ಅಂಗೈಯಲ್ಲಿ ಇರುವಂತಹ ರೇಖೆಗಳನ್ನು ನೋಡಿ ಭವಿಷ್ಯವನ್ನು ಹೇಳುವಂತಹ ಕಳೆಯು ಲೋಕ ಪ್ರಿಯವಾಗಿದೆ. ರೇಖೆಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವ, ವ್ಯವಹಾರಗಳ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿ ಅಂಗೈಯಲ್ಲಿರುವ ಚಿಹ್ನೆಯನ್ನು ಆದರಿಸಿ, ಬೆರಳುಗಳ ಎತ್ತರವನ್ನು ಆದರಿಸಿ ಭವಿಷ್ಯವನ್ನು ತಿಳಿಯಬಹುದಾಗಿದೆ. ಹಾಗಾದರೆ ಆ ರೇಖೆಗಳು ಯಾವುವು ಮತ್ತು ಅವು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಜೀವನ ರೇಖೆಯಿಂದ ನಮ್ಮ ಆರೋಗ್ಯದ ಬಗ್ಗೆ ಮತ್ತು ಆಯಸ್ಸಿನ ಬಗ್ಗೆ ತಿಳಿದುಕೊಳ್ಳಬಹುದು. ಇದರ ಜೊತೆಗೆ ಭವಿಷ್ಯದಲ್ಲಿ ಆಗುವ ದುರ್ಘಟನೆಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಮಸ್ತಕ ರೇಖೆ ಜೀವನ ರೇಖೆ ಮತ್ತು ಹೃದಯದ ರೇಖೆಯ ಮಧ್ಯ ಇರುತ್ತದೆ. ಮಸ್ತಕ ರೇಖೆ ಇಂದ ವ್ಯಕ್ತಿಯ ಬುದ್ಧಿಶಕ್ತಿ, ಕಲ್ಪನಾ ಶಕ್ತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಭಾಗ್ಯ ರೇಖೆಯ ಮೂಲಕ ಆರ್ಥಿಕ ಪರಿಸ್ಥಿತಿ, ನೌಕರಿಯ ಬಗ್ಗೆಯಾಗಲಿ, ವ್ಯವಸಾಯದ ಬಗ್ಗೆ ಆಗಲಿ ತಿಳಿದುಕೊಳ್ಳಬಹುದಾಗಿದೆ. ಹೃದಯ ರೇಖೆಯಿಂದ ಮನುಷ್ಯನ ಭಾವನೆಯ ಬಗ್ಗೆ, ಪ್ರೇಮ ಕಾಮನೆಗಳ ಬಗ್ಗೆ, ಮಮತೆಯ ಬಗ್ಗೆ ಇಲ್ಲಿ ಮಾಹಿತಿ ತಿಳಿಯುತ್ತದೆ.

ಸೂರ್ಯ ರೇಖೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಇರುವುದಿಲ್ಲ. ಒಂದು ವೇಳೆ ಇದ್ದರೆ ತುಂಬಾ ಶುಭಾ ಎಂದು ಹೇಳಲಾಗಿದೆ. ಯಾರ ಹತ್ತಿರ ಸೂರ್ಯ ರೇಖೆ ಇರುತ್ತದೆಯೋ ಅವರು ಲೋಕಪ್ರಿಯರಾಗುತ್ತಾರೆ ಮತ್ತು ಪ್ರಸಿದ್ಧಿಯಾಗುತ್ತಾರೆ. ಯಾವಾಗ ನಾವು ಎರಡು ಅಂಗೈಯನ್ನು ಜೋಡಿಸುತ್ತೇವೋ ಆಗ ಎರಡು ಕೈಯಲ್ಲಿರುವ ಹೃದಯ ರೇಖೆ ಸೇರಿ ಚಂದ್ರನ ಆಕೃತಿ ಬರುತ್ತದೆ.

ಯಾವ ವ್ಯಕ್ತಿಯ 2 ಅಂಗೈಯನ್ನು ಸೇರಿಸಿದಾಗ ಅರ್ಧಚಂದ್ರಾಕೃತಿ ಆಗುತ್ತದೆಯೋ ಆ ವ್ಯಕ್ತಿಗೆ ಶುಭವಾಗುತ್ತದೆ. ಇದರಿಂದ ಆ ವ್ಯಕ್ತಿಯು ತುಂಬಾ ಸುಂದರವಾಗಿಯೂ, ಆಕರ್ಷಿತವಾಗಿಯೂ ಇರುತ್ತಾರೆ. ಇಂಥ ವ್ಯಕ್ತಿಗಳು ತಮ್ಮ ಒಳ್ಳೆಯ ಗುಣಗಳಿಂದ ಹಾಗೂ ವ್ಯಕ್ತಿತ್ವದಿಂದ ಬಹಳ ವೇಗವಾಗಿ ಸಾಕಷ್ಟು ಜನರನ್ನು ಆಕರ್ಷಿಸುತ್ತಾರೆ. ಇಂಥ ವ್ಯಕ್ತಿಗಳು ಎಂಥದ್ದೇ ಕೆಟ್ಟ ಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನು ಯೋಚನೆ ಮಾಡುತ್ತಾರೆ. ಬುದ್ಧಿಶಕ್ತಿಯೂ ತುಂಬಾ ಚೆನ್ನಾಗಿರುತ್ತದೆ ಇದರ ಜೊತೆಗೆ ಎಂತಹದ್ದೇ ವಿಷಯವನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಇಂಥ ವ್ಯಕ್ತಿಗಳಲ್ಲಿ ನಾಯಕನಾಗುವ ಗುಣಗಳು ಇರುತ್ತವೆ.

ಯಾರ ಕೈಯಲ್ಲಿ ಹೃದಯ ರೇಖೆ ನೇರವಾಗಿ ಇರುತ್ತದೆಯೋ ಅಂತವರಿಗೆ ಅರ್ಧಚಂದ್ರಾಕೃತಿ ಆಗುವುದಿಲ್ಲ. ಇಂಥ ವ್ಯಕ್ತಿಗಳು ಶಾಂತ ಸ್ವಭಾವದ ಗುಣವನ್ನು ಹೊಂದಿರುತ್ತಾರೆ. ಇಂಥ ವ್ಯಕ್ತಿಗಳು ಕೆಲಸ ಕಾರ್ಯಗಳನ್ನು ನಿಧಾನವಾಗಿ ಮಾಡುತ್ತಾರೆ ಮತ್ತು ಯಾವುದೇ ಕಿರಿಕಿರಿಗಳಲ್ಲಿ ಭಾಗವಹಿಸುವುದಿಲ್ಲ. ಯಾವ ವ್ಯಕ್ತಿ ಎರಡು ಅಂಗೈಯನ್ನು ಸೇರಿಸಿದಾಗ ಹೃದಯಕೆ ರೇಖೆ ಹೊಂದುವುದಿಲ್ಲವೋ ಅಂತ ವ್ಯಕ್ತಿಗಳು ತಮ್ಮನ್ನು ತಾವೇ ಶ್ರೇಷ್ಠ ಎಂದು ತಿಳಿಯುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •