ಪ್ರೀತಿಯಾಗಿ ಮಾಡಿಕೊಂಡ ಮದುವೆಯಲ್ಲಿ ಕಲಹ ಇಷ್ಟೊಂದು ಹೆಚ್ಚಾಯಿತು. ಅದರ ಕೊನೆ ಹೆಂಡತಿಯನ್ನು ಬಲಿ ತೆಗೆದುಕೊಳ್ಳುವುದರೊಂದಿಗೆ ಮುಗಿಯಿತು. ಪತಿ ತನ್ನ ಹೆಂಡತಿಯ ಹತ್ಯೆಯನ್ನು ಮಾಡಿ ತಾನೇ ಪೊಲೀಸ್ ಸ್ಟೇಷನ್ನಿಗೆ ಹೋಗಿ ಸರೆಂಡರ್ ಆಗಿದ್ದಾನೆ ಮತ್ತು ಘಟನೆಗೆ ತಾನೇ ಜವಾಬ್ದಾರನೆಂದು ಪೊಲೀಸರಿಗೆ ಒಪ್ಪಿಸಿಕೊಂಡಿದ್ದಾನೆ.

October

ಈ ಘಟನೆ ಮಧ್ಯಪ್ರದೇಶದ ಇಂದೋರ್ ನ ಸಂಯೋಗಿತಾ ಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟಿಸಿದೆ. ಕೌಟುಂಬಿಕ ಕಲಹದಲ್ಲಿ ನವವಿವಾಹಿತರ ದಾಂಪತ್ಯ ಜೀವನವೇ ನುಚ್ಚು ನೂರಾಗಿದೆ.

ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಇಬ್ಬರ ಮನಸ್ಸು ಒಂದಾಗಿ ಮದುವೆಗಾಗಿ ಮನೆಯವರಿಂದ ಸಮ್ಮತಿ ಪಡೆದು ಆಗಸ್ಟ್ ತಿಂಗಳಲ್ಲಿ ಆರ್ಯ ಸಮಾಜ ಪದ್ಧತಿಯಂತೆ ಲಗ್ನವಾಗಿದ್ದಾರೆ. ಮುಂದೆ ಒಂದು ಬಾಡಿಗೆ ಮನೆಯಲ್ಲಿ ಇಬ್ಬರೂ ಇರುತ್ತಿದ್ದರು. ದೊರೆತ ಮಾಹಿತಿಯ ಪ್ರಕಾರ ಮನೆಯಲ್ಲಿ ಯಾವುದೋ ವಿಷಯದ ಮೇಲೆ ಶುರುವಾದ ಕದನ ವಿಕೋಪಕ್ಕೆ ಹೋದಾಗ ಪತಿ ನಾಯಿಯ ಕೊರಳಿಗೆ ಕಟ್ಟುವ ಸರಪಳಿಯಿಂದ ಕುತ್ತಿಗೆಯನ್ನು ಬಿಗಿದು ಮುಗಿಸುವ ಯತ್ನ ಅಸಫಲವಾದಾಗ ಹರಿತವಾದ ಚಾಕುವಿನಿಂದ ತನ್ನ 22 ವರ್ಷದ ಹೆಂಡತಿಯಾದ ಅಂಶು ಅವಳನ್ನು ಕೊನೆಗಾಣಿಸಿದ್ದಾನೆ. ಇದಾದ ನಂತರ ಪೊಲೀಸ್ ಸ್ಟೇಷನ್ನಿಗೆ ಸ್ವತಃ ತಾನೇ ಹೋಗಿ ಶರಣಾಗಿದ್ದಾನೆ.

October

ಅಂಶುಳ ಕುಟುಂಬದವರು ಮಾತ್ರ ಸದ್ಯ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಅಂಶುಳ ಗಂಡನ ಮನೆಯವರ ದಬ್ಬಾಳಿಕೆಗೆ ಹಾಗೂ ಹಣ ಪಡೆದು ಪೊಲೀಸರು ಯಾವುದೇ ರೀತಿಯ ಆಕ್ಷನ್ ಆಕೆಯ ಪತಿಯ ಮೇಲೆ ತೆಗೆದುಕೊಳ್ತಿಲ್ಲ, ಎಂದು ಆಪಾದಿಸುತ್ತಿದ್ದಾರೆ.

ಸದ್ಯ ಅಂಶುಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಒಪ್ಪಿಸಲಾಗಿದ್ದು ಪೊಲೀಸರು ಮುಂದಿನ ತನಿಖೆಯನ್ನು ಮಾಡುತ್ತಿದ್ದಾರೆ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •