ಮೊನ್ನೆಯಷ್ಟೇ ಕೇರಳದಲ್ಲಿ ನವದಂಪತಿ ಅರೆಬರೆ ಬೆತ್ತಲೆ ಫೋಟೋಶೂಟ್ ಅನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಮಂಗಳೂರಿನಲ್ಲಿ ಕೆಲ ಮಾಡೆಲ್ ಗಳು ದೇವಸ್ಥಾನದ ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್ ಮಾಡಿಸಿ ಸ್ಥಳೀಯರಿಂದ ಆಕ್ರೋಶ  ವ್ಯಕ್ತವಾಗುವಂತೆ ಮಾಡಿದ್ದು, ಅವಾಂತರ ಸೃಷ್ಟಿಸಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದು ಬಂದಿದೆ.

ಹೌದು ಮಂಗಳೂರಿನ ಸುಳ್ಯ ತಾಲೂಕೊಂದರ, ದೇವರಗುಂಡಿ ಎನ್ನುವ ಸ್ಥಳಕ್ಕೆ ಸಾಕ್ಷಾತ್ ಶಿವನೇ ಬಂದು ಸ್ನಾನ ಮಾಡುತ್ತಿದ್ದ ಎಂಬ ಪ್ರತೀತಿ ಇದೆ. ಇದೊಂದು ಕಾರಣಕ್ಕೆ ಅಲ್ಲಿಯ ಸ್ಥಳೀಯರು ಜಲಪಾತದಲ್ಲಿ ಸ್ನಾನ ಮಾಡದೆ, ತುಂಬಾ ಪಾವಿತ್ರತೆ ಕಾಪಾಡಿಕೊಂಡು, ಕಾಯ್ದಿರಿಸಿಕೊಂಡು ಬಂದಿದ್ದರು.ಆದ್ರೆ ಬೆಂಗಳೂರು ಮೂಲದ ಸುಂದರಿಯರು ಅದೇ ಸ್ಥಳದಲ್ಲಿ ಬಿಕನಿ ಹಾಕಿಕೊಂಡು ಅರೆಬೆತ್ತಲಾಗಿ ಫೋಟೋಗಳನ್ನು ತೆಗೆಸಿಕೊಳ್ಳುವ ಪೋಸ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಹೌದು ಬೆಂಗಳೂರು ಮೂಲದ ಮಾಡೆಲ್ ಬೃಂದಾ ಅರಸ್, ಹಾಗೂ ಈಕೆಯ ಇನ್ನಿಬ್ಬರು ಮಾಡೆಲ್ ಗಳು, ಸ್ನೇಹಿತರೆಂದು ತಿಳಿದುಬಂದಿದ್ದು, ಧಾರೆಯಾಗಿ ಹರಿಯುವ ಜಲಪಾತದಲ್ಲಿ, ತಮ್ಮ ಮೈ ಚಳಿಯನ್ನು ಬಿಟ್ಟು, ಅರೆಬರೆ ಬಟ್ಟೆ ಹಾಕಿಕೊಂಡು, ಹಗಲಿನಲ್ಲಿಯೇ ಫೋಟೋಗೆ ಪೋಸ್ ಕೊಟ್ಟಿದ್ದು, ಇವರ ಹುಚ್ಚಾಟಕ್ಕೆ ಅಲ್ಲಿಯ ಸ್ಥಳೀಯರು ಇವರನ್ನು ನೋಡಿ, ಇವರ  ಅವತಾರ ನೋಡಿ, ಇವರು ವರ್ತಿಸುವ ರೀತಿ ನೋಡಿ, ಗರಂ ಆಗಿ ಹೆಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ…

Photo-shoot

ಹೌದು ಸುಳ್ಯ ತಾಲೂಕಿನ, ತೋಡಿಕಾನ ಹಳ್ಳಿಯ ದೇವರಗುಂಡಿ ಆಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಸ್ಥಳವು ಅತ್ಯಂತ ಪವಿತ್ರ ಸ್ಥಳವಾಗಿತ್ತು, ಅಲ್ಲಿಯ ಸ್ಥಳೀಯರಿಂದ ತುಂಬಾ ಪಾಲನೆಗೆ ಒಳಗಾಗಿತ್ತು ಎಂದು ತಿಳಿದುಬಂದಿದೆ. ಮತ್ತು ಈ ದೇವಸ್ಥಾನದಿಂದ ಎರಡು ಕಿಲೋಮೀಟರ್ ದೂರದಲ್ಲಿದ್ದ ದೇವರ ಗುಂಡಿಯಲ್ಲಿ ಈ ಮಾಡಲ್ ಗಳು, ವಿಚಿತ್ರ ಫೋಟೋಶೂಟ್ ಗಾಗಿ ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದು, ಅಲ್ಲಿಯ ಸ್ಥಳೀಯರಿಗೆ ಮತ್ತು ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.

ಜೊತೆಗೆ ಈ ಮಾಡಲ್ಗಳು ಈ ಸ್ಥಳದಲ್ಲಿ ಫೋಟೋಶೂಟ್ ಮಾಡಿಸುವುದಕ್ಕೆ, ದೇವಾಲಯದವರಿಂದಾಗಲಿ, ಅಲ್ಲಿಯ ಸ್ಥಳೀಯರಿಂದಾಗಲಿ, ಯಾರ ಕಡೆಯಿಂದಲೂ ಅನುಮತಿ ಪಡೆಯುವ ಕೆಲಸ ಮಾಡಿಲ್ಲ. ಆದ್ರೆ ಈ ಮಾಡೆಲ್ ಗಳ ಅರೆಬೆತ್ತಲೆ ಫೋಟೋಶೂಟ್ ನೋಡಿ, ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ..

ಹೌದು ಸ್ನೇಹಿತರೆ ಈ ಮಾಡೆಲ್ ಗಳು, ಆ ಸ್ಥಳದಲ್ಲಿ ತೆಗೆಸಿಕೊಂಡಿರುವ ಫೋಟೋಶೂಟ್ ಫೋಟೋಗಳು, ಈ ಲೇಖನದ ಕೊನೆಯಲ್ಲಿವೆ. ಇವರ ಅವತಾರವನ್ನು ನೀವೂ ಒಮ್ಮೆ ನೋಡಿ. ಮತ್ತು ಇವರ ಅವತಾರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಮೆಂಟ್ ಬಾಕ್ಸ್ ಕಮೆಂಟ್ ಮಾಡಿ. ಮತ್ತು ಶೇರ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •