ಸಾಮಾನ್ಯವಾಗಿ ಜನರು ಆಸ್ತಿ ಮತ್ತು ಹೊಲಗಳನ್ನ ಹೊಂದಿರುತ್ತಾರೆ, ಇನ್ನು ಕೆಲವು ಆಸ್ತಿಗಳನ್ನ ಜನರು ಖರೀದಿ ಮಾಡಿ ತೆಗೆದುಕೊಂಡರೆ ಇನ್ನು ಕೆಲವು ಆಸ್ತಿಗಳು ಪೂರ್ವಜರಿಂದ ಬಂದಿರುತ್ತದೆ. ಇನ್ನು ಹೆಚ್ಚಿನ ಜನ ರೈತರು ತಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲೇ ಈಗ ವ್ಯವಸಾಯವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ರೈತರು ತಮ್ಮ ಪೂರ್ವಜರಿಂದ ಅಂದರೆ ತಮ್ಮ ತಾತ ಮತ್ತು ಮುತ್ತಾತರಿಂದ ಬಂದ ಆಸ್ತಿಯಲ್ಲಿ ವ್ಯವಸಾಯವನ್ನ ಮಾಡುತ್ತಿದ್ದು ಆ ಆಸ್ತಿಯನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ಆಗದೆ ತುಂಬಾ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರೈತರು ಮತ್ತು ಕೆಲವು ಜನರು ತಮ್ಮ ಪಿತ್ರಾರ್ಜಿತ ಆಸ್ತಿಯನ್ನ ವ್ಯವಸಾಯ ಅಥವಾ ಉಳುಮೆಯನ್ನ ಮಾಡುತ್ತಿದ್ದು ಆ ಆಸ್ತಿಯನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ಎಷ್ಟೇ ಸರ್ಕಾರೀ ಕಚೇರಿಗಳಿಗೆ ಅಲೆದಾಡಿದರು ಕೂಡ ಅವರಿಂದ ಆ ಆಸ್ತಿಯನ್ನ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಆಗದೆ ಹೈರಾಣಾಗಿ ಹೋಗಿದ್ದಾರೆ ಎಂದು ಹೇಳಬಹುದು.

ಹೌದು ಈಗಿನ ಕೆಲವು ಕಾನೂನುಗಳಿಂದ ರೈತರು ತಾವು ವ್ಯವಸಾಯ ಮಾಡುತ್ತಿರುವ ಆಸ್ತಿಯನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ಕಣ್ಣೀರಿಡುವ ಪರಿಸ್ಥಿತಿ ಈಗ ಎದುರಾಗಿದೆ. ಇನ್ನು ಇಂತಹ ಕಷ್ಟವನ್ನ ಅನುಭವಿಸುತ್ತಿರುವ ಜನರಿಗೆ ಈಗ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದ್ದು ಸುಲಭವಾಗಲಿ ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನ ವ್ಯವಸಾಯ ಅಥವಾ ಉಳಿಮೆ ಮಾಡುತ್ತಿರುವ ರೈತರ ಅಥವಾ ಉತ್ತರಾಧಿಕಾರಿಯ ಹೆಸರಿಗೆ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಇಂತಹ ಆಸ್ತಿಯನ್ನ ಉಳುಮೆ ಅಥವಾ ವ್ಯವಸಾಯ ಮಾಡುತ್ತಿರುವ ರೈತನ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಪೌತಿ-ಖಾತೆ-ಆಂದೋಲನ

ಹೌದು ಕೃಷಿ ಆಸ್ತಿಯ ಮಾಲೀಕತ್ವದ ಕುರಿತಂತೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನ ನಿವಾರಣೆ ಮಾಡಲು ಸರ್ಕಾರ ಸರ್ಕಾರ ಈಗ ಸೂಕ್ತವಾದ ಕ್ರಮವನ್ನ ಕೈಗೊಂಡಿದೆ ಎಂದು ಹೇಳಬಹುದು. ಹೌದು ರಾಜ್ಯ ಸರ್ಕಾರ ಈಗ ಪೌತಿ ಖಾತೆ ಆಂದೋಲನವನ್ನ ಮತ್ತೆ ಚುರುಕು ಮಾಡಲು ಮುಂದಾಗಿದೆ, ಜಿಲ್ಲಾಧಿಕಾರಿಯಿಂದ ಗ್ರಾಮ ಲೆಕ್ಕಾಧಿಕಾರಿ ವರೆಗಿನ ಅಧಿಕಾರಿಗಳು ನಿಭಾಯಿಸಬೇಕಾಗಿರುವ ಜವಾಬ್ದಾರಿ ಕೈಗೊಳ್ಳಬೇಕಿರುವ ಕ್ರಮಗಳು ಸೇರಿದಂತೆ ವಿತ್ರುತ ಮಾರ್ಗಸೂಚಿಯನ್ನ ಭೂಕಂದಾಯ ಇಲಾಖೆ ಈಗ ಹೊರಡಿಸಿದೆ ಎಂದು ಹೇಳಬಹುದು. ಇನ್ನು ಭೂಕಂದಾಯ ಇಲಾಖೆ ಹೊರಡಿಸಿದ ಮಾರ್ಗಸೂಚಿಯಂತೆ ಪೌತಿಖಾತೆ ಆದೋಲನ ನಿರಂತರ ಆಗಿದ್ದು ತಹಶೀಲ್ದಾರರು ನೇತೃತ್ವ ವಹಿಸಿ ಹೆಚ್ಚಿನ ರೈತರು ಇದರ ಪ್ರಯೋಜನವನ್ನ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಲಾಗಿದೆ.

ಕೃಷಿ ಜಮೀನಿನ ಮಾಲೀಕ ಮರಣ ಹೊಂದಿದ ನಂತರ ಆ ಭೂಮಿಯ ಮಾಲೀಕತ್ವ ಉತ್ತರಾಧಿಕಾರ ಹೆಸರಿಗೆ ವರ್ಗಾವಣೆ ಆಗದೆ ಸಮಸ್ಯೆ ಎದುರಾಗುತ್ತದೆ, ಆದರೆ ಪೌತಿಖಾತೆ ಆಂದೋಲನದ ಮೂಲಕ ಜಮೀನಿನ ಮಾಲೀಕತ್ವ ಉತ್ತರಾಧಿಕಾರಿಗಳಿಗೆ ಸುಲಭವಾಗಿ ಸಿಗುತ್ತದೆ. ಇನ್ನು ಪೌತಿಖಾತೆ ಆಂದೋಲನದ ಮೂಲಕ ಜಮೀನಿನ ಅಭಿವೃದ್ಧಿಗೆ ಸಾಲ, ಬೆಳೆ ನಷ್ಟಕ್ಕೆ ಪರಿಹಾರ ವಿಮೆ ಹೀಗೆ ಮೊದಲಾದ ಪ್ರಯೋಜನ ಪಡೆಯಲು ಅನುಕೂಲ ಆಗುತ್ತದೆ, ಸ್ನೇಹಿತರೆ ಸರ್ಕಾರ ಕೊಟ್ಟಿರುವ ಈ ಸಿಹಿ ಸುದ್ದಿಯನ್ನ ಇಂತಹ ಸಮಸ್ಯೆ ಅನುಭವಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •