ಈ ಅಂಶಗಳು ನೀವು ಪ್ರೀತಿಸುವ ವ್ಯಕ್ತಿಗಳಲ್ಲಿದ್ದರೆ ನಿಮ್ಮೊಂದಿಗೆ ಪ್ರಾಮಾಣಿಕವಾಗಿದ್ದಾರೆ ಎಂದು ನಿರ್ಧರಿಸಬಹುದು

ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಪ್ರೀತಿ ಎನ್ನುವ ಮಾಯಾಜಾಲದಲ್ಲಿ ಬೀಳುವುದನ್ನು ಕಾಣುತ್ತಲೇ ಇರುತ್ತೇವೆ. ಅನೇಕರು ಪ್ರೀತಿಸಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಇನ್ನು ಕೈ ಕೊಟ್ಟ ಹುಡುಗನ ಅಥವಾ ಹುಡುಗಿಯಾ ನೆನಪು ಮಾಡಿಕೊಳ್ಳುತ್ತಾ ಜೀವನ ಹಾಳಾಗಿ ಹೋಯ್ತು ಎಂದು ಗೊಣಗಾಡುತ್ತಿರುತ್ತಾರೆ. ಅದೇನೇ ಆದರೂ ಪ್ರೀತಿ ಎನ್ನುವ ಮಾಯಾಜಾಲದಲ್ಲಿ ಬೀಳುವವರು ಸಂಖ್ಯೆಯೂ ಎಳ್ಳಷ್ಟು ಕಡಿಮೆಯಾಗಿಲ್ಲ. ಇನ್ನು ಪ್ರೀತಿಸಿ ಮದುವೆಯಾಗುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಮೊದ ಮೊದಲು ಚೆನ್ನಾಗಿದ್ದ ಪ್ರೀತಿಯ ಸಂಬಂಧಗಳು, ಕಾಲ ಕಳೆದ ಹಾಗೆಯೇ ವ್ಯಕ್ತಿಯ ನಡವಳಿಕೆಗಳು ಕಾರಣಗಳಿಲ್ಲದೇ ಬದಲಾವಣೆಯಾಗುತ್ತದೆ. ಹೀಗೆ ಆದಾಗ ನೀವು ಪ್ರೀತಿಸುವ ಹುಡುಗ ಅಥವಾ ಹುಡುಗಿ ನಿಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದಾರೆಯೇ ಎಂಬ ಅನುಮಾನ ಬರುವುದು ಸಹಜ. ಜೊತೆಗೆ ನಿಮ್ಮ ಮೇಲೆ ಸುಳ್ಳು ಪ್ರೀತಿಯ ಮಾಯಾಜಾಲವನ್ನು ಬೀಸಿದ್ದಾರಾ ಎಂಬ ಪ್ರಶ್ನೆಗಳು ಮೊಳಕೆಯೊಡೆಯುವುದು ಸಹಜ. ಆದರೆ ಈ ಅಂಶಗಳು ನಿಮ್ಮ ಜೊತೆಯಿರುವ ವ್ಯಕ್ತಿಯು ಪ್ರೀತಿಯಲ್ಲಿ ಪ್ರಾಮಾಣಿಕರೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ.

• ನಿಜವಾಗಿಯೂ ಪ್ರೀತಿಸುವ ಹುಡುಗ ಅಥವಾ ಹುಡುಗಿಯೂ ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ಸನ್ನಿವೇಶ ಮತ್ತು ಸಂದರ್ಭ ಹೇಗೆ ಇರಲಿ. ಕೊನೆಯವರೆಗೂ ನಿಮ್ಮ ಜೊತೆಗೆ ಇರುತ್ತಾರೆ. ಇಲ್ಲಿ ಮುಖ್ಯವಾಗಿ ನಂಬಿಕೆ, ವಿಶ್ವಾಸ ಮತ್ತು ಪ್ರೀತಿ ಹೆಚ್ಚಾಗಿ ಇರುತ್ತದೆ.
• ಸಂಬಂಧಗಳಲ್ಲಿ ಸಣ್ಣ ಪುಟ್ಟ ವೈಮನಸ್ಸನ್ನು ಸರಿ ಪಡಿಸಿಕೊಂಡು ಹೋಗುವ ವ್ಯಕ್ತಿಗಳು ಇದ್ದರೆ ಖಂಡಿತವಾಗಿ ಅಂತಹ ಸಂಬಂಧಗಳು ಜೋಪಾನವಾಗಿಯೇ ಉಳಿಯುತ್ತದೆ. ಜೊತೆಗೆ ಭಿನ್ನಾಭಿಪ್ರಾಯಗಳು ಬಂದಾಗ ದೂರವಾಗುವ ನಿರ್ಧಾರವನ್ನು ಎಂದಿಗೂ ಇಂತಹ ವ್ಯಕ್ತಿಗಳು ಮಾಡುವುದಿಲ್ಲ. ಸರಿಯಾದ ಮಾತುಕತೆಯ ಮೂಲಕ ಸಂಬಂಧವನ್ನು ಕಾಪಿಟ್ಟುಕೊಳ್ಳುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಇಂತಹ ವರ್ತನೆಗಳು ನಿಮ್ಮ ಜೊತೆಯಿರುವ ವ್ಯಕ್ತಿಗಳಲ್ಲಿ ಕಂಡುಬಂದರೆ ಭಯಭೀತರಾಗದಿರಿ. ಇಲ್ಲಿ ಸಂಬಂಧಗಳನ್ನು ಕಾಯ್ದು ಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ಇದ್ದೇ ಇರುತ್ತದೆ. ಹೀಗಿದ್ದಾಗ ಇಂತಹ ವ್ಯಕ್ತಿಯ ಜೊತೆಗಿನ ಸಂಬಂಧವನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳಿ.

person-who-loves

• ನಿಮ್ಮನ್ನು ಯಾವ ವ್ಯಕ್ತಿಯೂ ದೂರ ಮಾಡಲು ಬಯಸುತ್ತಾರೋ ಅಂತಹವರಲ್ಲಿ ನಿಮ್ಮ ಸಂಬಂಧವನ್ನು ಕಳೆದುಕೊಳ್ಳುವೆ ಎನ್ನುವ ಯಾವ ನೋವು ಮತ್ತು ಭಯವಾಗಲಿ ಇರುವುದಿಲ್ಲ. ಇಲ್ಲಿ ವ್ಯಕ್ತಿಯೂ ಸಮಯ ಸಾಧಕರಂತೆ ವರ್ತಿಸಿ ಬಿಡುತ್ತಾರೆ. ಸಾಮಾನ್ಯವಾಗಿ ವೈಯುಕ್ತಿಕ ಅಥವಾ ಕುಟುಂಬದ ಕಾರಣದಿಂದಾಗಿ ಇಬ್ಬರು ಸಂಬಂಧಗಳನ್ನು ಮುರಿದುಕೊಳ್ಳುವ ಅನಿವಾರ್ಯ ಸನ್ನಿವೇಶಗಳು ಎದುರಾದಾಗ, ನಿಮ್ಮ ಜೊತೆಯಿರುವ ವ್ಯಕ್ತಿಗಳಲ್ಲಿ ನಿಮ್ಮನ್ನು ಬಿಟ್ಟುಕೊಡಬೇಕು ಎನ್ನುವ ಭಯ ಕಾಣಿಸಿಕೊಳ್ಳುತ್ತದೆ. ಇಂತಹ ವ್ಯಕ್ತಿಗಳು ಪ್ರಾಮಾಣಿಕವಾಗಿ ನಿಮ್ಮನ್ನು ಪ್ರೀತಿಸುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ.

• ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾರೆಯೋ ಅವರು ಯಾವುದೇ ವಿಷಯವನ್ನು ಮುಚ್ಚಿಡುವುದಿಲ್ಲ, ಯಾವುದೇ ವಿಷಯಗಳಿರಲಿ, ನಿಮ್ಮ ಜೊತೆ ಹಂಚಿಕೊಳ್ಳುವುದರ ಮೂಲಕ ಉತ್ತಮ ಬಾಂಧ್ಯವವನ್ನು ಹೊಂದಿರುತ್ತಾರೆ. ಆದರೆ ಅಪ್ರಾಮಾಣಿಕ ವ್ಯಕ್ತಿಗಳು ನಿಮ್ಮನ್ನು ಕ್ಷಣಿಕವಾಗಿ ಸಂತೋಷ ಪಡಿಸಲು ಬಣ್ಣ ಬಣ್ಣದ ಮಾತುಗಳಿಂದ ಸುಳ್ಳು ಹೇಳಲು ಪ್ರಯತ್ನಿಸುತ್ತಾರೆ. ಆದರೆ ಇದೆಲ್ಲವೂ ನಿಮಗೆ ಕೊನೆಯ ಹಂತದಲ್ಲಿ ಒಂದೊಂದಾಗಿ ಅರಿವಿಗೆ ಬರುತ್ತದೆ. ಆದರೆ ಪ್ರಾಮಾಣಿಕವಾಗಿ ಪ್ರೀತಿಸುವ ವ್ಯಕ್ತಿಗಳು ನೇರ ನುಡಿ ನಡೆಯುಳ್ಳವರು, ಅವರಿಗೆ ಬಣ್ಣ ಬಣ್ಣದ ಮಾತುಗಳಿಂದ ನಿಮ್ಮನ್ನು ಸಂತೋಷ ಪಡಿಸಲು ಈ ವ್ಯಕ್ತಿಗಳಿಗೆ ಬರುವುದಿಲ್ಲ. ನಿಮ್ಮನ್ನು ಮನಸ್ಸಿನಿಂದ ಖುಷಿ ಪಡಿಸಲು ಪ್ರಯತ್ನ ಪಡುತ್ತಾರೆ.

• ನಿಮ್ಮನ್ನು ಪ್ರೀತಿಸುವ ಪ್ರಾಮಾಣಿಕ ವ್ಯಕ್ತಿಗಳು ಮೊದಲು ನಿಮ್ಮನ್ನು ಗೌರವಿಸುತ್ತಾರೆ. ಜೊತೆಗೆ ನಿಮ್ಮ ಪ್ರೀತಿ, ನಿರ್ಧಾರ ಮತ್ತು ಭಾವನೆಗಳನ್ನು ಗೌರವಿಸುತ್ತಾರೆ. ಹಾಗಾಗಿ ಇಂತಹ ವ್ಯಕ್ತಿಗಳು ಪ್ರಾಮಾಣಿಕವಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •