ನೀವು ಪೇಟಿಎಂ ಆ್ಯಪ್ ಬಳಕೆ ಮಾಡುತ್ತಿದ್ದರೆ ನಿಮಗೊಂದು ಸಂತಸದ ಸುದ್ದಿ ಇಲ್ಲಿದೆ. ಪೇಟಿಎಂ ತನ್ನ ಗ್ರಾಹಕರಿಗೆ ಒಳ್ಳೆಯ ಸೌಕರ್ಯವೊಂದನ್ನು ಕಲ್ಪಿಸುತ್ತಿದೆ. ಅದೇನೆಂದರೆ ಭಾರತದ ಡಿಜಿಟಲ್ ಫೈನಾನ್ಸ್ ಸೇವೆಗಳ ಪ್ಲಾಟ್ ಫಾರ್ಮ್ ಪೇಟಿಎಂ ತನ್ನ 1 ಮಿಲಿಯನ್ ಗ್ರಾಹಕರಿಗೆ ಅನುಕೂಲವಾಗುವಂತೆ ತ್ವರಿತ ವೈಯಕ್ತಿಕ ಸಾಲ ಸೇವೆ ಪ್ರಾರಂಭಿಸಿದೆ.

ವರ್ಷದ 365 ದಿನಗಳ 24×7 ಸಕ್ರಿಯವಾಗಿರುವ ಈ ಸೇವೆಯನ್ನು ಬಳಸಿ 2 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಲ ಪಡೆಯಬಹುದು. ಸಾರ್ವಜನಿಕ ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ ಕೂಡ ಈ ಸೇವೆ ಲಭ್ಯವಾಗಲಿದೆ.

ಈ ಮೂಲಕ ಇನ್ನುಮುಂದೆ ನೀವು ಮನೆಯಲ್ಲೇ ಕೂತು, ಮೊಬೈಲ್ ಮೂಲಕ ಆನ್ಲೈನ್ನಲ್ಲೇ ಲೋನ್ ಫಾರ್ಮ್ ತುಂಬಬಹುದು. ಸಾಲಕ್ಕಾಗಿ ನೀಡುವ ದಾಖಲೆಯನ್ನು ಯಾವುದೇ ಬ್ಯಾಂಕ್ ಗೆ ಹೋಗಿ ನೀಡುವ ಅವಶ್ಯಕತೆ ಇಲ್ಲ. ಸಾಲ ಪಡೆಯಲು ನೀವು ಸೂಕ್ತ ದಾಖಲೆ ನೀಡುವುದು ಮಾತ್ರ ಕಡ್ಡಾಯ.

ಈ ಸೇವೆ ನೀಡಲು ಸಾಕಷ್ಟು ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪೇಟಿಎಂ ಜತೆ ಒಪ್ಪಂದ ಮಾಡಿಕೊಂಡಿವೆ. ಬೀಟಾ ಹಂತದಲ್ಲಿ ಪೇಟಿಎಂ ಸುಮಾರು 400 ಗ್ರಾಹಕರಿಗೆ ಸಾಲ ನೀಡುತ್ತಿದೆ. 10 ಲಕ್ಷ ಜನರಿಗೆ ಸಾಲ ನೀಡುವ ಗುರಿಯನ್ನು ಪೇಟಿಎಂ ಹೊಂದಿದೆ. 18-36 ತಿಂಗಳ ಒಳಗಾಗಿ ನೀವು ಸಾಲವನ್ನು ಹಿಂದಿರುಗಿಸಬೇಕು. ಅವಧಿಯನ್ನು ಆಧರಿಸಿ ಇಎಂಐ ನಿರ್ಧಾರವಾಗುತ್ತದೆ.

ಸಾಲ ಪಡೆಯಲು ಪೇಟಿಎಂನಲ್ಲಿ ಫೈನಾನ್ಶಿಯಲ್ ಸರ್ವಿಸ್ ಸೆಕ್ಷನ್ ಗೆ ತೆರಳಿ, ಪರ್ಸನಲ್ ಲೋನ್ ಟ್ಯಾಬ್ ಕ್ಲಿಕ್ ಮಾಡಿ ಮುಂದುವರೆಯಿರಿ. ಪೆಟಿಎಂ ತನ್ನ ಗ್ರಾಹಕರಿಗೆ 2 ಲಕ್ಷ ರೂ.ಗಳವರೆಗೆ ಸಾಲ ಪಡೆಯುವ ಸೌಲಭ್ಯವನ್ನು ಕಲ್ಪಿಸುತ್ತಿದೆ. ಇದಕ್ಕಾಗಿ ಸಾಮಾನ್ಯ ಷರತ್ತುಗಳು ಮಾತ್ರ ಅನ್ವಯಿಸಲಿವೆ. ಯಾವುದೇ ಅಧಿಕ ತಾಪತ್ರಯ ಇಲ್ಲದೆ, ಕಡಿಮೆ ದಾಖಲೆಗಳನ್ನು ನೀಡಿ ನೀವು ಇಲ್ಲಿ ಸಾಲ ಪಡೆಯಬಹುದು. ಕೆಲವೇ ನಿಮಿಷಗಳಲ್ಲಿ ಗ್ರಾಹಕರು ಇಲ್ಲಿ ಸಾಲ ಪಡೆಯಬಹುದು.

ತ್ವರಿತ ಸಾಲ ಪಡೆಯಲು ಗ್ರಾಹಕರು ಪೇಟಿಎಂ ಆ್ಯಪ್ಮೂಲಕ ಫೈನಾನ್ಸಿಯಲ್ ಸರ್ವಿಸೆಸ್ ಆಪ್ಶನ್ ನಲ್ಲಿರುವ ಪರ್ಸನಲ್ ಲೋನ್ ಟ್ಯಾಬ್ ಮೇಲೆ ಕ್ಲಿಕ್ಕಿಸಬೇಕು. ಇದಾದ ಬಳಿಕ ನಿಮಗೆ ಕೇಳಲಾಗಿರುವ ಮಾಹಿತಿಯನ್ನು ನೀವು ಒದಗಿಸಬೇಕು ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಲಾಗುವುದು. ಒಂದು ವೇಳೆ ನೀವು ಅರ್ಹರಾಗಿದ್ದಾರೆ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಲಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •