ಹೌದು ಸ್ನೇಹಿತರೆ ಜೀವನದಲ್ಲಿ ನಾವು ಕೆಲವೊಂದು ಬಾರಿ ನಾವು ತೆಗೆದುಕೊಳ್ಳುವ ನಿರ್ಧಾರ ತುಂಬಾನೇ ತಪ್ಪು ನಿರ್ಧಾರ ಆಗಿರುತ್ತದೆ. ಅಂತಹ ಸನ್ನಿವೇಶಗಳು ಎದುರಾದಾಗ ಜೀವ ಬೇಕಾದರೂ ಹೋಗಬಹುದು. ಆದ್ರೆ ಒಂದು ಕ್ಷಣ ಆಲೋಚನೆ ಮಾಡಿದರೆ ಅಂತದ್ದೇನು  ಆಗೋದಿಲ್ಲ ದೊಡ್ಡ ಅನಾಹುತ ತಪ್ಪಿಸಬಹುದು. ಹೌದು ಅಂತಹದೇ ಬಂದು ಕಣ್ಣೀರಿನ ಘಟನೆ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿದ್ದೇವೆ. ವರುಣ ಎನ್ನುವ ಯುವಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದವ.

ಹೌದು ಈತ ಜೀವನ ನಡೆಸುವುದಕ್ಕೆ ಮೊಬೈಲ್ ಅಂಗಡಿಯೊಂದನ್ನು ಬಾಡಿಗೆಗೆ ಪಡೆದಿದ್ದ, ತದನಂತರ ಯಾವುದೋ ಒಂದು ಕಾರಣಕ್ಕೆ ಈತನ ಮೊಬೈಲ್ ಅಂಗಡಿ ಮಾಲಕ, ವರುಣ ಅವರು ನಡೆಸಿಕೊಂಡು ಬರುತ್ತಿದ್ದ ತನ್ನ ಮೊಬೈಲ್ ಅಂಗಡಿಯನ್ನು ಹಿಂಪಡೆದು ಈತನನ್ನು ಅಲ್ಲಿಂದ ಬೇರೆ ಕೆಲಸ ನೋಡಿಕೋ ಎಂದು ಹೇಳಿದ್ದರಂತೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ವರುಣ ಕೋಪಗೊಂಡು ಅಂಗಡಿ ಮಾಲೀಕನ ಮಗಳ ಫೋನ್ ನಂಬರನ್ನು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಮಾಡಿ, ಕರೆದರೆ ಈಕೆ ಬರುತ್ತಾಳೆ ಎಂದು ಸುದ್ದಿ ಹಬ್ಬಿಸಿದ್ದನಂತೆ. ಈ ವಿಷಯ ಅಂಗಡಿ ಮಾಲಿಕನಿಗೆ ಗೊತ್ತಾಗಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

ತದನಂತರ ಪೊಲೀಸರು ವರುಣನನ್ನು ಠಾಣೆಗೆ ಕರೆಸಿ ಸಕ್ಕತ್ತಾಗಿ ಕ್ಲಾಸ್ ತೆಗೆದುಕೊಂಡು ಈ ಕೆಲಸವನ್ನು ಯಾಕೆ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾರಂತೆ. ಇದರಿಂದ ವರುಣನ ತಂದೆ-ತಾಯಿಯವರಿಗೂ ಕೂಡ ಈ ವಿಷಯ ಗೊತ್ತಾಗಿದೆ. ಹೆಚ್ಚು ನೊಂದಿದ್ದ ವರುಣ ನಾನು ತಪ್ಪು ಮಾಡಿದೆ ಎಂದು ಇದ್ದಕ್ಕಿದ್ದಂತೆ ತಡರಾತ್ರಿ ತನ್ನ ಜೀವ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಎದೆಯೆತ್ತರ ಬೆಳೆದ ಮಗನು ಈ ರೀತಿ ಸತ್ತುಹೋದನಲ್ಲ ಎಂದು ಈತನ ತಾಯಿ ತುಂಬಾನೇ ಕಣ್ಣೀರಿಡುತ್ತಾ ಮಗನ ಈ ನಿರ್ಧಾರವನ್ನು ದೇವರು ಬದಲು ಮಾಡಲಿಲ್ಲವಲ್ಲ ಎಂದು ಅಳುತ್ತಿದ್ದಾರಂತೆ.

ಆ ತಾಯಿಯ ನೋವು ಆಕ್ರಂದನ ಮುಗಿಲುಮುಟ್ಟಿದೆ. ಒಂದು ಬಾರಿ ವರುಣ ಯೋಚನೆ ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ, ಹೌದು ತನ್ನ ತಾಯಿ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು, ಜನ್ಮ ನೀಡಿ, ಕಷ್ಟದಿಂದ ನಿಮ್ಮನ್ನು ಬೆಳೆಸಿ ನಿಮ್ಮ ಸಣ್ಣ ನಿರ್ಧಾರದಿಂದ ಆ ತಾಯಿಯ ಹೃದಯ ಎಷ್ಟು ಕೊರಗಿರಬೇಡ. ಅಂಗಡಿ ಹೋದರೆ ಏನಾಯಿತು, ಮತ್ತೊಂದು ಅಂಗಡಿಯನ್ನು ಸ್ವಂತ ತಾನೇ ನಡೆಸಿಕೊಂಡು ಹೋಗಬಹುದಿತ್ತಲ್ಲವೇ, ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮಾಡಿ, ಮತ್ತು ತಪ್ಪದೇನೆ ಮಾಹಿತಿಯ ಶೇರ್ ಮಾಡಿ ಸ್ನೇಹಿತರೆ, ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •