಿಳಿಸಿದ್ದರು. ಇದನ್ನ ಕೇಳಿ ವಕೀಲರಿಗೆ ಆಶ್ಚರ್ಯವಾಗಿತ್ತು.

modi-fans

ವಯಸ್ಸಾದ ಬಿಟ್ಟನ್ ದೇವಿ ಅವರ ಮಾತು ಕೇಳಿ ವಕೀಲರು ಒಂದು ಕ್ಷಣ ನಿಬ್ಬೆರಗಾದರೂ, ಮಹಿಳೆ ಮಾತ್ರ ಅದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದರು. ವಕೀಲ ಕೃಷ್ಣಪ್ರತಾಪ್ ಸಿಂಗ್ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಬಿಟ್ಟನ್ ದೇವಿ ತಮ್ಮ ನಿರ್ಧಾರದಲ್ಲಿ ಅಚಲವಾಗಿಯೇ ಇದ್ದರು.

ಬಿಟ್ಟನ್ ದೇವಿ ತನ್ನ ಪತಿ ಮೃತಪಟ್ಟಿರುವುದಾಗಿ ಹಾಗೂ ಆಕೆಯ ಇಬ್ಬರು ಗಂಡು ಮತ್ತು ಸೊಸೆಯಂದಿರು ತನ್ನನ್ನು ನೋಡಿಕೊಳ್ಳುವುದಿಲ್ಲ. ಹೀಗಾಗಿ ಅವರು ಸರ್ಕಾರದಿಂದ ಪಡೆಯುತ್ತಿರುವ ವೃದ್ಧಾಪ್ಯ ಪಿಂಚಣಿ ಮೂಲಕ ಜೀವನ ಸಾಗಿಸುತ್ತಿದ್ದಾರೆ, ಈಗಾಗಿ ಅವರು ತಮ್ಮ ನೋಂದಾಯಿತ ಜಮೀನನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮಾಡಿಸಲು ಮುಂದಾಗಿದ್ದರೆ. ಎಂದು ತಿಳಿಸಿದ್ದಾರೆ.

ಮನವೊಲಿಸಲು ವಕೀಲರು ಎಷ್ಟೇ ಪ್ರಯತ್ನಿಸಿದರೂ ಬಿಟ್ಟನ್ ದೇವಿ ಅವರ ಯಾವುದೇ ವಿಷಯವನ್ನು ಕೇಳಲು ಸಿದ್ಧರಿರಲಿಲ್ಲ. ಕೊನೆಗೆ ಈ ಕುರಿತು ವಕೀಲರು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿ ಮನೆಗೆ ಕಳುಹಿಸಿದರು. ವಯಸ್ಸಾದ ಮಹಿಳೆ ಎರಡು ದಿನಗಳ ನಂತರ ಮತ್ತೆ ವಕೀಲರ ಬಳಿ ಬಂದಿದ್ದಾರೆ!!

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •