ಪ್ರತಿಯೊಂದು ಜೀವಿಯ ಹುಟ್ಟು ಅದರ ತಾಯಿ ತಂದೆಗೆ ತುಂಬಾ ಸಂತೋಷವನ್ನು ನೀಡುತ್ತದೆ. ಇನ್ನು ಎಲ್ಲವನ್ನೂ ತಿಳಿಯುವ ಹಾಗೂ ಭಾವನೆಗಳಿಗೆ ಸ್ಪಂದಿಸುವಂಥ ಹೆಚ್ಚಿನ ಶಕ್ತಿ ಇರುವ ಮನುಷ್ಯನಿಗೆ ಎಷ್ಟೊಂದು ಆನಂದವಾಗಬೇಡ. ಇಂಥ ಸಂದರ್ಭದಲ್ಲಿ ಯಾವಾಗ ತಾಯಿ ತನ್ನ ಮಗುವಿಗೆ ಅನಾರೋಗ್ಯದ ಕಾರಣದಿಂದಾಗಿ ಹಾಲು ಕುಡಿಸಲು ಅಸಮರ್ಥರಾಗುತ್ತಾಳೊ ಆಗ ತಾಯಿಯ ಚಿಂತೆಯು ಹೇಳತೀರದು. ಈ ಸಮಯದಲ್ಲಿ ಯಾವುದೇ ಒಬ್ಬಳು ತಾಯಿ ದಾನ ಮಾಡಿದ ತನ್ನ ಎದೆಹಾಲು ಆ ಮಗುವಿಗೆ ಸಂಜೀವಿನಿಯಾಗುತ್ತದೆ.

Orphanage

ತಾಯಿಯ ಎದೆಹಾಲು ಪ್ರತಿ ಎರಡು ಗಂಟೆಗೆ ತಯಾರಾಗುತ್ತದೆ. ಆ ಹಾಲು ತಾಯಿ ತನ್ನ ಮಗುವಿಗೆ ಕುಡಿಸಿದ ನಂತರ ಬೇರೆ ಮಗುವಿಗಾಗಿ ದಾನ ಮಾಡಬಹುದು. ಇದೇ ವಿಷಯದ ಬಗ್ಗೆ ಈ ಲೇಖನದಲ್ಲಿ ಒಬ್ಬಳು ನಟಿ ಮಾಡಿದ ಶ್ಲಾಘನೀಯ ಕೆಲಸದ ಬಗ್ಗೆ ಮಾಹಿತಿ ನೀಡುವವರಿದ್ದೇವೆ.

ಬಾಲಿವುಡ್ ನ ನಟಿ ಮತ್ತು ನಿರ್ಮಾತೆಯಾದ ನಿಧಿ ಪರಮಾರ್ ಹಿರಾನಂದನಿಯವರು ಲಾಕ್ಡೌನ್ ಸಮಯದಲ್ಲಿ ತನ್ನ ಎದೆಯ 42 ಲೀಟರ್ ಹಾಲನ್ನು ದಾನ ಮಾಡಿದ್ದಾರೆ. ಇವರು ಆ ಸಮಯದಲ್ಲಿ ಒಂದು ಮಗುವಿಗೆ ಜನ್ಮ ನೀಡಿದ್ದರು. ತನ್ನ ಹತ್ತಿರ ಹೆಚ್ಚು ಬ್ರೆಸ್ಟ್ ಮಿಲ್ಕ್ ಇರುವುದನ್ನು ಗಮನಿಸಿಕೊಂಡ ನಂತರ ಅವರು ತನ್ನ ಕುಟುಂಬಕ್ಕೆ ಮತ್ತು ಮಿತ್ರರಿಗೆ ಈ ಮಾಹಿತಿಯನ್ನು ನೀಡಿದರು. ಕುಟುಂಬದವರು ಆಕೆಗೆ ಹಾಲನ್ನು ದಾನ ಮಾಡುವ ವಿಚಾರಕ್ಕೆ ವಿರೋಧ ಮಾಡಿದರು. ಆದರೆ ನಿಧಿಯವರು ಯಾರ ಮಾತನ್ನೂ ಲೆಕ್ಕಿಸದೆ ತಮ್ಮ ಎದೆಯ ಹಾಲನ್ನು ದಾನ ಮಾಡಿದರು.

Nidhi Parmar

ನಿಧಿಯವರು ಇಂಟರ್ನೆಟ್ ನಲ್ಲಿ ಈ ಬಗ್ಗೆ ಮಾಹಿತಿಯನ್ನು ಪಡೆದಾಗ ಅಮೆರಿಕೆಯಲ್ಲಿ ಬ್ರೆಸ್ಟ್ ಮಿಲ್ಕ್ ನ್ನು ಡೊನೇಟ್ ಮಾಡುವ ಬಗ್ಗೆ ತಿಳಿದುಕೊಂಡರು. ಅದರ ನಂತರ ತನ್ನ ಪರಿಸರದಲ್ಲಿ (ಮುಂಬೈಯಲ್ಲಿ) ಈ ರೀತಿಯ ಯಾವುದಾದರೂ ಕೇಂದ್ರಗಳು ಇರುವುದನ್ನು ಹುಡುಕಿದರು. ಆಮೇಲೆ ನಿಧಿಯವರ ಸ್ತ್ರೀರೋಗತಜ್ಞ ಡಾಕ್ಟರ್ಗಳು ಮುಂಬೈಯಲ್ಲಿ ಇತ್ತೀಚೆಗೆ ಪ್ರಾರಂಭಿಸಿದ ಬ್ರೆಸ್ಟ್ ಮಿಲ್ಕ್ ಬ್ಯಾಂಕ್ ಆಸ್ಪತ್ರೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಆ ಮಾಹಿತಿಯನ್ನು ಪಡೆದು ಅಲ್ಲಿ ತಮ್ಮ ಹಾಲನ್ನು ದಾನ ಮಾಡುವ ಉದ್ದೇಶವನ್ನು ಹೊಂದಿದರು. ಆ ಸಮಯದಲ್ಲಿ ಸಂಪೂರ್ಣ ದೇಶದಲ್ಲಿ ಲಾಕ್ ಡೌನ್ ವಾತಾವರಣವಿತ್ತು. ಆದರೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ನಿಧಿಯವರಿಗೆ ನಾವೇ ನಿಮ್ಮ ಮನೆಗೆ ಎಲ್ಲಿಯೂ ಸಂಪರ್ಕವಾಗದ ಹಾಗೆ ಬಂದು ನಿಮ್ಮ ಹಾಲನ್ನು ಕಲೆಕ್ಟ್ ಮಾಡಿಕೊಳ್ಳುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದರು. ಕಳೆದ ವರ್ಷ ಮೇ ತಿಂಗಳಿನಿಂದ ಹಿಡಿದು ಸುಮಾರು ಡಿಸೆಂಬರ್ ವರೆಗೆ ತನ್ನೆದೆಯ 42 ಲೀಟರ್ ಹಾಲನ್ನು ಮುಂಬೈಯಲ್ಲಿಯ ಸೂರ್ಯ ಹಾಸ್ಪಿಟಲ್ ನಲ್ಲಿರುವ ನವಜಾತ ಇಂಟೆನ್ಸಿವ್ ಕೆಅರ್ ಯೂನಿಟ್ ನಲ್ಲಿ ದಾನವಾಗಿ ನೀಡಿದ್ದಾರೆ.

Orphanage

ಒಂದು ಸಂದರ್ಶನದಲ್ಲಿ ಮಾಹಿತಿ ನೀಡುವಾಗ ನಿಧಿ ಅವರು ಹೀಗೆ ಹೇಳುತ್ತಾರೆ, ಕೆಲವೇ ದಿವಸಗಳ ಹಿಂದೆ ನಾನು ಆ ಆಸ್ಪತ್ರೆಯಲ್ಲಿ ಹೋಗಿದ್ದೆ, ನಾನು ದಾನದಲ್ಲಿ ನೀಡಿದ ಹಾಲಿನ ಉಪಯೋಗ ಯಾವ ರೀತಿಯಾಗಿ ನಡೆದಿದೆ ಎಂಬುದನ್ನು ತಿಳಿಯಲು ಹೋಗಿದ್ದೆ. ಅಲ್ಲೇ 60 ಮಕ್ಕಳಿಗೆ ಎದೆಹಾಲಿನ ಅವಶ್ಯಕತೆಯಿತ್ತು. ಅದನ್ನು ನೋಡಿ ನನ್ನ ಮನಸ್ಸು ನಿಜವಾಗಿಯೂ ಮಿಡಿಯಿತು. ಹಾಗೂ ಮುಂದಿನ ಒಂದು ವರ್ಷದವರೆಗೆ ನನ್ನ ಎದೆಯ ಹಾಲನ್ನು ಮಕ್ಕಳಿಗಾಗಿ ನೀಡುವ ಬಗ್ಗೆ ನಿಶ್ಚಯಿಸಿದೆ.

ಈ ಬಗ್ಗೆ ಮಾತನಾಡುವಾಗ ನಿಧಿಯವರು ಹೀಗೂ ಹೇಳುತ್ತಾರೆ, ನಮ್ಮ ಸಮಾಜದಲ್ಲಿ ತಾಯಿಯ ಹಾಲಿನ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಅಷ್ಟೊಂದು ಓಪನ್ ಚರ್ಚೆ ಆಗುವುದಿಲ್ಲ. ನಿಮಗೆ ಈ ಸಂಖ್ಯೆಯನ್ನು ಕೇಳಿ ನಿಜಕ್ಕೂ ಆಶ್ಚರ್ಯವಾಗಬಹುದು. ಯಾಕೆಂದರೆ ಸುಮಾರು 3400 ತಾಯಂದಿರರು ರಾಜ್ಯದ ಮಹಿಳಾ ಆಸ್ಪತ್ರೆಯಲ್ಲಿ ಇರುವ ಮದರ್ ಮಿಲ್ಕ್ ಬ್ಯಾಂಕ್ ಗೆ ಹೋಗಿ ತಮ್ಮ ಹಾಲನ್ನು ಡೊನೇಟ್ ಮಾಡಿ 3700 ಮಕ್ಕಳ ಜೀವವನ್ನು ಉಳಿಸಿದ್ದಾರೆ.

ಹೀಗೆ ಅನೇಕ ತಾಯಂದಿರು ತಮ್ಮ ಎದೆಯ ಹಾಲನ್ನು ಇತರರ ಮಕ್ಕಳ ಪಾಲನೆ-ಪೋಷಣೆಗಾಗಿ ನೀಡಿದ್ದಾರೆ. ವಿಶೇಷವೆಂದರೆ ಆ ಮಕ್ಕಳು ಸಹಿತ ನಿರೋಗಿಯಾಗಿದ್ದಾರೆ. ಆರೋಗ್ಯವಂತ ತಾಯಿಯರೆಲ್ಲರೂ ತಮ್ಮ ಹಾಲನ್ನು ದಾನ ಮಾಡಬಹುದಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ತಾಯಂದಿರಿಗೆ ಆಗುವುದಿಲ್ಲ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •