ಇನ್ನುಂದೆ ಫೋನ್ ಪೇ ಮರೆತುಬಿಡಿ. ವರ್ಕ್ ಹಾಗೋದು ಡೌಟ್. ಯಾಕೆ ಗೊತ್ತಾ?

ಮೊದಲೆಲ್ಲಾ ಬ್ಯಾಂಕ್ ಗಳಿಗೆ ಹೋಗಿ ಹಣವನ್ನು ಬೇರೆಯವರಿಗೆ ಕಳುಹಿಸಬೇಕಾಗಿತ್ತು. ಆದರೆ ಇದೀಗ ಟೆಕ್ನಾಲಾಜಿ ಮುಂದುವರೆದಂತೆ ಕಾಲ ಬದಲಾಗಿದೆ. ಹೌದು ಟೆಕ್ನಾಲಜಿ ತುಂಬಾ ಮುಂದುವರೆದಂತೆ ಎಲ್ಲಿ ಬೇಕೆಂದರೆ ಅಲ್ಲಿ ಬ್ಯಾಂಕ್ ಟ್ರಾಂಜೆಕ್ಷೆನ್ ಮಾಡಬುದಾಗಿದೆ. ಯಾರಿಗಾದರೂ ತಕ್ಷಣ ಹಣ ಕಳುಹಿಸಬೇಕಾದರೂ ಸಹ ಬ್ಯಾಂಕ್ ಗಳಿಗೆ ಹೋಗುವ ಅವಶ್ಯಕತೆಯಿಲ್ಲ. ಎಕೆಂದರೆ ಹಲವು ರೀತಿಯ ಅಪ್ಲಿಕೇಶನ್ ಗಳು ಹುಟ್ಟಿಕೊಂಡಿವೆ.

ಈ ಡಿಜಿಟಲ್ ಯುಗದಲ್ಲಿ ಎಲ್ಲರೂ ಕೈಯಲ್ಲಿ ಸ್ಮಾರ್ಟ್ ಪೋನ್ ಇದ್ದೇ ಇರುತ್ತದೆ. ಸ್ಮಾರ್ಟ್ ಪೋನಿನಲ್ಲಿ ಸಾಮಾನ್ಯವಾಗಿ ಗೂಗಲ್ ಪೇ, ಪೋನ್ ಪೇ, ಪೇಟಿಎಂ, ಅಮೇಜಾನ್ ಪೇ ಹೀಗೆ ಹಲವಾರು ರೀತಿಯ ಟ್ರಾಂಜೆಕ್ಷನ್ ಅಪ್ಲಿಕೇಶನ್ ಗಳು ಇರುತ್ತದೆ. ನಾವು ಯಾರಿಗಾದರೂ ಹಣವನ್ನ ಪಾವತಿ ಮಾಡಬೇಕಾದರೆ ಎರಡು ಸೆಕೆಂಡ್ ನಲ್ಲಿ ಈ ಆ್ಯಪ್ ಗಳ ಮುಖಾಂತರ ಕಳುಹಿಸಬಹುದು. ದಿನಗೂಲಿ ಕೆಲಸ ಮಾಡುವವನಿಂದ ಹಿಡಿದು ಆಗರ್ಭ ಶ್ರೀಮಂತನ ವರೆಗೂ ಈ ಅಪ್ಲಿಕೇಶನ್ ಗಳನ್ನು ಬಳಕೆ ಮಾಡುತ್ತಾರೆ.

ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಮಾರುಕಟ್ಟೆಗಳಲ್ಲಿ ನಮಗೆ ಬೇಕಾಗಿರುವ ಸಾಮಾಗ್ರಿಗಳನ್ನು ಈ ಅಪ್ಲಿಕೇಶನ್ ಗಳ ಮೂಲಕ ಪಾವತಿ ಮಾಡಿ ಕೊಂಡುಕೊಳ್ಳಬಹುದು. ಇಷ್ಟೇ ಅಲ್ಲದೇ ಈ ಅಪ್ಲಿಕೇಶನ್ ಗಳನ್ನು ಅತಿ ಹೆಚ್ಚಾಗಿ ಬಳಕೆ ಮಾಡುವವರಿಗೆ ಕ್ಯಾಶ್ ಬ್ಯಾಕ್ ಸಹ ನೀಡುತಿತ್ತು. ಈ ಕಾರಣಕ್ಕಾಗಿ ಪ್ರತಿಯೊಬ್ಬರು ಕೂಡ ಈ ಅಪ್ಲಿಕೇಶನ್ ಗಳನ್ನು ಉಪಯೋಗಿಸುತ್ತಿದ್ದರು.

ಇದರಿಂದ ಜನಸಾಮಾನ್ಯರಿಗೆ ಬಹಳ ಸುಲಭವಾಗಿ ಟ್ರಾಂಜೆಕ್ಷನ್ ಮಾಡಲು ಹಾಗೂ ಕ್ಯಾಶ್ ಬ್ಯಾಕ್ ಪಡೆಯಲು ಬಹಳ ಉಪಯೋಗವಾಗಿತ್ತು. ಆದರೆ ಇದೀಗ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಇನ್ನು ಮುಂದೆ ಪೋನ್ ಪೇ ನಿಷೇದವಾಗಲಿದೆ. ಹೌದು ಆರ್ಥಿಕ ಬಿಕ್ಕಟ್ಟು ಸಮಸ್ಯೆಯನ್ನು ಎದುರಿಸುತ್ತಿರುವ ಯೆಸ್ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕಿನವರು ನಿಷೇಧವನ್ನು ಹೇರಿದ್ದಾರೆ. ಇದರ ಹೊಡೆತ ಪೋನ್ ಪೇ ಮೇಲೆಯೂ ಸಹ ಪರಿಣಾಮ ಬೀರಿದೆ.

Phone

ಹೌದು ಹಣ ವರ್ಗಾವಣಾ ಪೋನ್ ಪೇ ಆ್ಯಪ್ ಯೆಸ್ ಬ್ಯಾಂಕ್ ನೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡಿತ್ತು. ಆದರೆ ಈಗ ಯೆಸ್ ಬ್ಯಾಂಕ್ ಅರ್ಥಿಕ ಬಿಕ್ಕಟ್ಟಿನ ಸಮಸ್ಯೆ ಎದರಿಸುತ್ತಿರುವ ಕಾರಣ ಈಗ ಪೋನ್ ಪೇ ಮೇಲೆ ಒಡೆತ ಬಿದ್ದು ಸೇವೆಗಳು ಅಲಭ್ಯವಾಗಿದೆ. ಇನ್ನು ಇದನ್ನು ಕುರಿತು ಫೋನ್ ಪೇ ಆಡಳಿತ ಮಂಡಳಿಯವರು ಟ್ವಿಟರ್ ನಲ್ಲಿ ಈ ರೀತಿ ಅಂಚಿಕೊಂಡಿದ್ದಾರೆ. ನಾವು ಈಗ ತಾತ್ಕಲಿಕವಾಗಿ ಮಾತ್ರ ಲಭ್ಯವಿಲ್ಲ ಅನಿಗದಿತ ನಿರ್ವಹಣೆಯಲ್ಲಿ ಇದ್ದೇವೆ. ಆದ ಕಾರಣ ನಿಮ್ಮಲ್ಲಿ ನಾವು ಕ್ಷಮೆ ಕೇಳುತ್ತೇವೆ. ಎಂದು ಅಧಿಕೃತವಾಗಿ ಹೆಳಿಕೆಯನ್ನ ನೀಡಿದ್ದಾರೆ.

ಇನ್ನೂ ಫೋನ್ ಪೇ ಸಿ. ಇ.ಒ ಸಮೀರ್ ನಿಗಮ್ ಅವರು ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರೀತಿಯ ಗ್ರಾಹಕರೇ ದೀರ್ಘಕಾಲದ ಅಡಚಣೆಗಾಗಿ ಕ್ಷಮೆ ಇರಲಿ. ನಮ್ಮ ಪಾಲುದಾರ ಯೆಸ್ ಬ್ಯಾಂಕ್ ಅನ್ನು ಅರ್ಬಿಐ ನಿಷೇದ ಮಾಡಿದೆ ಆದ್ದರಿಂದ ಫೋನ್ ಪೇ ಗೆ ಪರಿಣಾಮ ಬೀರಿದೆ. ಮತ್ತೆ ನಿಮ್ಮ ಸೇವೆಗೆ ನಮ್ಮ ತಂಡ ಶ್ರಮಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಮತ್ತೆ ಪೋನ್ ಪೇ ಮರಳಿ ಬರಲಿದೆ ಎಂದು ನಂಬಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ‌. ಖಾಸಗಿ ಯೆಸ್ ಬ್ಯಾಂಕ್ ನಿರ್ದೇಶಕ ಮಂಡಳಿಯನ್ನು ತಕ್ಷಣ ಜಾರಿಗೆ ಬರುವಂತೆ ಆರ್.ಬಿ.ಐ ಗುರುವಾರ ರದ್ದುಪಡಿಸಿತ್ತು. ಆದರೆ ಇದೀಗ ಪ್ರತಿ ಖಾತೆಯಲ್ಲಿ ಗ್ರಾಹಕರು‌ 50 ಸಾವಿರ ರೂಪಾಯಿ ಹಿಂದಕ್ಕೆ ಪಡೆಯಲು ನಿರ್ಬಂಧ ಹೇರಿದೆ. ಇನ್ನೂ ಇದ್ದಕಿದ್ದ ಹಾಗೆ ಬೆಳಗ್ಗೆಯಿಂದ ಫೋನ್ ಪೇ ಚಾಲ್ತಿಯಿಲ್ಲದ ಕಾರಣ ಗ್ರಾಹಕರಿಗೆ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •