ನಮಸ್ಕತ ಸ್ನೇಹಿತರೆ,ಪಾರ್ಲೆಜಿ ಬಿಸ್ಕೆಟ್ ಅನ್ನು ತಿನ್ನದೇ ಇರುವವರು ಯಾರೂ ಇರುವುದಿಲ್ಲ. ಏಕೆಂದರೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಈ ಬಿಸ್ಕೆಟ್ ಅನ್ನು ತಿಂದೇ ಇರುತ್ತಾರೆ. ಕೆಲವರು ಪಾರ್ಲೆಜಿ ಬಿಸ್ಕೆಟ್ ಅನ್ನು ಕಾಫಿ ಟೀ ನಲ್ಲಿ ಸೇವಿಸುತ್ತಾರೆ. ಈ ಬಿಸ್ಕೆಟ್ ಈಗಿನ ಕಾಲದಲ್ಲಿ ಬಂದಿಲ್ಲ ನಮ್ಮ ದೇಶದ ಸ್ವಾತಂತ್ರ್ಯ ಬರುವ ಮುಂಚೆಯೇ ತಯಾರಿ ಆಗುತ್ತಿದೆ. ಈ ಬಿಸ್ಕೆಟ್ಟನ್ನು ನರೋತ್ತಮ್ ಮೋಹನ್ ಲಾಲ್ ಚೌಧರಿ ಅವರು 1929 ರಂದು ಶುರು ಮಾಡುವುದಕ್ಕೆ ತಯಾರಿ ಮಾಡಿದ್ದರು. ಇದರ ಮುನ್ನ ಇವರು ಕ್ಯಾಂಡಿ ಮತ್ತು ಚಾಕೊಲೇಟ್ಸ್ ಗಳನ್ನು ತಯಾರಿ ಮಾಡಿ ಭರ್ಜರಿಯಾಗಿ ವ್ಯಾಪಾರ ಮಾಡುತ್ತಾ ಒಂದು ವರ್ಷಕ್ಕೆ 60000 ರೂ. ಗಳನ್ನು ಸಂಪಾದಿಸುತ್ತಿದ್ದರು. ಆದರೆ ಕೆಲ ವರ್ಷಗಳು ಆದ ನಂತರ ಇವರ ಚಾಕೋಲೇಟ್ ವ್ಯಾಪಾರ ಸ್ವಲ್ಪ ಕಡಿಮೆಯಾಯಿತು. ಏಕೆಂದರೆ ಇದಕ್ಕೆ ಬೇಕಾಗುವ ಸಾಮಗ್ರಿಗಳು ಹೆಚ್ಚು ವೆಚ್ಚ ಆಗಿದ್ದರಿಂದ ಇದನ್ನು ನಿಲ್ಲಿಸಲು ನಿರ್ಧರಿಸಿದರು.

ಇದರ ಜೊತೆಗೆ ಇವರು ಬಿಸ್ಕೆಟ್ ವ್ಯಾಪಾರವನ್ನು ಶುರು ಮಾಡಿದ್ದರಿಂದ ಇದರಲ್ಲಿ 4000 ಇಂದ 5000 ರೂ.ಗಳನ್ನು ಸಂಪಾದಿಸುತ್ತಿದ್ದರು. ಹಾಗಾಗಿ ಇದರಲ್ಲಿ ಬಂದ ಲಾಭದಿಂದ ತನ್ನ ವ್ಯಾಪಾರ ಮಾಡಲು ಮತ್ತೆ ಶುರು ಮಾಡಿದ್ದರು. ಜನರಿಗೆ ಬಿಸ್ಕೆಟ್ ತುಂಬಾ ಇಷ್ಟ ಆಗಿದ್ದರಿಂದ ಇದನ್ನು ಇನ್ನು ಹೆಚ್ಚಿನ ಪ್ರಮಾಣ ದಲ್ಲಿ ತಯಾರಿ ಮಾಡಲು ಬೇರೆ ದೇಶಗಳಿಗೆ ಹೋಗಿ ಮೆಷಿನ್ಸ್ ಗಳನ್ನು ಭಾರತಕ್ಕೆ ತಂದರು. ಹೀಗೆ ಮೋಹನ್ ಲಾಲ್ ಅವರು ಕಡಿಮೆ ಬೆಲೆಗೆ ಒಳ್ಳೆಯ ರುಚಿಯನ್ನು ಕೊಟ್ಟರು.

ಇದು ಎಷ್ಟು ಜನಪ್ರಿಯವಾಯಿತು ಎಂದರೆ ಪ್ರತಿದಿನವು ಈ ಬಿಸ್ಕೆಟ್ ಗಳು ಸುಮಾರು 450 ಮಿಲಿಯನ್ ಗಳಷ್ಟು ತಯಾರಿಕೆ ಆಗುತ್ತಿತ್ತು. ಹಾಗೆ ಇದಕ್ಕೆ ಮೊದಲು ಪಾರ್ಲೆ ಗ್ಲೂಕೋಸ್ ಎಂಬ ಹೆಸರನ್ನು ಇಟ್ಟಿದ್ದರು. ತದನಂತರ ಪಾರ್ಲೆ ಜಿ ಎಂದು ಬದಲಾವಣೆ ಮಾಡಿದರು. ಜಿ ಎಂದರೆ ಜೀನಿಯಸ್ ಎಂದು ಅರ್ಥ. ಇದಕ್ಕೆ ವಿರುದ್ಧವಾಗಿ ಸಾಕಷ್ಟು ಬೇರೆ ದೇಶಗಳ ಬಿಸ್ಕೆಟ್ ಗಳು ಪೈಪೋಟಿ ಮಾಡಲು ಬಂದರೂ ಅವುಗಳು ಯಾವುವು ಇದರ ಮುಂದೆ ಯಶಸ್ವಿಯಾಗಲಿಲ್ಲ.

ಇನ್ನು ಪಾರ್ಲೆಜಿ ಬಿಸ್ಕೆಟ್ ಕವರ್ ಮೇಲಿರುವ ಚಿತ್ರವನ್ನು ನೋಡಿ ಅವರು ಇರಬಹುದು ಇವರು ಇರಬಹುದು ಎಂಬ ಸಾಕಷ್ಟು ಸುಳ್ಳು ಸುದ್ದಿಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಾ . ಆದರೆ ಇದು ಸುಳ್ಳು, 1960 ರಲ್ಲಿ ಒಬ್ಬ ಕಲಾವಿದನು ಪಾರ್ಲೆಜಿ ಬಿಸ್ಕೆಟ್ ಗಾಗಿಯೇ ಚಿತ್ರವನ್ನು ಬಿಡಿಸಿದ್ದಾರೆ. ಹಾಗಾಗಿ ಈ ಚಿತ್ರವು ಕಲಾವಿದನ ಚಿತ್ರವೇ ಹೊರತು ಯಾರ ಚಿತ್ರವೂ ಅಲ್ಲ.

2003 ರಲ್ಲಿ ಪಾರ್ಲೆಜಿ ಬಿಸ್ಕೆಟ್ ಭಾರತದ ಎಲ್ಲಾ ಬಿಸ್ಕೆಟ್ ಗಳಿಗಿಂತ ತುಂಬಾ ಜನಪ್ರಿಯವಾಯಿತು. ಹಾಗೆ ಈಗಲೂ ಕೂಡ ಇದು ಯಶಸ್ವಿಯಾಗಿ ಎಲ್ಲ ಕಡೆ ಮಾರಾಟವಾಗುತ್ತಿದೆ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •