ಆನ್ಲೈನಲ್ಲಿ ಪ್ಯಾನ್ ಕಾರ್ಡ್ ವಿವರ ಬದಲಾಯಿಸೋದು ಹೇಗೆ?

ಬ್ಯಾಂಕ್ ಆಧಾರಿತ ವಿವಿಧ ವ್ಯವಹಾರಗಳಿಗೆ ಬಳಕೆ ಮಾಡುವ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಈಗ ಇ ಪ್ಯಾನ್ ಕಾರ್ಡ್ ಆಗಿ ಬದಲಾಗಿದೆ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆಯಂತೆ ಹಲವಾರು ಮಂದಿ ಹೊಸ ಕಾರ್ಡ್ ಪಡೆದುಕೊಂಡಿದ್ದಾರೆ. ಆದರೆ, ಆನ್ಲೈನಲ್ಲಿ ಪ್ಯಾನ್ ಕಾರ್ಡ್ ವಿವರ ಬದಲಾಯಿಸೋದು ಹೇಗೆ? ಎಂಬುದರ ವಿವರ ಇಲ್ಲಿದೆ ಏನಿದು ಇ ಪ್ಯಾನ್: ಎಲೆಕ್ಟ್ರಾನಿಕ್-ಪ್ಯಾನ್ ಕಾರ್ಡ್ ಇದರ ವಿಸ್ತೃತ ರೂಪ. ಇ ಪ್ಯಾನ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್ ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು.

* ಮುಖ್ಯಪುಟದ ಸರ್ವೀಸ್ ಆಯ್ಕೆಯಲ್ಲಿ ‘PAN’ ಆರಿಸಿಕೊಳ್ಳಿ * ಹೊಸ ಪುಟದಲ್ಲಿ ಡೇಟಾ ಆಯ್ಕೆಯಲ್ಲಿ ಬದಲಾವಣೆ/ತಿದ್ದುಪಡಿ ಆಯ್ಕೆ ಮೇಲೆ apply ಮಾಡಿ * PAN ಸಂಖ್ಯೆ, ಮತ್ತೆ ಪ್ರಿಂಟ್ ಮಾಡುವ ಪ್ಯಾನ್ ಕಾರ್ಡ್ ಆಯ್ಕೆ ಮಾಡಿಕೊಳ್ಳಿ. * Correct ಕೆಟಗೆರಿಯಲ್ಲಿ ಬೇರೆ ಆಯ್ಕೆ ಮಾಡಿಕೊಳ್ಳಿ. * ಹೆಸರು, ಹುಟ್ಟಿದ ದಿನಾಂಕ, ಇಮೇಲ್ ಐಡಿ ಬದಲಾವಣೆ ಮಾಡಿ ಸಬ್ಮಿಟ್ ಮಾಡಿ. * PAN ಅಪ್ಲಿಕೇಷನ್ ಅರ್ಜಿ ಮೇಲೆ ಕ್ಲಿಕ್ ಮಾಡಿ * ಇ ಕೆವೈಸಿ ಸ್ಕ್ಯಾನ್ ಕಾಪಿ ಸಲ್ಲಿಸಬೇಕಾಗುತ್ತದೆ * ಹೆಸರು, ವಿಳಾಸ, ವಯಸ್ಸು ದೃಢೀಕರಣ ಪತ್ರ, ಐಡಿ ದಾಖಲೆ, ಇತ್ಯಾದಿ ದಾಖಲೆ ಸಲ್ಲಿಸಬೇಕಾಗುತ್ತದೆ. * NSDL ಆನ್ ಲೈನ್ ಕಚೇರಿ ಮೂಲಕವೇ ದಾಖಲೆ ಸಲ್ಲಿಸಿ, ಇ ಪೇಮೆಂಟ್ ಮಾಡಿ ರಸಿತಿ ಪಡೆಯಬಹುದು. ಇದಾದ ಬಳಿಕ ತಿದ್ದುಪಡಿಯನ್ನು ಮಾಡಲಾಗುತ್ತದೆ. ಸಾಮಾನ್ಯ ಪ್ಯಾನ್ ಕಾರ್ಡ್ ಅಲ್ಲದೆ ಇ ಪ್ಯಾನ್ ಸುಲಭವಾಗಿ 10 ನಿಮಿಷದಲ್ಲಿ ಪಡೆಯಬಹುದು ಹಾಗೂ ತಿದ್ದುಪಡಿ ಕೂಡಾ ಸರಳವಾಗಿದೆ.

PAN-Card

ಇ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ? * UTI-ITSL ಮೂಲಕ ಹೊಸ ಪ್ಯಾನ್ ಪಡೆಯಲು ಬಯಸುವವರು ಹಾಗೂ ಪ್ಯಾನ್ ಕಾರ್ಡಿನಲ್ಲಿ ಬದಲಾವಣೆ ಬಯಸುವವರು ಆನ್ ಲೈನ್ ನಲ್ಲಿ ಇ-ಪ್ಯಾನ್ ಕಾರ್ಡ್ NSDL ಹಾಗೂ UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ

* ಡೌನ್ ಲೋಡ್ ಇ ಪ್ಯಾನ್ ಕಾರ್ಡ್ ಕ್ಲಿಕ್ ಮಾಡಿ * ಚಾಲ್ತಿ ಪ್ಯಾನ್ ಬದಲಾವಣೆ ಬಯಸುವವರು PAN, ಆಧಾರ್, ಹುಟ್ಟಿದ ದಿನಾಂಕ. ಇತ್ಯಾದಿ ಪ್ರಮುಖ ಮಾಹಿತಿ ನೀಡಿ. * ನಿಗದಿತ ಶುಲ್ಕವನ್ನು ಡೆಬಿಟ್/ ಕ್ರೆಡಿಟ್, ಡಿಡಿ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಿ

* 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಳಿಸಲಾಗುತ್ತದೆ. * ಪರಿಶೀಲನೆ ನಂತರ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಅಧಿಕೃತ ವಿಳಾಸವನ್ನು ತಲುಪಲಿದೆ. ಆದರೆ,ಇ ಪ್ಯಾನ್ ತಕ್ಷಣವೇ ಸಿಗುವುದರಿಂದ ಆದಾಯ ತೆರಿಗೆ ಇಲಾಖೆಯು ಕಾರ್ಡ್ ಗಳನ್ನು ಮನೆ ವಿಳಾಸಕ್ಕೆ ಕಳಿಸುವ ಅಗತ್ಯವಿಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •