ಉಚಿತ ಬಸ್ ಪಾಸ್

ಮಹಿಳೆಯರಿಗೆ ಉಚಿತ ಬಸ್ ಪಾಸ್! ಇದನ್ನು ಪಡೆಯುವುದು ಹೇಗೆ ನೋಡಿ?

Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ಬೆಂಗಳೂರಿನಾದ್ಯಂತ ನೂರಾರು ಗಾರ್ಮೆಂಟ್ಸ್ ಗಳು ತಲೆ ಎತ್ತಿವೆ. ಇವುಗಳಲ್ಲಿ ಕೆಲಸ ಮಾಡುವ ಬಡ ಮಹಿಳಾ ಸಿಬ್ಬಂದಿಗೆ ಇದೀಗ ರಾಜ್ಯ ಸರ್ಕಾರ ಬಂಪರ್ ಬಹುಮಾನವನ್ನು ನೀಡಿದೆ. ಹೌದು.. ಓದುಗರೆ ಇದು ಮಹಿಳಾ ಸಿಬ್ಬಂದಿಗೆ ತುಂಬಾನೇ ಅನುಕೂಲವಾಗಲಿದೆ. ಹಾಗೆಯೇ ಇದು ಮಹಿಳಾ ಕಾರ್ಮಿಕರಿಗೆ ಸುರಕ್ಷತೆ ಜೊತೆಗೆ ಭದ್ರತೆಯನ್ನು ಒದಗಿಸಿದೆ. ಆರ್ಥಿಕವಾಗಿಯೂ ಸ್ವಲ್ಪ ಹೊರೆಯನ್ನು ಕಡಿಮೆಗೊಳಿಸಿದೆ. ಇನ್ನು ಮುಂದೆ ಆಟೋಗಳಿಗೆ ಹೆಚ್ಚಿನ ಹಣ ತೆತ್ತು ಗಾರ್ಮೆಂಟ್ಸ್ ಗೆ ಪ್ರಯಾಣಿಸುವುದನ್ನು ರಾಜ್ಯ ಸರ್ಕಾರ ತಪ್ಪಿಸಿದೆ.

ಇದು ಮಹಿಳಾಮನಿಯರಿಗೆ ಅತೀವ ಸಂತೋಷ ತಂದಿದೆ. ಆದ್ರೆ, ಈ ಪ್ರೀ ಪಾಸನ್ನು ಪಡೆಯುವುದು ಹೇಗೆ? ಯಾರು ಇದನ್ನ ಕೊಡುತ್ತಾರೆ ಅಂತ ನಾವು ನಿಮಗೆ ಹೇಳ್ತೀವಿ. ನೀವು ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿ ಆಗಿದ್ದರೆ ನೀವು ಫ್ರೀ ಪಾಸ್ ಪಡೆಯಿರಿ. ನಿಮ್ಮ ಜೊತೆಗಾರರು ತಿಳಿಸಿ.

ಬಿಎಂಟಿಸಿಯಿಂದ ನಗರದ 3 ಲಕ್ಷ ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಇದನ್ನು ವನಿತಾ ಸಂಗಾತಿ ಯೋಜನೆಯ ಅಡಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರಿಗೆ ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. ಇದು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ನೀಡುವುದಾಗಿ ಹೇಳಿದ್ದರು. ಅಂದು ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಅವರು ವನಿತಾ ಸಂಗಾತಿ ಹೆಸರಿನಲ್ಲಿ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದರು. ಬೆಂಗಳೂರಿನದ್ಯಂತ ಸುಮಾರು 800 ಕ್ಕೂ ಹೆಚ್ಚು ಗಾರ್ಮೆಂಟ್ಸ್ಗಳಿವೆ. ಇವುಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಶೇ.80 ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರಿದ್ದು, ಈ ನೌಕರರು ವನಿತಾ ಸಂಗಾತಿ ಯೋಜನ ಫಲಾನುಭವಿಗಳಾಗಬಹುದು.

ನೋಂದಾಯಿತ ಕಾರ್ಮಿಕರಿಗಷ್ಟೇ ಉಚಿತ ಬಸ್ ಪಾಸ್ ಯೋಜನೆ Free BMTC Passes For Construction Workers - YouTube

ಈ ಎಲ್ಲಾ ಮಹಿಳೆಯರು ಉಚಿತ ಬಿಎಂಟಿಸಿ ಬಸ ನ ಉಚಿತ ಬಸ್ ಪಾಸಿನ್ನು ಪಡೆಯಬಹುದು. ಈ ಹಣವನ್ನ ಸರ್ಕಾರ 40% ಗಾರ್ಮೆಂಟ್ಸ್ ಮಾಲೀಕರು 40% ಬಿಎಂಟಿಸಿ 20% ಭರಿಸಲಿದೆ. ಕಾರ್ಮಿಕ ಸಂಘಟನೆಗಳು ಸರ್ಕಾರದ ಈ ಆದೇಶವನ್ನು ಸ್ವಾಗತಿಸಿದ್ದು ಉತ್ತಮ ಕಾರ್ಯವಾಗಿದೆ. ಇನ್ನೂ ವನಿತಾ ಸಂಗಾತಿ ಪಾಸು ಪಡೆಯಲಿಚ್ಚಿಸುವ ಗಾರ್ಮೆಂಟ್ಸ್‌ ಮಹಿಳಾ ನೌಕರರು ಕರ್ತವ್ಯ ನಿರ್ವಹಿಸುವ ಗಾರ್ಮೆಂಟ್ಸ್‌ ಕಾರ್ಖಾನೆಯ ಮಾಲೀಕರಿಗೆ ಮೊದಲು ಮನವಿ ಸಲ್ಲಿಸಬೇಕು. ಗಾರ್ಮೆಂಟ್ಸ್‌ ಮಾಲೀಕರು ಪಾಸು ಪಡೆಯುವ ಮಹಿಳಾ ಕಾರ್ಮಿಕರ ಪಟ್ಟಿಯನ್ನು, ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ಇ ಮೇಲ್‌ ವಿಳಾಸ welfarecommissioner123@gmail.comಗೆ ಸಲ್ಲಿಸಬೇಕು. ಇವುಗಳ ಜೊತೆಗೆ ಗಾರ್ಮೆಂಟ್ಸ್ ಮಾಲೀಕರು ಮಹಿಳಾ ಉದ್ಯೋಗಿಗಳ ದೃಢೀಕರಣ ಪತ್ರ & ಗುರುತಿನ ಚೀಟಿ ಸಂಗ್ರಹಿಸಬೇಕು.

ಉದ್ಯೋಗಿಗಳ ಪ್ರಮಾಣಪತ್ರದ ಜೊತೆಗೆ ಭಾವಚಿತ್ರ ಪಡೆದಿರಬೇಕು. ಹೀಗೆ ಸಂಗ್ರಹಿಸಿದ ಎಲ್ಲಾ ದಾಖಲೆಯನ್ನು ಗಾರ್ಮೆಂಟ್ಸ್ ಮಾಲೀಕರೇ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಈ-ಮೇಲ್ ಗೆ ಕಳುಹಿಸಬೇಕು. ಇದೇ ವೇಳೆ ಗಾರ್ಮೆಂಟ್ಸ್ ಮಾಲೀಕರು ತಮ್ಮ ಪಾಲಿನ 40% ಪಾಸ್ ಮೊತ್ತ ಆರ್‌ಟಿಜಿಎಸ್ ಪಾವತಿ ಮಾಡುತ್ತದೆ. ಹೀಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರ ವಿವರಗಳು ಮಂಡಳಿ BMTCಗೆ ರವಾನೆ ಮಾಡುತ್ತದೆ. ಮಂಡಳಿಯಿಂದ ಪಟ್ಟಿಗನುಸಾರವಾಗಿ BMTC ಪಾಸ್ ವಿತರಣೆ ಮಾಡಲಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದ ಪಾಸ್ ಕೌಂಟರ್ ಗಳಿಂದ ಫಲಾನುಭವಿಗಳು ಪಾಸ್ ಪಡೆದುಕೊಳ್ಳಬಹುದು. BMTC ಸಾಮಾನ್ಯ ಬಸ್ ಗಳಿಗೆ ಮಾತ್ರ ಪಾಸ್ ಅನ್ವಯವಾಗಲಿದೆ, ವೋಲ್ವೋಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಇದರ ಪ್ರಯೋಜನವನ್ನು ನೀವು ಪಡೆಯಬಹುದಾಗಿದೆ. ಜೊತೆಗೆ ನಿಮ್ಮ್ ಜೊತೆಗಾರರಿಗೂ ತಿಳಿಸಿ.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...