ಆಧಾರ್ ಕಾರ್ಡ್ ಗೆ ನಂಬರ್ ಲಿಂಕ್ ಮಾಡಿಕೊಂಡರೆ ಯಾವ ಕಡೆಯಲ್ಲಿ ಹೋದರು ನಮಗೆ ಆಧಾರ್ ಕಾರ್ಡ್ ಕಾಪಿ ನಾವು ತೆಗೆದುಕೊಳ್ಳಬಹುದು. ಕೆಲವೊಂದು ಜನರ ಆಧಾರ್ ಕಾರ್ಡ್ ಗೆ ನಂಬರ್ ಲಿಂಕ್ ಮಾಡಿರುವುದಿಲ್ಲ. ಅಂತವರಿಗೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವ ವಿಧಾನ ಹೇಗೆ ಎಂಬುದನ್ನು ನಾವು ತಿಳಿಯೋಣ.

ಆಧಾರ್ ಕಾರ್ಡ್ ಗೆ ನಂಬರ್ ಅನ್ನು ಎರಡು ನಿಮಿಷದಲ್ಲಿ ಲಿಂಕ್ ಮಾಡಬಹುದು. ಜೊತೆಗೆ ವಿಳಾಸದಲ್ಲಿ ಇಲ್ಲವೇ ಹೆಸರಲ್ಲಿ ಯಾವುದೇ ಬದಲಾವಣೆ ಮಾಡಬೇಕೆಂದರು ಮಾಡಬಹುದು. ಮೊದಲಿಗೆ ಕ್ರೋಮ್ ಬ್ರೌಸರ್ ಅನ್ನು ಒಪೆನ್ ಮಾಡಿಕೊಳ್ಳಬೇಕು. ನಂತರ ಅದರ ಸರ್ಚ್ ಬಾಕ್ಸ್ ನಲ್ಲಿ https://ask. uidai.gov.in ಈ ವೆಬ್ ಸೈಟ್ ಅನ್ನು ನಮೂದಿಸಬೇಕು. ನಂತರ ಒಪೆನ್ ಆದ ಪೇಜ್ ನಲ್ಲಿ ಯಾವ ನಂಬರ್ ಗೆ ಓಟಿಪಿ ಬೇಕು ಆ ನಂಬರ್ ಅನ್ನು ಟೈಪ್ ಮಾಡಿ, ಅಲ್ಲೇ ಕೆಳಗೆ ಇರುವ ಕ್ಯಾಪ್ಚರ್ ಕೊಡ್ ಬರೆದು ಸೆಂಡ್ ಓಟಿಪಿ ಎಂಬ ಬಟನ್ ಒತ್ತಬೇಕು. ನಂತರ ಬಂದ ಓಟಿಪಿಯನ್ನು ಕೆಳಗಿನ ಬಾಕ್ಸ್ ನಲ್ಲಿ ಬರೆದು ಸಬ್ಮಿಟ್ ಓಟಿಪಿ ಆಂಡ್ ಪ್ರೋಸೀಡ್ ಎಂಬ ಬಟನ್ ಒತ್ತಬೇಕು. ನಂತರ ಅಲ್ಲಿ ಆಕ್ಟಿವ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಒತ್ತಬೇಕು. ಈಗ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿದೆ. ಅಲ್ಲೇ ಬಲಗಡೆ ಮೇಲೆ ಅಪ್ಡೇಟ್ ಆಧಾರ್ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಒತ್ತಿದಾಗ ಹೆಸರು ಹಾಗೂ ಆಧಾರ್ ನಂಬರ್ ಕೇಳುತ್ತದೆ ಅದನ್ನು ನಮೂದಿಸಬೇಕು. ಹಾಗೆ ಕೆಳಗೆ ಇಂಡಿಯನ್ ರೆಸಿಡೆನ್ಸ್ ಎಂದು ಆರಿಸಿ, ಅದರ ಕೆಳಗೆ ವಾಟ್ ಡು ಯು ವಾಂಟ್ ಟು ಅಪ್ಡೇಟ್ ಎಂದು ಕಾಣಿಸುತ್ತದೆ. ಅಲ್ಲಿ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, ಇ- ಮೇಲ್ ಐಡಿ ಹೀಗೆ ಕೇಳುತ್ತದೆ. ಅದರಲ್ಲಿ ಮೊಬೈಲ್ ನಂಬರ್ ಎಂದು ಆರಿಸಿ, ಕೆಳಗೆ ಪ್ರೊಸಿಡ್ ಎಂಬ ಆಯ್ಕೆ ಇರುತ್ತದೆ ಅದನ್ನು ಒತ್ತಬೇಕು.

number-link-to-aadhaar-cards

ನಂತರ ಈ ಆಧಾರ್ ನಂಬರ್ ಮೊದಲು ಬದಲಾವಣೆ ಮಾಡಲು ಒಪ್ಪಿಗೆ ಕೆಳುತ್ತದೆ. ಓಕೆ ಎಂಬ ಆಯ್ಕೆ ಆರಿಸಿಕೊಳ್ಳಬೇಕು. ನಂತರ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಮೊಬೈಲ್ ನಂಬರ್ ಹಾಗೂ ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಬೇಕು. ನಂತರ ಸೆಂಡ್ ಓಟಿಪಿ ಎಂದು ಒತ್ತಿ, ಓಟಿಪಿ ಬಂದ ಮೇಲೆ ವೆರಿಫೈ ಓಟಿಪಿ ಎಂದು ಒತ್ತಬೇಕು. ವೆರಿಪೈ ಸಕ್ಸಸ್ ಫುಲ್ ಎಂದು ಕಾಣಿಸುತ್ತದೆ. ನಂತರದಲ್ಲಿ ಸೇವ್ ಆಂಡ್ ಪ್ರೊಸೀಡ್ ಎಂಬ ಆಯ್ಕೆ ಮಾಡಬೇಕು. ನಂತರ ಅಲ್ಲಿ ಕನ್ಫರ್ಮೇಷನ್ ಕೇಳುತ್ತದೆ. ಅಲ್ಲಿರುವ ಬಾಕ್ಸ್ ಆಯ್ಕೆ ಮಾಡಿ, ಕೆಳಗೆ ಸಬ್ಮಿಟ್ ಎಂದು ಇರುತ್ತದೆ ಅದನ್ನು ಒತ್ತಬೇಕು. ನಂತರ ಯುವರ್ ಅಪ್ಲಿಕೇಶನ್ ಹಾಸ್ ಬೀನ್ ಸಬ್ಮಿಟೆಡ್ ಎಂದು ಬರುತ್ತದೆ ಅದನ್ನು ಸ್ಕ್ರೀನ್ ಶಾಟ್ ಪೋಟೋ ತೆಗೆದು ಇಟ್ಟುಕೊಳ್ಳಿ. ನಂತರ ಕೆಳಗೆ ಇರುವ ಬುಕ್ ಅಪ್ಲಿಕೇಶನ್ ಎಂಬ ಆಯ್ಕೆ ಒತ್ತಬೇಕು. ನಂತರ ಅಲ್ಲೊವ್ ಎಂದು ಒತ್ತಬೇಕು. ಹತ್ತಿರದ ಸೆಂಟರ್ ಎಲ್ಲಿದೆ ಎಂದು ನೋಡಲು ನಂತರ ಓಪನ್ ಆಗಿರುವ ಪೇಜ್ ನಲ್ಲಿ ರಾಜ್ಯ ಯಾವುದು ಹಾಗೂ ಜಿಲ್ಲೆ ಯಾವುದು ಹಾಗೆಯೆ ಪೊಸ್ಟ್ ಯಾವುದು ಮತ್ತು ಗ್ರಾಮ ಯಾವುದು ಎಂದು ಆಯ್ದುಕೊಳ್ಳಬೇಕು. ನಂತರ ಗೆಟ್ ಡಿಟೇಲ್ಸ್ ಎಂಬುದನ್ನು ಒತ್ತಬೇಕು. ಆಗ ಹತ್ತಿರದಲ್ಲಿ ಯಾವುದಾದರೂ ಆಧಾರ್ ಸೆಂಟರ್ ಇದ್ದರೆ ತೋರಿಸುತ್ತದೆ. ಇಲ್ಲವೇ ಪಿನ್ ಕೋಡ್ ಮೂಲಕವು ಸೆಂಟರ್ ಎಲ್ಲಿದೆ ನೋಡಬಹುದು. ನಂತರ ಯಾವುದಾದರೂ ಒಂದು ಹತ್ತಿರದ ಸೆಂಟರ್ ಕಾಣಿಸುತ್ತದೆ ಅದರಲ್ಲಿ ಬುಕ್ ಅಪ್ಪೋಯಿಂಟ್ಮೆಂಟ್ ಎಂದು ಕಾಣಿಸುತ್ತದೆ ಅದನ್ನು ಒತ್ತಿದಾಗ ಯಾವ ದಿನಾಂಕದಂದು ಕೆಂಪು ಬಣ್ಣದಲ್ಲಿ ದಿನಾಂಕ ಇದ್ದರೆ ಅಂದು ಆ ಕಚೇರಿ ಕೆಲಸ ಮಾಡುವುದಿಲ್ಲ ಎಂಬ ಅರ್ಥ. ಬೇರೆ ಯಾವುದಾದ್ರು ದಿನಾಂಕ ಆಯ್ದುಕೊಂಡು ಕನ್ಫರ್ಮ್ ಎಂದು ಕೊಟ್ಟರೆ ಆ ಕಚೇರಿಯಲ್ಲಿ ಮೊಬೈಲ್ ನಂಬರ್ ಲಿಂಕ್ ಮಾಡುತ್ತಾರೆ.

ಇದು ಆಧಾರ್ ಕಾರ್ಡ್ ಗೆ ನಂಬರ್ ಲಿಂಕ್ ಮಾಡಲು ಇರುವ ಒಂದು ಮಾರ್ಗ. ಅಪ್ಲಿಕೇಶನ್ ಸಬ್ಮಿಟ್ ಆಗಿರುವುದನ್ನು ಯಾಕೆ ಸ್ಕ್ರೀನ್ ಶಾಟ್ ಫೋಟೊ ತೆಗೆದು ಇಟ್ಟುಕೊಳ್ಳಬೇಕು ಎಂದರೆ ಯಾವುದೆ ಸೆಂಟರ್ ಗೆ ಹೋದಾಗ ಈ ಅಪ್ಲಿಕೇಶನ್ ನಂಬರ್ ಆಧಾರದ ಮೇಲೆ ಕೆಲಸ ಮಾಡಿ ಕೊಡುತ್ತಾರೆ. ಹಾಗಾಗಿ ಆ ಸ್ಕ್ರೀನ್ ಶಾಟ್ ಫೋಟೊ ತುಂಬಾ ಅಗತ್ಯ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •