ಮಹಿಳಾ-ಅಧಿಕಾರಿ

ಬೆಂಗಳೂರಿನ ಮಹಿಳಾ ಅಧಿಕಾರಿಯ ನಿಜಬಣ್ಣ,ಆರ್ ಟಿ ಐ ಕಾರ್ಯಕರ್ತನ ಜೊತೆ ಈಕೆ ಮಾಡಿರುವ ಕೆಲಸ ‌ನೋಡಿ,ಫೋನ್ ನಲ್ಲಿ ಎಲ್ಲವೂ ಇತ್ತು..

Home

ಸರ್ಕಾರಿ ಕೆಲಸವೇ ಆಗಲಿ ಅಥವಾ ಮತ್ತೊಂದೇ ಆಗಲಿ ಮಹಿಳೆಯರು ಆ ವೃತ್ತಿಯಲ್ಲಿ ಅಧಿಕಾರದಲ್ಲಿ ಇದ್ದಾರೆಂದರೆ ಅವರಿಗೆ ಹೆಚ್ಚಿನ ಗೌರವವನ್ನು ನೀಡುತ್ತೇವೆ.. ದೊಡ್ಡ ದೊಡ್ಡ ಸ್ಥಾನಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೋಡಿದಾಗ ಏನೋ ಒಂದು ರೀತಿ ಹೆಮ್ಮೆ ಹಾಗೂ ಸಂತೋಷವೂ ಸಹ ಆಗುತ್ತದೆ.. ಮಹಿಳೆಯರು ದೊಡ್ಡ ಹುದ್ದೆಯಲ್ಲಿದ್ದರೆ ಅಲ್ಲಿ ಜನ ಸಾಮಾನ್ಯರಿಗೆ ಮೋಸ ಆಗುವುದಿಲ್ಲ ಎನ್ನುವ ಒಂದು ನಂಬಿಕೆಯೂ ಇದೆ.. ಆದರೆ ಇಲ್ಲೊಬ್ಬ ಮಹಿಳಾ ಅಧಿಕಾರಿ ಮಾಡಿರುವ ಕೆಲಸ ನಿಜಕ್ಕೂ ನಾಚಿಕೆಗೇಡಿನದ್ದಾಗಿದೆ.. ಹೌದು ಬೆಂಗಳೂರಿನ ಸರ್ಕಾರಿ ಮಹಿಳಾ ಅಧಿಕಾರಿ ಅದರಲ್ಲೂ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಯಲ್ಲಿರುವ ಈಕೆ ಆರ್ ಟಿ ಐ ಕಾರ್ಯಕರ್ತನ ಜೊತೆ ಮಾಡಿರುವ ಕೆಲಸ ನಿಜಕ್ಕೂ ಅಸಹ್ಯವನ್ನುಂಟು ಮಾಡುವಂತಿದೆ..

ಹೌದು ಈಕೆಯ ಹೆಸರು ಶ್ವೇತಾ.. ಈಕೆ ಸರ್ಕಾರಿ ಅಧಿಕಾರಿ.. ಬೆಂಗಳೂರಿನ ಕತ್ರಿಗುಪ್ಪೆಯ ವಾರ್ಡ್ ನಂಬರ್ 163 ರ ವಾರ್ಡ್ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.. ಆದರೆ ಕಳೆದ ವಾರ ಆರ್ ಟಿ ಐ ಕಾರ್ಯಕರ್ತ ಕೃಷ್ಣಮೂರ್ತಿ ಎಂಬಾತ ಈಕೆಯ ಕಚೇರಿಗೆ ಹೋಗಿ ಗಲಾಟೆ ಮಾಡಿದ್ದನು.. ಈಕೆಗೆ ನೀನು ಯಾವ ಡಿಪಾರ್ಟ್ಮೆಂಟ್ ಗೆ ಹೋದರೂ ಬೊಡೋದಿಲ್ಲ.. ನಿನ್ನನ್ನು ಹೇಗೆ ಕೆಲಸದಿಂದ ತೆಗೆಸಬೇಕು ಅನ್ನೋದು ನನಗೆ ಗೊತ್ತಿದೆ ಎಂದು ಕೂಗಾಡಿದ್ದನು.. ಇದೇ ಕಾರಣಕ್ಕೆ ಶ್ವೇತಾ ಚೆನ್ನಮ್ಮನಕೆರೆ ಅಚ್ವುಕಟ್ಟು ಪೊಲೀಸರಿಗೆ ಕೃಷ್ಣಮೂರ್ತಿ ಮೇಲೆ ದೂರು ನೀಡಿದ್ದರು.. ಇತ್ತ ಪೊಲೀಸರು ಆರ್ ಟಿ ಐ ಕಾರ್ಯಕರ್ತ ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.. ವಿಚಾರಣೆ ನಡೆಸಿದಾಗ ಬೇರೆಯದ್ದೇ ಕತೆ ಬಯಲಾಗಿದೆ.. ಹೌದು ಆರ್ ಟಿ ಐ ಕಾರ್ಯಕರ್ತ ಕೃಷ್ಣಮೂರ್ತಿಯ ಫೋನ್ ನಲ್ಲಿ ಇದ್ದ ಆಡಿಯೋ ಮಹಿಳಾ ಅಧಿಕಾರಿ ಶ್ವೇತಾರ ನಿಜಬಣ್ಣ ಬಯಲು ಮಾಡಿದೆ..

ಹೌದು ಕೃಷ್ಣಮೂರ್ತಿ ಮೇಲೆ ದೂರು ನೀಡಿದ್ದ ಶ್ವೇತಾ ಅವರೇ ಇದೀಗ ತಾವೇ ದೂರು ಕೊಟ್ಟು ಸಿಕ್ಕಿಕೊಂಡಂತಾಗಿದೆ.. ಹೌದು ಕೃಷ್ಣಮೂರ್ತಿ ಪೊಲೀಸರ ವಿಚಾರಣೆ ವೇಳೆ ಬೇರೆಯದ್ದೇ ಸತ್ಯ ಬಾಯಿಬಿಟ್ಟುದ್ದು ಶ್ವೇತಾ ಮಾಡುತ್ತಿದ್ದ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ.. ಹೌದು ತನ್ನನ್ನು ಶ್ವೇತಾ ಅವರೇ ಕರೆಸಿಕೊಂಡು ಕೆಲ ಮಾಹಿತಿ ಕೊಟ್ಟು ಅದರ ಮೇಲೆ ಆರ್ ಟಿ ಐ ಅರ್ಜಿ ಸಲ್ಲಿಸಿ ನಂತರ ಪಾರ್ಟಿಗಳಿಂದ ಹಂಅ ವಸೂಲಿ ಮಾಡುತ್ತಿದ್ದ ಸತ್ಯ ಈಗ ಬಯಲಾಗಿದೆ.. ಹೌದು ಇದಕ್ಕೆ ಸಂಬಂಧ ಪಟ್ಟಂತೆ ಕೃಷ್ಣ ಮೂರ್ತಿ ತನ್ನ ಫೋನ್ ನಲ್ಲಿ ಶ್ವೇತಾ ಜೊತೆ ಮಾತನಾಡಿರುವ ಸಂಭಾಷಣೆಯ ಆಡಿಯೋವನ್ನು ಪೊಲೀಸರ ಮುಂದೆ ಇಟ್ಟಿದ್ದಾರೆ..

ಹೌದು ಆ ಆಡಿಯೋ ಸಂಪೂರ್ಣ ಪ್ರಕರಣಕ್ಕೆ ತಿರುವನ್ನು ನೀಡಿದೆ.. ಹೌದು ಕೃಷ್ಣಮೂರ್ತಿಗೆ ಫೋನ್‌ ಮಾಡಿರುವ ಶ್ವೇತಾ ಸೈಟ್ ಒಂದಕ್ಕೆ ಸಂಬಂಧಪಟ್ಟಂತೆ ಆರ್ ಟಿ ಐ ಅರ್ಜಿ ಹಾಕು ಎಂದಿದ್ದಾರೆ.. ಅದರ ಮೂಲಕ ಮಾಹಿತಿ ಪಡೆದು ಜನರಿಂದ ಹಂಅ ವಸೂಲಿಗೆ ಮುಂದಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತಿದೆ.. ಬೆಂಗಳೂರಿನ ಸಿಪಿ ಲೇಔಟ್ ನಲ್ಲಿರುವ ಸೈಟ್ ನಂಬರ್ ೬೫ ಕ್ಕೆ ಸಂಬಂಧ ಪಟ್ಟಂತೆ ಆರ್ ಟಿ ಐ ಹಾಕಲು ಕೃಷ್ಣ ಮೂರ್ತಿಗೆ ತಿಳಿಸಿದ್ದಾರೆ..

ಆದರೆ ಅದ್ಯಾಕೋ ಕೊನೆಗೆ ಈ ಪ್ರಕರಣ ತನ್ನ ಬುಡಕ್ಕೆ ಬರುವಂತೆ ಕಂಡು ಕೃಷ್ಣಮೂರ್ತಿಯನ್ನೇ ಸಿಕ್ಕಿಸಲು ಪ್ರಯತ್ನ ಮಾಡಿದ್ದಾರೆ.. ಇದರಿಂದ ಕೋಪಗೊಂಡ ಕೃಷ್ಣಮೂರ್ತಿ ಶ್ವೇತಾಳ ಕಚೇರಿಗೆ ಬಂದು ಗಲಾಟೆ ಮಾಡಿ ಕೊನೆಗೆ ಪೊಲೀಸರ ವಶದಲ್ಲಿರುವಂತಾಗಿದೆ.. ಆದರೆ ಮೋಸ ಮಾಡುವ ಜನರ ಆಟ ಹೆಚ್ಚುದಿನ ನಡೆಯೋದಿಲ್ಲ ಅನ್ನೋದು ಸತ್ಯವೆನ್ನುವಂತೆ ತಾನೇ ದೂರು ಕೊಟ್ಟು ಇದೀಗ ತಾನೇ ತನ್ನ ನಿಜಬಣ್ಣವನ್ನು ಬಯಲು ಮಾಡಿಕೊಂಡಂತಾಗಿದೆ ಶ್ಬೇತಾರ ಪರಿಸ್ಥಿತಿ..

ಸರ್ಕಾರಿ ಅಧಿಕಾರಿಗಳನ್ನು ದೇವರಂತೆ ನೋಡುವ ಜನರು ಸಹ ಇದ್ದಾರೆ.‌ ಆದರೆ ಇಂತಹ ಅಧಿಕಾರಗಳಲ್ಲಿ ಇದ್ದುಕೊಂಡು ಸರ್ಕಾರ ಕೊಡುವ ಸಂಬಳ ಸಾಲದು ಎನ್ನುವಂತೆ ಜನರ ಬಳಿ ಹಣ ವಸೂಲಿಗೆ ಮುಂದಾಗುವ ಇಂತಹ ಜನರಿಗೆ ಏನು ಹೇಳಬೇಕೋ ತಿಳಿಯದು.. ಇಂತವರೆಲ್ಲಾ ಅದರಲ್ಲೂ ಸೇವಾ ಮನೋಭಾವ ಇಲ್ಲದ ಜನರೆಲ್ಲಾ ಸರ್ಕಾರಿ ಕೆಲಸಕ್ಕೆ ಬರೋದು.. ಕೈ ತುಂಬಾ ಸಂಬಳ ದೊಡ್ಡ ಹುದ್ದೆ ಒಳ್ಳೆಯ ಗೌರವ ಎಲ್ಲವೂ ಇದ್ದರೂ ಸಹ ಇವರುಗಳ ಹಣದ ಮೇಲಿನ ದುರಾಸೆ ಮಾತ್ರ ಕಡಿಮೆಯಾಗದು.ಮ್ ಹೋಗುವಾಗ ಏನನ್ನೂ ಹೊತ್ತಿಕೊಂಡು ಹೋಗೋದಿಲ್ಲ ಅನ್ನೋದು ಗೊತ್ತಿದ್ದರೂ ಇಂತಹ ಕೆಲಸ ಮಾಡ್ತಾರೆ.‌ ಅದರಲ್ಲೂ ಮಹಿಳಾ ಅಧಿಕಾರಿಗಳನ್ನು ಈ ರೀತಿ ಊಹಿಸಿಕೊಳ್ಳಲು ಬೇಸರವಾಗುತ್ತದೆ ಅಷ್ಟೇ ಅಸಹ್ಯವನ್ನೂ ಸಹ ತರುತ್ತದೆ.. ಇನ್ನಾದರೂ ಇಂತಹ ಅಧಿಕಾರಿಗಳ ಮನಸ್ಥಿತಿ ಬದಲಾಗಲಿ..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...