ಸ್ವಾಭಾವಿಕ ನಟನೆಯ ಮೂಲಕ ಚಂದನವನದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವವರು ಪದ್ಮಜಾ ರಾವ್ ಅವರು. ಇವರ ಅಭಿನಯವನ್ನು ನೋಡುತ್ತಿದ್ದರೆ ತಾಯಿ ಎಂದರೆ ಹೀಗಿರಬೇಕು ಎಂದೆನಿಸುತ್ತದೆ. ಬೆಳ್ಳಿತೆರೆಯ ಮೇಲೆ ಯಾವುದೇ ಪಾತ್ರ ಮಾಡುತ್ತಿದ್ದರೂ ಅದು ಅಭಿನಯ ಅನಿಸುವುದೇ ಇಲ್ಲ, ಇಂತಹ ಪ್ರತಿಭೆ ಕೆಲವರಲ್ಲಿ ಮಾತ್ರ ಇರುತ್ತದೆ. ಚಿತ್ರರಂಗಕ್ಕೆ ಬರುವ ಮುನ್ನ ನಟಿ ಪದ್ಮಜರಾವ್ ರಿಸಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದರು. ಹೀಗೆ ಟಿವಿ ಚಾನಲ್ ನಲ್ಲಿ ರಿಸಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ನಟನೆಯ ಮೇಲೆ ಬಹಳ ಆಸಕ್ತಿಯನ್ನು ಹೊಂದಿದ್ದರು.

padmaja-rao

ಅದೇ ಸಮಯದಲ್ಲಿ ಮಾಲ್ಗುಡಿ ಡೇಸ್ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ನರಸಿಂಹನ್ ಅವರು ಅಸಿಸ್ಟೆಂಟ್ ಗಾಗಿ ಹುಡುಕಾಡುತ್ತಿದ್ದರು. ಆ ಸಂದರ್ಭದಲ್ಲಿ ರಿಸಪ್ಷನಿಷ್ಟ್ ಕೆಲಸಕ್ಕೆ ರಾಜಿನಾಮೆ ನೀಡಿದ ಪದ್ಮಜರಾವ್ ಅವರು ನರಸಿಂಹನ್ ಅವರ ಬಳಿ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಹೀಗೆ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಟಿ ಎನ್ ಸೀತಾರಾಂ, ನಾಗಭರಣ ಅವರ ಪರಿಚಯವಾಗಿ ಓ ನನ್ನ ಬೆಳಕೆ, ಸಾಧನೆ, ಮಾಯಾಮೃಗ ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು.

padmaja-rao

ಆದಾಗಲೇ ಪದ್ಮಜಾ ಅವರಿಗೆ ವಿವಾಹವಾಗಿ ಮಗ ಕೂಡ ಜನಿಸಿರುತ್ತಾನೆ. ತದನಂತರ ನಿರ್ದೇಶಕಿ ವೈಶಾಲಿ ಅವರ ಬಳಿ ಸಹ ನಿರ್ದೇಶಕಿಯಾಗಿ ಸೇರಿಕೊಂಡ ಪದ್ಮಜ ಅವರು, ಇಂದು ಯಾವುದಾರು ನಟಿ ಚಿತ್ರೀಕರಣಕ್ಕೆ ಬರದಿದ್ದರೆ ನನಗೆ ಅವಕಾಶ ಸಿಗಬಹುದು ಎಂದು ಕಾಯ್ದು ಕುಳಿತ್ತಿದ್ದರು. ಅವರ ಕೂಗು ದೇವರಿಗೆ ಕೇಳಿಸಿತು ಅನಿಸುತ್ತದೆ. ಕೊನೆಗೆ ಪದ್ಮಜ ಅವರು ಬಯಸಿದಂತೆಯೇ ಆಗಿ, ಮೂಡಲ ಮನೆ ಎಂಬ ಧಾರಾವಾಹಿಯಲ್ಲಿ ಅವರಿಗೆ ಅವಕಾಶ ಸಿಗುತ್ತದೆ. ಮೂಡಲಮನೆ ಧಾರಾವಾಹಿಯಲ್ಲಿ ಪದ್ಮಜ ಅವರ ನಟನೆ ನೋಡಿದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ತಮ್ಮ ಚಿತ್ರ ಹಠವಾದಿ ಚಿತ್ರದಲ್ಲಿ ತನ್ನ ತಾಯಿಯ ಪಾತ್ರದಲ್ಲಿ ನಟಿಸುವ ಅವಕಾಶವನ್ನು ನೀಡುತ್ತಾರೆ.

padmaja-rao

ನಂತರ ಚಿತ್ರರಂಗದಲ್ಲಿ ಹಿಂತಿರುಗಿ ನೋಡಲೆ ಇಲ್ಲ ನಟಿ ಪದ್ಮಜ ಅವರು. ಇದೀಗ ಕನ್ನಡದಲ್ಲಿ ಬಹು ಬೇಡಿಕೆಯ ನಟಿಯಾಗಿ ಸುಮಾರು ೧೦೦ ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ಮುಂಗಾರು ಮಳೆ ಚಿತ್ರದಲ್ಲಿ ಅವರ ನಟನೆಯನ್ನು ಸಿನಿ ಪ್ರೇಕ್ಷಕರು ಇಂದಿಗೂ ಮರೆತಿಲ್ಲ. ಇದರ ಜೊತೆಗೆ ಇದೀಗ ತಮ್ಮ ಇಷ್ಟದಂತೆ ಒಂದು ಸುಂದರವಾದ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ ನಟಿ ಪದ್ಮಜಾ ರಾವ್. ಗಾಡ್ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ಬೆಳೆಯುವುದು ಎಷ್ಟು ಕಷ್ಟ ಎಂಬುದನ್ನು ಪದ್ಮಜಾ ಅವರು ಒಂದು ಪಾತ್ರವನ್ನು ಗಿಟ್ಟಿಸಿಕೊಳ್ಳಲು ಪಟ್ಟ ಕಷ್ಟ ಎಷ್ಟು ಎಂಬುದು ಅವರನ್ನು ನೋಡಿದರೆ ತಿಳಿಯುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •