ಕನ್ನಡ ಚಿತ್ರರಂಗದಲ್ಲಿ ಮುಗ್ಧತೆಯಿಂದ ಫೇಮಸ್ ಆದ ನಟಿಯರಲ್ಲಿ ಒಬ್ಬರು ಕಾರುಣ್ಯ ರಾಮ್. ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರ ಜೊತೆ ವಜ್ರಕಾಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದರು. ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 4 ನಲ್ಲಿ ಸ್ಪರ್ಧಿಯಾಗಿ ಬಿಗ್ ಮನೆ ಸೇರಿದ್ದರು, ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಲವಲವಿಕೆಯ ಗುಣ ಹಾಗೂ ಮುಗ್ಧತೆಯಿಂದ ಎಲ್ಲರ ಮನ ಗೆದ್ದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಕಾರುಣ್ಯ ರಾಮ್ ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ ಸುಮಾರು 2.4 ಲಕ್ಷ ಫಾಲೋವರ್ಸ್ ಗಳಿದ್ದಾರೆ. ಅಭಿಮಾನಿಗಳ ಜೊತೆ ತಮ್ಮ ಜೀವನದ ಸುಂದರ ಕ್ಷಣಗಳ ಬಗ್ಗೆ ಮತ್ತು ತಮ್ಮ ಕೆರಿಯರ್ ನ ಬಗ್ಗೆ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿ ಅಪ್ಡೇಟ್ ನೀಡುತ್ತಾರೆ ಕಾರುಣ್ಯ ರಾಮ್. ಇದೀಗ ತಮ್ಮ ಜೀವನದ ಮತ್ತೊಂದು ಸಂತೋಷದ ಸಮಾಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಕಾರುಣ್ಯ ರಾಮ್ ಅವರು ಹೊಸ ಮನೆ ಕಟ್ಟಿಸಿದ್ದು, ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಹೊಸ ಮನೆ ಗೃಹ ಪ್ರವೇಶದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

“ಕಂಡ ಕನಸನ್ನು ಖಂಡಿತವಾಗಿ ನನಸಾಗಬಹುದು.. ಕೊನೆಗೂ, ನಮ್ಮ ಮತ್ತೊಂದು ಕನಸನ್ನು ನನಸು ಮಾಡಿದ್ದೇವೆ.. ಈ ಸುಂದರವಾಗಿ ಮನೆಯನ್ನು ಹಡುಕುವ ಕೆಲಸ ಒಂದು ವರ್ಷದ ಹಿಂದೆ ಶುರುವಾಯಿತು. ಇಂದು ಅಕ್ಷಯ ತೃತೀಯದ ವಿಶೇಷವಾಗಿ ಈ ಸುಂದರವಾಗಿ ಮನೆಗೆ ಪ್ರವೇಶ ಮಾಡಿದ್ದೇವೆ.. ಪ್ರತಿಕ್ಷಣವು ನಮಗೆ ಪ್ರೀತಿ ಮತ್ತು ಪ್ರೋತ್ಸಾಹ ನೀಡಿದ ಎಲ್ಲರಿಗು ಧನ್ಯವಾದಗಳು…” “ಪಿಎಸ್:- ಪ್ರಸ್ತುತ ನಡೆಯುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಮೊದಲು ಗೃಹ ಪ್ರವೇಶದ ದಿನಾಂಕ ನಿಗದಿಯಾಗಿತ್ತು.

ಪ್ರಸ್ತುತ ನಡೆಯುತ್ತಿರುವ ಘಟನೆಗಳಿಂದ ಸಂಭ್ರಮಾಚರಣೆ ಮಾಡಿಲ್ಲ. ನಿಮ್ಮೆಲ್ಲರ ಕಾಳಜಿಯನ್ನು ನಾನು ಗೌರವಿಸುತ್ತೇನೆ. ನಿಮ್ಮ ಬಗ್ಗೆ ನನಗು ಕಾಳಜಿ ಇದೆ..” ಎಂದು ಕ್ಯಾಪ್ಶನ್ ಬರೆದು ತಮ್ಮ ಹೊಸ ಮನೆ ಗೃಹ ಪ್ರವೇಶದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಮತ್ತು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಕಾರುಣ್ಯ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಕಾರುಣ್ಯ ರಾಮ್ ಅವರು ಇನ್ನೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ ಎಂದು ಆಶಿಸೋಣ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರ ರಂಗದ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ಕನ್ನಡ ಚಿತ್ರರಂಗದಲ್ಲಿ ಮುಗ್ಧತೆಯಿಂದ ಫೇಮಸ್ ಆದ ನಟಿಯರಲ್ಲಿ ಒಬ್ಬರು ಕಾರುಣ್ಯ ರಾಮ್. ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರ ಜೊತೆ ವಜ್ರಕಾಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದರು. ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 4 ನಲ್ಲಿ ಸ್ಪರ್ಧಿಯಾಗಿ ಬಿಗ್ ಮನೆ ಸೇರಿದ್ದರು, ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಲವಲವಿಕೆಯ ಗುಣ ಹಾಗೂ ಮುಗ್ಧತೆಯಿಂದ ಎಲ್ಲರ ಮನ ಗೆದ್ದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಕಾರುಣ್ಯ ರಾಮ್ ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •