ಕನ್ನಡ ಚಿತ್ರರಂಗದಲ್ಲಿ ಖಳನಾಯಕನ ಪಾತ್ರ ಹಾಗೂ ಪೋಷಕ ಪಾತ್ರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿದ ನಟ ಮೈಸೂರು ಲೋಕೇಶ್. ಕನ್ನಡ ಸಿನಿ ಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದ ನಟ. ಅವರ ಹೆಂಡತಿ ಸ್ಕೂಲ್ ಟೀಚರ್, ಅವರ ಇಬ್ಬರು ಮಕ್ಕಳು ಸಿನಿಮಾ ಕಲಾವಿದರು. ಅವರ ಹಿರಿಯ ಮಗಳು ಪವಿತ್ರ ಲೋಕೇಶ್. ಹೌದು ನಮಗೆಲ್ಲಾ ತಿಳಿದಿರುವಂತೆ ಪವಿತ್ರಾ ಲೋಕೇಶ್ ಒಬ್ಬ ಸಿನಿಮಾ ನಟಿ. ಪವಿತ್ರ ಲೋಕೇಶ್ 9ನೇ ತರಗತಿ ಓದುತ್ತಿರುವಾಗ ಮೈಸೂರ್ ಲೋಕೇಶ್ ಅವರು ನಿಧನರಾಗಿದ್ದರು.

ಐಎಎಸ್ ಅಧಿಕಾರಿ ಆಗಬೇಕೆಂದ ಪವಿತ್ರ ಲೋಕೇಶ್ ಅವರು ತಂದೆಯ ನಿಧನದ ನಂತರ, ತಾಯಿಗೆ ಸಹಾಯವಾಗಲೆಂದು ತಮ್ಮ ಓದಿನ ಜೊತೆಗೆ ನಟನೆಯನ್ನು ಶುರುಮಾಡಿದರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ಮೈಸೂರು ಲೋಕೇಶ್ ಅವರು ಹೆಸರಾಂತ ನಟರಾದರು ಕೂಡ, ಅವರ ಮಗಳ ಚಿತ್ರರಂಗದ ಜೀವನ ಅಷ್ಟು ಸುಲಭಕ್ಕೆ ದೊರೆತದ್ದಲ್ಲ. ಪವಿತ್ರ ಲೋಕೇಶ್ ಅವರಿಗೆ ಪ್ರಾರಂಭದ ದಿನಗಳಲ್ಲಿ ಅಂದುಕೊಂಡಂತೆ ಅವಕಾಶಗಳು ಸಿಗಲಿಲ್ಲ  ಒಂದು ಸಂದರ್ಶನದಲ್ಲಿ ಅವರೇ ಹೇಳಿಕೊಂಡಂತೆ ಅವರ ಎತ್ತರ ಹಾಗೂ ಅವರಿಗಿದ್ದ ನಾಚಿಕೆಯ ಸ್ವಭಾವ ಅವರಲ್ಲಿದ್ದ ಮೈನಸ್ ಪಾಯಿಂಟ್ ಆಗಿತ್ತು. ಹಾಗಾಗಿ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಆದಕಾರಣ ಸುಮಾರು ಒಂದು ವರ್ಷಗಳ ಕಾಲ ಸಿನಿಮಾರಂಗವನ್ನು ತ್ಯಜಿಸಿ.

pavitra-Lokesh

ಕಂಪನಿಯೊಂದರಲ್ಲಿ ಅಸಿಸ್ಟೆಂಟ್ ಎಚ್ ಆರ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ಕೇಳಿಬಂದಿತ್ತು. ಮತ್ತೆ ಸಿನಿಮಾ ರಂಗಕ್ಕೆ ಮರಳಿದ ಪವಿತ್ರ ಲೋಕೇಶ್ ಅವರು ನಾಯಕಿ ಪಾತ್ರಕ್ಕಾಗಿ ಕಾಯದೆ ತಮಗೆ ಸಿಕ್ಕ ಪೋಷಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಟಿಸಲು ಶುರು ಮಾಡಿದರು.

ಜೊತೆಗೆ ನವರಸನಾಯಕ ಜಗ್ಗೇಶ್, ಶಿವಣ್ಣ ಅವರ ಜೊತೆ ನಾಯಕಿ ನಟಿಯಾಗಿ ಸಹ ನಟಿಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಡ್ಯಾನ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಕನ್ನಡದ ಟಾಪ್ ನಟಿಯಾಗಿ ಮಿಂಚಿದ್ದ ನಟಿ ಪವಿತ್ರ ಲೋಕೇಶ್ ಅವರ ಗಂಡ  ಸುಚೇಂದ್ರ ಪ್ರಸಾದ್ ಅವರು ಸಹ ಪ್ರಸಿದ್ಧ ಕನ್ನಡದ ಖ್ಯಾತ ನಟ ಅವರು ಪೋಷಕ ಮತ್ತು ಖಳನಾಯಕನಾಗಿ ಅಭಿನಯಿಸಿದ್ದಾರೆ .ಅನೇಕ ಕಿರಿ ತೆರೆ ಧಾರಾವಾಹಿಗಳಲ್ಲೂ ಸಹ ನಟಿಸಿದ್ದಾರೆ  

ತೆಲುಗಿನಲ್ಲಿ ಸುಮಾರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಪವಿತ್ರ ಲೋಕೇಶ್. ಹೌದು ಪವಿತ್ರ ಲೋಕೇಶ್ ಅವರಿಗೆ ಸಿನಿಮಾರಂಗದಲ್ಲಿ ಅವಕಾಶ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟು ಸಿನಿಮಾರಂಗದಲ್ಲಿ ಹೆಸರು ಮಾಡಿ. ಇಂದು ಕನ್ನಡ ಚಿತ್ರರಂಗದ ಹೆಮ್ಮೆಯ ನಟಿಯಾಗಿದ್ದಾರೆ ಪವಿತ್ರ ಲೋಕೇಶ್. ಈ ವಿಷಯ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಬಾಕ್ಸಲ್ಲಿ ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •