ಒಂದು ಕಾರ್ಯಕ್ರಮದ ಸಮ್ಮುಖದಲ್ಲಿ ಹಲವಾರು ವ್ಯಕ್ತಿಗಳು ನಿಂತಾಗ ಒಬ್ಬ ವ್ಯಕ್ತಿಯಲ್ಲಿ ಒಂದೊಂದು ತರ ಕಳೆ, ತೇಜಸ್ಸು,ಚೈತನ್ಯ, ನಗು, ಮಂದಹಾಸ ಇರುತ್ತದೆ. ಮುಖ ಲಕ್ಷ್ಮಿಯನ್ನು ಹೊಂದುವಂತಹ ತೇಜಸ್ಸನ್ನು ಕೂಡಿರುತ್ತದೆ. ಹುಬ್ಬಿನ ಮೂಲಕ, ಕಣ್ಣಿನ ಮೂಲಕ, ತುಟಿಯ ಮೂಲಕ ಲಕ್ಷ್ಮಿಯನ್ನು ನಾವು ಗುರುತಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯ ಮುಖ ಲಕ್ಷಣದಲ್ಲಿ ದರಿದ್ರ ಯಾವ ರೂಪದಲ್ಲಿ ಕಾಣುತ್ತದೆ ಎಂಬುದನ್ನು ಮುಖ ಲಕ್ಷಣದ ರೂಪದಲ್ಲಿ ತಿಳಿದುಕೊಳ್ಳಬಹುದು.

ಲಕ್ಷ್ಮಿ ಸುಖವು ಹೌದು ಹಾಗೇ ದರಿದ್ರವೂ ಹೌದು. ಲಕ್ಷ್ಮಿ ಸುಖವಾದರೆ ಸಿರಿ ಸಂಪತ್ತಿನ ಜೀವನವಾಗುತ್ತದೆ. ಆದರೆ ಅದೇ ಲಕ್ಷ್ಮಿ ದರಿದ್ರ ರೂಪಕ್ಕೆ ತಿರುಗಿದರೆ ದಟ್ಟ ದೀನ ದರಿದ್ರ ಜೀವನವನ್ನು ನಡೆಸುತ್ತಾನೆ ವ್ಯಕ್ತಿ. ಹಲವಾರು ವ್ಯಕ್ತಿಗಳು ಹೇಳುತ್ತಾರೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಕೈಗೊಳ್ಳುತ್ತಿಲ್ಲ, ಎಷ್ಟೇ ಹಣ ಸಂಪಾದನೆ ಮಾಡಿದರು ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ, ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟವಾಗುತ್ತಿದೆ ಎಂದರೆ ದರಿದ್ರತನ ಪ್ರಾರಂಭವಾಗುತ್ತಿದೆ ಎಂದರ್ಥ. ಆಗ ವ್ಯಕ್ತಿಯ ಮುಖ ಲಕ್ಷಣದಲ್ಲಿ ಚೈತನ್ಯ, ತೇಜಸ್ಸು ಎಂಬುದು ಹೋಗಿ ಮುಖ ಸೊಕ್ಕಾಗುತ್ತದೆ.

ದರಿದ್ರತನ ಬಂದರೆ ವ್ಯಕ್ತಿಯ ಹಣೆಯ ಮೇಲೆ ಕಪ್ಪು ಆಕಾರದ ಕರೆಗಳು ಇರುತ್ತವೆ. ಕಣ್ಣಿನ ಕೆಳಗಡೆ ಕಪ್ಪು ಆಕೃತಿ ಬರುತ್ತದೆ. ಮೂಗಿನ ಮೇಲೆ ಬಂಗಿನ ರೂಪ ಕಾಣುತ್ತದೆ ಹಾಗೆ ಮುಖವು ದರಿದ್ರ ಸ್ವರೂಪಕ್ಕೆ ಹೋಗುತ್ತದೆ. ಇದರಿಂದ ಆ ವ್ಯಕ್ತಿ ಮುಂಜಾನೆ ಎದ್ದ ತಕ್ಷಣ ಯಾವ ಕೆಲಸ ಮಾಡಲು ಇಚ್ಛೆ ಬರುವುದಿಲ್ಲ. ಆ ವ್ಯಕ್ತಿ ಊಟ ಮಾಡುವ ಸಂದರ್ಭದಲ್ಲಿ ಕಿರಿಕಿರಿಗಳು ಉಂಟಾಗುತ್ತದೆ. ಮನೆಯಲ್ಲಿ ಸ್ಮಶಾನದ ಮೌನ ಆವರಿಸುತ್ತದೆ. ಇದರಿಂದ ಮಾನಸಿಕ ಗೊಂದಲದಿಂದಾಗಿ ಮಾಡುವ ಕೆಲಸದಲ್ಲಿ ಧನ ನಷ್ಟವಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •