ಕನ್ನಡ ಕಿರುತೆರೆ ಲೋಕದಲ್ಲಿ ಎಲ್ಲರ ಮೆಚ್ಚಿನ ಧಾರಾವಾಹಿವಾಗಿ ಗಮನ ಸೆಳೆದಿದ್ದ ಧಾರವಾಹಿ ಅದು. ಅಂದಹಾಗೆ ಕನ್ನಡ ಕಿರುತೆರೆಯಲ್ಲಿ ಜನರು ಎಂದೆಂದಿಗೂ ಮರೆಯದಂತಹ ಹಲವಾರು ಧಾರಾವಾಹಿಗಳು ಪ್ರಸಾರಗೊಂಡಿವೆ. ಪ್ರೇಕ್ಷಕರ ಮನಸ್ಸಿನಾಳದಲ್ಲಿ ಸದಾ ನೆನಪಿನಲ್ಲಿರುವ ಧಾರಾವಾಹಿಯಲ್ಲಿ ಕಾದಂಬರಿ ಧಾರಾವಾಹಿ ಕೂಡ ಒಂದು. ಅಂದು ಕಿರುತೆರೆಯಲ್ಲಿ ಈಗಿನಷ್ಟು ಪ್ರೇಕ್ಷಕ ವರ್ಗ ಇಲ್ಲದಿದ್ದರೂ ಹೆಚ್ಚಿನ ಪ್ರೇಕ್ಷಕರು ಕಾದಂಬರಿ ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಿದ್ದರು. ಜೊತೆಗೆ ಭರ್ಜರಿ ಯಶಸ್ಸು ಗಳಿಸಿತ್ತು. ನಟಿ ಶ್ವೇತಾ ಚಂಗಪ್ಪ ರವರು ಈ ಧಾರಾವಾಹಿಯ ಮೂಲಕವೇ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಪಡೆದು ಕೊಂಡಿದ್ದರು. ಕನ್ನಡ ಕಿರುತೆರೆ ಲೋಕದಲ್ಲಿ ನಟಿಯಾಗಿ, ಬಿಗ್‌ ಬಾಸ್‌ನಂತಹ ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ, ‘ಮಜಾ ಟಾಕೀಸ್‌’ ಕಾರ್ಯಕ್ರಮದಲ್ಲಿ ವೀಕ್ಷಕರ ನೆಚ್ಚಿನ ಪರ್ಫಾಮರ್‌ ಆಗಿ, ಹಲವು ಶೋಗಳ ನಿರೂಪಕಿಯಾಗಿ ಶ್ವೇತಾ ಚೆಂಗಪ್ಪ ಅವರು ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

Outfit

ಹೀಗೆ ನೋಡನೋಡುತ್ತಿದ್ದಂತೆಯೇ ಅವರು ಬಣ್ಣದ ಲೋಕದಲ್ಲಿ ಬರೋಬ್ಬರಿ 18 ವರ್ಷ ಪೂರೈಸಿದ್ದಾರೆ. ಹೌದು ಕಾದಂಬರಿ ಧಾರಾವಾಹಿ ಇವರಿಗೆ ಹೆಸರನ್ನು ತಂದು ಕೊಟ್ಟಿತು. ಇನ್ನು ಕಾದಂಬರಿ -2 ಧಾರಾವಾಹಿಯಲ್ಲಿ ಶ್ವೇತಾ ಚಂಗಪ್ಪ ಮಾಡಿದ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು ಕೂಡ. ಇಂದಿಗೂ ಕೂಡ ಮರು ಪ್ರಸಾರ ಮಾಡಿದರೇ ಖಂಡಿತ ಹೆಚ್ಚಿನ ಪ್ರೇಕ್ಷಕರು ವೀಕ್ಷಿಸುವುದರಲ್ಲಿ ಸಂದೇಹವಿಲ್ಲ, ಹೆಚ್ಚಿನ ಮಟ್ಟದಲ್ಲಿ ಟಿ.ಆರ್.ಪಿ ಪಡೆಯುವುದರಲ್ಲಿ ಎರಡು ಮಾತಿಲ್ಲ.ಅದೆಷ್ಟೋ ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಧಾರಾವಾಹಿಯ ಕುರಿತು ಯಾಕಿಷ್ಟು ಮಾತನಾಡುತ್ತಿದ್ದಾರೆ ಎಂದು ಕೊಳ್ಳಬಹುದು.

ಇದೀಗ ಮತ್ತೊಂದು ಸಿಹಿ ಸುದ್ದಿ ಕಾದಂಬರಿಯ ಧಾರಾವಾಹಿ ವೀಕ್ಷಿಸುತ್ತಿದ್ದವರಿಗೆ ಕಾದಿದೆ. ಕಿರುತೆರೆಯ ಮೂಲಗಳ ಪ್ರಕಾರ ಇನ್ನು ಕೆಲವೇ ಕೆಲವು ವಾರಗಳಲ್ಲಿ ಕಾದಂಬರಿ 2 ಧಾರಾವಾಹಿ ಪ್ರಸಾರವಾಗುವುದು ಖಚಿತವಾಗಿದೆ. ಹಾಗಾದರೆ ಕಾದಂಬರಿ -2 ಧಾರಾವಾಹಿಯಲ್ಲಿ ಮತ್ತೆ ಶ್ವೇತಾ ಚಂಗಪ್ಪ ಕಾಣಿಸಿಕೊಳ್ಳುತ್ತಾರಾ? ಹಾಗಾದರೆ ಕಾದಂಬರಿ -2 ರಲ್ಲಿ ನಟಿಸಲಿರುವ ಆ ನಟಿ ಯಾರು? ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿಯೊಂದು ಹೊರ ಬಿದ್ದಿದೆ. ಈ ಧಾರಾವಾಹಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿರುವ ಧಾರವಾಹಿಯ ನಟಿಯೊಬ್ಬರು ಮುಖ್ಯ ಪಾತ್ರದಲ್ಲಿ ಅಂದರೆ ಕಾದಂಬರಿ -2 ನಲ್ಲಿ ನಟಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.

Outfit

ಅಂದಹಾಗೆ ಅವರು ಬೇರೆ ಯಾರು ಅಲ್ಲ? ಜೀ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ಪಾರು ಧಾರಾವಾಹಿಯಲ್ಲಿ ಜನನಿ ಪಾತ್ರ ಮಾಡುತ್ತಿರುವ ಪವಿತ್ರ ರವರು ನಾಯಕಿಯಾಗಿ ನಟನೆ ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪವಿತ್ರ, ಕಿರುತೆರೆ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾರಾ?, ಕಾದಂಬರಿ-2 ಧಾರಾವಾಹಿ ಎಷ್ಟರ ಮಟ್ಟಿಗೆ ಕಿರುತೆರೆ ಪ್ರೇಕ್ಷಕ ವರ್ಗವನ್ನು ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •