ಕನ್ನಡದ ಹೆಸರಾಂತ ಹಾಸ್ಯನಟ ಮೈಸೂರು ಲೋಕೇಶ್ ಅವರ ಪುತ್ರಿಯಾದ ಪವಿತ್ರ ಲೋಕೇಶ್ ಅವರ ಬಗ್ಗೆ ನಿಮಗೆಷ್ಟು ಗೊತ್ತು? ಪವಿತ್ರ ಲೋಕೇಶ್ ಅವರ ತಂದೆ ಸ್ಯಾಂಡಲ್​ವುಡ್​​ನ ಪ್ರಖ್ಯಾತ ಹಾಸ್ಯ ನಟ ಮೈಸೂರು ಲೋಕೇಶ್. ಇವರ ಮನೋಜ್ಞ ಅಭಿನಯದಿಂದ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾರೆ. ಇನ್ನು ಪವಿತ್ರಾ ಲೋಕೇಶ್ ಅವರ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡ್ತಾಯಿದ್ದಾರೆ. ಇವರ ಸಹೋದರ ಆದಿ ಲೋಕೇಶ್ ಸಹ ಕನ್ನಡದ ಅನೇಕ ಸಿನಿಮಾಗಳಲ್ಲಿ ಸಹಾಯಕ ಕಲಾವಿದನಾಗಿ, ಖ’ಳನಾಯಕನಾಗಿ ಮೈನ್​ ಸ್ಟ್ರೀಮ್​​ನಲ್ಲಿ ಗುರುತಿಸಿಕೊಂಡಿದ್ದಾರೆ.

ಪವಿತ್ರ ಲೋಕೇಶ್ ಅವರ ಗಂಡ ಸುಚೇಂದ್ರ ಪ್ರಸಾದ್ ಸಹ ಪ್ರಖ್ಯಾತ ಕಲಾವಿದರಲ್ಲಿ ಒಬ್ಬರು 1979ರಲ್ಲಿ ಮೈಸೂರಿನಲ್ಲಿ ಪವಿತ್ರ ಲೋಕೇಶ್ ಅವರು ಜನಿಸ್ತಾರೆ, ಎಲ್ಲ ಮಕ್ಕಳಂತೆ ಆಟವಾಡುತ್ತಾ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸ್ತಾ ಪವಿತ್ರ ಲೋಕೇಶ್ ಅವರು ಬಾಲ್ಯವನ್ನ ಕಳೆಯುತ್ತಾರೆ. ಮುಂದಿನ ದಿನಗಳಲ್ಲಿ ತಾನೂ ವೀಕ್ಷಕ ಪ್ರಭುಗಳ ನೆಚ್ಚಿನ ಕಲಾವಿದೆಯಾಗ್ತಾನೆ ಎನ್ನುವ ಕಿಂಚಿಷ್ಟೂ ಕಲ್ಪನೆ ಪವಿತ್ರಾ ಲೋಕೇಶ್ ಅವರಿಗೆ ಇರಲಿಲ್ಲ. ಒಂದು ದಿನ ನಾಡು ಕಂಡ ಬ್ಯುಟಿಫುಲ್ ಆ್ಯಕ್ಟರ್, ರೆಬಲ್​ಸ್ಟಾರ್ ಅಂಬರೀಶ್ ಅವರು ಪವಿತ್ರಾ ಲೋಕೇಶ್ ಅವರಿಗೆ ಬಣ್ಣ ಹಚ್ಚಲು ಪ್ರೇರೇಪಿಸ್ತಾರೆ, ನೀವ್ಯಾಕೆ ನಟಿಸಬಾರದಮ್ಮ ಅಂತ ಸಲಹೆ ಕೊಡ್ತಾರೆ.

ನೋಡಲು ಸುಂರವಾಗಿದ್ದ ಪವಿತ್ರಾ ಲೋಕೇಶ್ ಅವರಿಗೂ ಬಣ್ಣ ಹಚ್ಚುವ ಆಸೆಯಾಗಿ, ಅಂಬಿ ಸಲಹೆಯಂತೆ ಬಣ್ಣ ಹಚ್ತಾರೆ. ಮಿಸ್ಟರ್ ಅಂಬರೀಶ್ ಚಿತ್ರದಲ್ಲಿ ನಟಿಸಿ ನಿರ್ಮಾಪಕರ ಕಣ್ಣು ತನ್ನತ್ತ ಬೀಳುವಂತೆ ಮಾಡ್ತಾರೆ. ನಂತರ ಉಲ್ಟಾಪಲ್ಟಾ, ಜನಮುದ ಜೋಡಿ, ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸ್ತಾರೆ. ಆದರೆ ಇವರಿಗೆ ಅಪಾರ ಹೆಸರು ತಂದುಕೊಟ್ಟ ಸಿನಿಮಾ ಮಾತ್ರ, ಜನುಮದ ಜೋಡಿ, ಈ ಸಿನಿಮಾದಲ್ಲಿ ಇವರ ಅಭಿನಯಕ್ಕೆ ಅನೇಕರು ತಲೆಬಾಗಿದ್ದಾರೆ.

ನಂತರ ತೆಲುಗು ಸಿನಿಮಾಗಳಲ್ಲಿಯೂ ಸಹ ಪವಿತ್ರಾ ಲೋಕೇಶ್ ಅವರು ನಟಿಸಲಿಕ್ಕೆ ಶುರು ಮಾಡ್ತಾರೆ, ಹಿರಿತೆರೆಯಿಂದ ಕಿರುತೆರೆಗೆ ಬಂದು ಅಲ್ಲಿಯೂ ಸಹ ಜನರ ಪ್ರೀತಿ ವಿಶ್ವಾಸವನ್ನ ಗಳಿಸಿದ್ದಾರೆ. ಇತ್ತೀಚಿಗೆ ಪವಿತ್ರಾ ಲೋಕೇಶ್ ಅವರು ದಿಯಾ ಅನ್ನೋ ಒಂದು ಮಧುರ ಮನಸ್ಸುಗಳ ಪ್ರೇಮಕತೆಯ ಸುತ್ತಾ ತಿರುಗುವ ಸಿನಿಮಾದಲ್ಲಿ ತಾಯಿ ಪಾತ್ರವನ್ನ ಮಾಡಿದ್ದರು. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಚಿತ್ರಪ್ರೇಮಿಗಳು ಸಲಾಂ ಹೊಡೆದಿದ್ದಾರೆ. ಹೀಗೆ ಕನ್ನಡ ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿ ಒಳ್ಳೆ ಕಲಾವಿದೆ ಎನಿಸಿಕೊಂಡಿರುವ ಪವಿತ್ರಾ ಲೋಕೇಶ್ ಅವರ ಅಭಿನಯದ ಬಗ್ಗೆ ನೀವೇನು ಹೇಳ್ತಿರಾ..
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •