ಸುರಕ್ಷಿತ ಭವಿಷ್ಯಕ್ಕಾಗಿ, ಪ್ರತಿಯೊಬ್ಬರೂ ದುಡಿಮೆಯನ್ನು ಅವಲಂಬಿಸಿದ್ದಾರೆ ಮತ್ತು ಬೇರೆ ಬೇರೆ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಭವಿಷ್ಯದಲ್ಲಿ ಕಷ್ಟದ ಸಮಯದಲ್ಲಿ ಹಣದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬಯಸಿದರೆ, ನಿಮಗೆ ಸರ್ಕಾರಿ ಯೋಜನೆಗಳು ತುಂಬಾ ಉಪಯುಕ್ತವಾಗುತ್ತವೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತೆವೆ. ನೀವು ಪ್ರತಿ ತಿಂಗಳು ಕಡಿಮೆ ಹೂಡಿಕೆಯಲ್ಲಿ ದೊಡ್ಡ ಪಿಂಚಣಿ ಪಡೆಯಬಹುದು.

ಈ ಯೋಜನೆಯ ವಿಶೇಷತೆಯೆಂದರೆ ಇದರಲ್ಲಿ ಸರ್ಕಾರವು ನಿಮಗೆ ಪಿಂಚಣಿ ಖಾತರಿಪಡಿಸುತ್ತದೆ. ವಾಸ್ತವವಾಗಿ, ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಕಾರ್ಮಿಕರು, ಇತ್ಯಾದಿಯವರಿಗಾಗಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ನಡೆಸಲಾಗುತ್ತಿದೆ. ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಅನೇಕ ಇತರ ಕೆಲಸಗಳಲ್ಲಿ ತೊಡಗಿದವರಿಗೆ ಈ ಯೊಜನೆಯು ಉಪಯುಕ್ತವಾದದು. ವೃದ್ಧಾಪ್ಯದಲ್ಲಿ ಈ ಯೋಜನೆಯ ಹಣಗಳು ಅವರ ಉಪಯೊಗಕ್ಕೆ ಬರುತ್ತವೆ.

ಉದಾಹರಣೆಗೆ, ಒಬ್ಬ ವ್ಯಕ್ತಿಯು 18 ನೇ ವಯಸ್ಸಿನಿಂದ ಪಿಎಂ ಶ್ರಮ ಯೋಗಿ ಮನ್ ಧನ್ ಯೋಜನೆಯನ್ನು ಪ್ರಾರಂಭಿಸಿದರೆ, ಅವನು ಪ್ರತಿ ತಿಂಗಳು 55 ರೂಪಾಯಿಗಳನ್ನು ಜಮಾ ಮಾಡಬೇಕು. ಅದೇ ತರಹ 40 ವರ್ಷದಿಂದ ಈ ಯೋಜನೆಯನ್ನು ಪ್ರಾರಂಭಿಸುವ ವ್ಯಕ್ತಿಯು ಪ್ರತಿ ತಿಂಗಳು 200 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ. 60 ವರ್ಷದ ನಂತರ ನೀವು ಪಿಂಚಣಿ ಪಡೆಯಬಹುದು. 60 ವರ್ಷಗಳ ನಂತರ ನೀವು ತಿಂಗಳಿಗೆ 3000 ರೂ.ಗಳ ಪಿಂಚಣಿ ಪಡೆಯುತ್ತೀರಿ, ಅಂದರೆ ವರ್ಷಕ್ಕೆ 36000 ರೂ ಗಳನ್ನು ಪಡೆಯುತ್ತಿರಿ.

ಈ ಯೋಜನೆಯ ಲಾಭ ಯಾರಿಗೆ ಸಿಗುತ್ತದೆ?

ಈ ಯೋಜನೆಗೆ ನೀವು ಮೊದಲು ಅರ್ಜಿ ಸಲ್ಲಿಸಬೇಕೆಂದರೆ, ಸ್ವಂತ ನೀಮ್ಮದೆ ಆದ ಉಳಿತಾಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು. ಪ್ರಧಾನ್ ಮಂತ್ರಿ ಶ್ರಮ ಯೋಗಿ ಮನ್ ಧನ್ ಪಿಂಚಣಿ ಯೋಜನೆಯಡಿ, ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಾರರು, ಅವರ ವಯಸ್ಸು 40 ವರ್ಷಕ್ಕಿಂತ ಕಡಿಮೆ ಮತ್ತು ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆಯುತ್ತಿರಬಾರದು, ಅಂತವರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಮಾಸಿಕ ಆದಾಯವು 15 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರಬೇಕು.

ನೋಂದಾಯಿಸುವುದು ಹೇಗೆ ಎಂದು ತಿಳಿಯಿರಿ?

ಕಾರ್ಮಿಕರು ಸಾಮಾನ್ಯ ಸೇವಾ ಕೇಂದ್ರದಲ್ಲಿ (ಸಿಎಸ್‌ಸಿ) ನೋಂದಣಿ ಪಡೆಯಬೇಕಾಗುತ್ತದೆ. ಈ ಯೋಜನೆಗಾಗಿ ಭಾರತ ಸರ್ಕಾರ ವೆಬ್ ಪೋರ್ಟಲ್ ರಚಿಸಿದೆ. ಕಾರ್ಮಿಕರು ಸಿಎಸ್‌ಸಿ ಕೇಂದ್ರದಲ್ಲಿರುವ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಈ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿರುವ ಎಲ್ಲಾ ಮಾಹಿತಿಗಳು ಭಾರತ ಸರ್ಕಾರಕ್ಕೆ ಹೋಗುತ್ತವೆ. ನೋಂದಣಿಗಾಗಿ, ಕೆಲಸಗಾರನಿಗೆ ಅವನ ಆಧಾರ್ ಕಾರ್ಡ್, ಉಳಿತಾಯ ಖಾತೆ ಅಥವಾ ಜನ ಧನ್ ಬ್ಯಾಂಕ್ ಖಾತೆ ಪಾಸ್ಬುಕ್, ಮೊಬೈಲ್ ಸಂಖ್ಯೆ ಅಗತ್ಯವಿದೆ.

ಇದಲ್ಲದೆ, ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ, ಅದು ಬ್ಯಾಂಕ್ ಶಾಖೆಯೂ ಸಹ ನೀಡಬೇಕಾಗುತ್ತದೆ, ಅಲ್ಲಿ ಕೆಲಸಗಾರನಿಗೆ ಬ್ಯಾಂಕ್ ಖಾತೆ ನೀಡಬೇಕಾಗುತ್ತದೆ, ಆಗ ಮಾತ್ರ ಪಿಂಚಣಿಗಾಗಿ ಅವನ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •