ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಯೋಜನೆಯಾಗಿದೆ. ಇದು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಮದುವೆಗೆ ಹಣ ಉಳಿತಾಯ ಮಾಡುವ ಉದ್ದೇಶ ಆಗುತ್ತದೆ. 10ವರ್ಷದ ಒಳಗಿನ ಹೆಣ್ಣು ಮಕ್ಕಳು ಮಾತ್ರ ಈ ಅಕೌಂಟ್ ನ್ನು ಒಪನ್ ಮಾಡಬಹುದು. ಹಾಗೆಯೇ ಎರಡು ಅಕೌಂಟ್ ನ್ನು ಮಾತ್ರ ಓಪನ್ ಮಾಡಬಹುದು. ಇನ್ನು ಅವಳಿ ಜವಳಿ ಇದ್ದರೆ ಮೂರು ಅಕೌಂಟ್ ನ್ನು ಒಪನ್ ಮಾಡಬಹುದು.

ಕಡಿಮೆ ಎಂದರೆ 250ರೂಪಾಯಿಯನ್ನು ತುಂಬಬಹುದು. ಮೊದಲು 1000ರೂಪಾಯಿ ಇತ್ತು. ಹಾಗೆಯೇ ಹೆಚ್ಚು ಎಂದರೆ 150000ರೂಪಾಯಿಯವರೆಗೆ ತುಂಬಬಹುದು. ಇದಕ್ಕೆ ವರ್ಷದ ಬಡ್ಡಿ ಶೇಕಡಾ 8.4 ಇದೆ. ಮೊದಲು ಶೇಕಡಾ 5.5 ಇತ್ತು. ತುಂಬುವುದು ಸಾಧ್ಯವಾಗದೇ ಹೋದಾಗ 50ರೂಪಾಯಿ ಪೆನಾಲ್ಟಿ ಕಟ್ಟಿ ಮುಂದುವರೆಸಿಕೊಂಡು ಹೋಗಬಹುದು. ಹೆಣ್ಣು ಮಗುವಿಗೆ 18ವರ್ಷ ಆದಾಗ ಅರ್ಧದಷ್ಟು ಹಣವನ್ನು ತೆಗೆಯಬಹುದು.

ಪೋಸ್ಟ್ ಆಫೀಸ್ ಅಥವಾ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಈ ಖಾತೆಯನ್ನು ತೆರೆಯಬಹುದು. ಇದಕ್ಕೆ ಬೇಕಾಗಿರುವ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಖಾತೆಯನ್ನು ತೆರೆಯಬೇಕು. 14ವರ್ಷ 1000ಕಟ್ಟಿದರೆ 168000ರೂಪಾಯಿ ಆಗುತ್ತದೆ. ಹಾಗೇ ಬಡ್ಡಿ 397640ರೂಪಾಯಿ ಬರುತ್ತದೆ. ಹಾಗೆಯೇ ಕೊನೆಯದಾಗಿ 565540ರೂಪಾಯಿ ಕೈ ಸೇರುತ್ತವೆ. ಇದರಿಂದ ಹೆಣ್ಣು ಮಕ್ಕಳ ಮದುವೆ ಮತ್ತು ಶಿಕ್ಷಣಕ್ಕೆ ಸಹಾಯವಾಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •