ಜೀತು ಜೋಸೆಫ್ ನಿರ್ದೇಶನದ, ಮೋಹನ್ ಲಾಲ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ದೃಶ್ಯಂ 2013ರಲ್ಲಿ ಬಿಡುಗಡೆಯಾಯಿತು. ಚಿತ್ರದ ಎರಡನೇ ಭಾಗ ದೃಶ್ಯಂ 2 ಫೆಬ್ರವರಿ 19 ರಂದು ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಬಿಡುಗಡೆಯಾಯಿತು. ಮೋಹನ್ ಲಾಲ್, ಮೀನಾ, ಅನ್ಸಿಬಾ ಮತ್ತು ಎಸ್ತರ್ ಅನಿಲ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ದೃಶ್ಯಂ 2 ಖ್ಯಾತನಾಮರು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅದ್ಭುತ ಪ್ರತಿಕ್ರಿಯೆ ಗಳಿಸಿತು. ಚಿತ್ರತಂಡವು ಚಿತ್ರದ ಯಶಸ್ಸನ್ನು ಆಚರಿಸುತ್ತಿದ್ದು, ಈ ಚಿತ್ರದಲ್ಲಿ ಮೋಹನ್ ಲಾಲ್ ಅವರ ಹಿರಿಯ ಮಗಳ ಪಾತ್ರದಲ್ಲಿ ನಟಿಸಿರುವ ನಟಿ ಅನ್ಸಿಬಾ ಹಸನ್, ತಮ್ಮ ಇತ್ತೀಚಿನ ಫೋಟೋಶೂಟ್‌ನ  ಕೆಲವು ಆಸಕ್ತಿದಾಯಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೆರಗುಗೊಳಿಸುವ ಫೋಟೋಗಳೊಂದಿಗೆ ಆಗಾಗ್ಗೆ ತಮ್ಮ ಅನುಯಾಯಿಗಳನ್ನು ರಂಜಿಸುವ ಅನ್ಸಿಬಾ ಹಸನ್, ಇತ್ತೀಚೆಗೆ ಅಸ್ಥಿಪಂಜರದೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ.  ಫೋಟೋಗಳನ್ನು ಹಂಚಿಕೊಳ್ಳುತ್ತಾ, ಅನ್ಸಿಬಾ ಹಸನ್ ತಮ್ಮ ಅನುಯಾಯಿಗಳಿಗೆ ಆಸಕ್ತಿದಾಯಕ ಶೀರ್ಷಿಕೆ ಕೊಡಲು ಕೇಳಿದರು.

 

View this post on Instagram

 

A post shared by Ansiba Hassan (@ansiba.hassan)

ಅನ್ಸಿಬಾ ಇಷ್ಟು  ಹೇಳಿದ ಮೇಲೆ ನೆಟ್ಟಿಗರು ಸುಮ್ಮನಿರುತ್ತಾರೆಯೇ? ಅವರು ಕೂಡ ಕೆಲವು ಆಸಕ್ತಿದಾಯಕ ಹಾಸ್ಯ ಶೀರ್ಷಿಕೆಗಳನ್ನು ಕೊಟ್ಟಿದ್ದಾರೆ. ಒರ್ವ ಅಭಿಮಾನಿ ಅದು “ವರುಣ್ ಅವರ ಅಸ್ಥಿಪಂಜರ” ಎಂದು ಹೇಳಿದರೆ, ಮತ್ತೊಬ್ಬರು ಅಂತಿಮವಾಗಿ “ಅವಳು ವರುಣ್ ಜೊತೆ ಮತ್ತೆ ಸೇರಿಕೊಂಡಳು” ಎಂದು ಹೇಳಿದರು. ವರುಣ್ ಯಾರು ಎಂಬುದು ದೃಶ್ಯಂ ಚಿತ್ರ ನೋಡಿದರಿಗೆ ಖಂಡಿತ ಗೊತ್ತಿರುತ್ತದೆ. ಜಾರ್ಜ್‌ಕುಟ್ಟಿಯ ಕುಟುಂಬವನ್ನು ಹಾಳುಮಾಡಲು ಬಂದ ಪೊಲೀಸ್ ಅಧಿಕಾರಿ ಮಗ. ಆದರೆ ಅವನು ಸತ್ತು ಹೋದ ನಂತರ ಕುಟುಂಬವನ್ನು ರಕ್ಷಿಸುವ ಸಲುವಾಗಿ ಜಾರ್ಜ್‌ಕುಟ್ಟಿ ಏನೆಲ್ಲಾ ಪ್ರಯತ್ನ ಮಾಡುತ್ತಾನೆ ಎಂಬ ಕಥೆಯ ಸುತ್ತ ದೃಶ್ಯಂ ಚಿತ್ರ ಸುತ್ತುತ್ತದೆ. ಏತನ್ಮಧ್ಯೆ ಮಲಯಾಳಂ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿತ್ರದ ನಿರ್ಮಾಪಕ ಆಂಟನಿ ಪೆರುಂಬವೂರ್, ದೃಶ್ಯಂ 3 ಬರುವ ಸಾಧ್ಯತೆ ಇದೆ ಎಂದು ಬಹಿರಂಗಪಡಿಸಿದ್ದಾರೆ. ಜೀತು ಜೋಸೆಫ್ ದೃಶ್ಯಂ 3 ಅನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದು, ಅದು ಕಾರ್ಯರೂಪಕ್ಕೆ ಬಂದರೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದರು.

 

View this post on Instagram

 

A post shared by Ansiba Hassan (@ansiba.hassan)

ದೃಶ್ಯಂನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಮಗಳಾಗಿ ನಟಿಸಿ ಮಲಯಾಳಿ ಪ್ರೇಕ್ಷಕರನ್ನು ಮೋಡಿ ಮಾಡಿದ ಅನ್ಸಿಬಾ ಹಸನ್ ಅವರು ಕೋಜಿಕೋಡ್‌ನ ಕಲ್ಲೈ ಎಂಬ ಸುಂದರವಾದ ಕುಗ್ರಾಮದವರು. ಅನ್ಸಿಬಾ ತಾನು ನಟಿಯಾಗಬೇಕೆಂದು ಕನಸು ಕಂಡಿರಲಿಲ್ಲ. ಆದರೆ ಅವಕಾಶಗಳು ಅನಿರೀಕ್ಷಿತವಾಗಿ ಬಂದವು  ಎಂದು ತಿಳಿಸಿದ್ದಾರೆ. ರಿಯಾಲಿಟಿ ಶೋಗಳಿಂದ ಜನಪ್ರಿಯತೆ ಪಡೆದುಕೊಂಡ  ಅನ್ಸಿಬಾ ಹಸನ್ ಕೊಂಜಮ್ ವೇಯಿಲ್ ಕೊಂಜಮ್ ಮಜೈ, ಚಿಂತ ವಿಷಯಂ, ನಾಗರಾಜ ಚೋಳನ್ ಎಂ.ಎ, ಮತ್ತು ಇನ್ನೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲದೆ ಅನ್ಸಿಬಾ ಟಿವಿಯಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಅವರು “ಕಾಮಿಡಿ ಸೂಪರ್ ನೈಟ್ 2” ಅನ್ನು ಹೋಸ್ಟ್ ಮಾಡಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ನಟನೆ ಮತ್ತು ನೃತ್ಯವನ್ನು ಇಷ್ಟಪಡುವ ಅನ್ಸಿಬಾ ಹಸನ್ ಶಾಲಾ, ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ದೃಶ್ಯಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ  ಅನ್ಸಿಬಾ ಹಸನ್ ಈ ಚಲನಚಿತ್ರದ ಯಶಸ್ಸಿನ ನಂತರ, ಅನೇಕ ಆಫರ್’ಗಳನ್ನು ಪಡೆದರು. ಅವರು ಮಲಯಾಳಂ ಚಿತ್ರ ‘ಪರೀತ್ ಪಂಡರಿ’ ಮತ್ತು ತಮಿಳು ಚಲನಚಿತ್ರ “ಪಾರ್ಕನುಮ್ ಪೋಲ” ದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •