ಒಳ್ಳೆಯ ಸಮಯ ಬರುವುದ್ಕಕಿಂತ ಮುಂಚೆ ದೊರೆಯುವ 6 ಸೂಚನೆಗಳು ನೋಡಿ…

Home Kannada News/ಸುದ್ದಿಗಳು

ಸಾಮಾನ್ಯವಾಗಿ ಯಾವುದೇ ರೀತಿಯ ಶುಭ ಫಲಗಳು ಸಿಗುವ ಮುನ್ನ ಪ್ರಕೃತಿಯ ಮೂಲಕ ಭಗವಂತ ನಮಗೆ ಕೆಲವು ಸಂಕೇತಗಳನ್ನು ನೀಡುತ್ತಾನೆ. ಸಾಮಾನ್ಯವಾಗಿ ಒಳ್ಳೆಯ ಸಮಯ ಬರುವುದಕ್ಕಿಂತ ಮುಂಚಿತವಾಗಿ ಭಗವಂತ ಪ್ರಾಣಿ ಪಕ್ಷಿಗಳ ಮೂಲಕ, ಪ್ರಕೃತಿಯ ಮೂಲಕ ಹಾಗೂ ಕೆಲವನ್ನು ಮನುಷ್ಯರ ಮೂಲಕ ಕೆಲವು ಸಂಕೇತಗಳನ್ನು ನೀಡುತ್ತಾನೆ. ಅಂತಹ ಕೆಲವು ಸಂಕೇತಗಳ ಬಗ್ಗೆ ತಿಳಿಯೋಣ ಬನ್ನಿ.

ಬ್ರಾಹ್ಮಿ ಮುಹೂರ್ತದಲ್ಲಿ ಒಳ್ಳೆಯ ಕನಸುಗಳು ಬೀಳುವುದು ಮುಂದೆ ನಮಗೆ ಒಳ್ಳೆಯ ಸಮಯದ ಆಗಮನದ ಸಂಕೇತವಾಗಿರುತ್ತದೆ. ಕೆಲವೊಮ್ಮೆ ಬ್ರಾಹ್ಮಿ ಮುಹೂರ್ತ ಅಂದರೆ 3 ರಿಂದ 5 ಗಂಟೆಯ ಸಮಯದಲ್ಲಿ ಕನಸುಗಳು ಬೀಳುತ್ತವೆ. ಅಂತಹ ಕನಸುಗಳಲ್ಲಿ ಒಂಟಿಯಾಗಿ ಗುರಿಯ ಕಡೆ ನಡೆಯುತ್ತಾ ಸಾಗುವುದು ಒಳ್ಳೆಯ ಸಂಕೇತವಾಗಿದೆ. ಮುಂಬರುವ ದಿನಗಳಲ್ಲಿ ಗುರಿಯನ್ನು ತಲುಪಿ ನಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂಬುದರ ಸಂಕೇತವಾಗಿರುತ್ತದೆ.

ಯಾವುದೇ ಕಾರಣವಿಲ್ಲದೆ ಮನಸ್ಸು ಪ್ರಫುಲ್ಲದಿಂದ ಇದ್ದರೆ, ಖುಷಿಯಾಗಿದ್ದರೆ, ಯಾವುದೋ ಸಾಧಿಸಿದ ಮನೋ ಭಾವ ಮೂಡುತ್ತಿದ್ದರೆ, ಈ ರೀತಿ ಖುಷಿಗೆ ಯಾವುದೇ ಕಾರಣ ಸಿಗದಿದ್ದರೆ ಇದು ಕೂಡ ಒಳ್ಳೆಯ ಸಮಯ ಬರುವುದಕ್ಕಿಂತ ಮುಂಚೆಯ ಶುಭ ಶಕುನ ವಾಗಿರುತ್ತದೆ. ಗೋಮಾತೆಯು ಪದೇ ಪದೆ ಮನೆಯ ಮುಂದೆ ನಿಲ್ಲುವುದು ಸಹ ಶುಭ ಸಂಕೇತವಾಗಿರುತ್ತದೆ.

ಹಾಗಾಗಿ ಗೋಮಾತೆಯು ಪದೇ ಪದೇ ನಿಮ್ಮ ಮನೆಯ ಮುಂದೆ ಕಾಣಿಸಿಕೊಂಡರೆ ಅದಕ್ಕೆ ಫಲ ಆಹಾರಗಳನ್ನು ನೀಡಿ ಸಂತೃಪ್ತಿಗೊಳಿಸಿ. ಕೋತಿ ಬಂದು ಮನೆಯಲ್ಲಿರುವ ಆಹಾರ ಅಥವಾ ಫಲ ಗಳನ್ನು ಸೇವಿಸಿದರೆ ಇದು ಶುಭ ಸೂಚನೆ. ಬೆಕ್ಕು ಮನೆಯಲ್ಲಿ ಮರಿಗಳಿಗೆ ಜನ್ಮ ನೀಡುವುದು ಸಹ ಶುಭ ಸೂಚನೆಯಾಗಿರುತ್ತದೆ. ಕಾಗೆ ,ಗೂಬೆ ಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ರೀತಿಯ ಪಕ್ಷಿಗಳು ಮನೆಯ ಅಂಗಳದಲ್ಲಿ ಗೂಡನ್ನು ಕಟ್ಟಿ ಮರಿ ಮಾಡಿದರೆ ಮನೆಗೆ ಇದು ಶುಭವನ್ನು ಉಂಟುಮಾಡುತ್ತದೆ ಹಾಗೂ ಇದು ಒಳ್ಳೆಯ ಸಂಕೇತವಾಗಿರುತ್ತದೆ.

ಒಂದು ವರ್ಷದ ಕೆಳಗಿನ ಮಕ್ಕಳು ಕಾರಣವಿಲ್ಲದೆ ನಿಮ್ಮನ್ನು ನೋಡಿ ಸದಾ ನಗುತ್ತಿದ್ದರೆ ಇದು ಕೂಡ ಒಳ್ಳೆಯ ದಿನಗಳು ಬರುವ ಸೂಚನೆಯಾಗಿರುತ್ತದೆ. ಪೂಜೆ ಮಾಡುವ ಸಮಯದಲ್ಲಿ ದೇವರ ಮೇಲಿರುವ ಪುಷ್ಪಗಳು ಕೆಳಗೆ ಬಿದ್ದರೆ ಅದು ಕೂಡ ಶುಭ ಸೂಚನೆಯಾಗಿರುತ್ತದೆ. ಪುರುಷರಿಗೆ ಬಲಗಣ್ಣು ಮತ್ತು ಮಹಿಳೆಯರಿಗೆ ಎಡಗಣ್ಣು ಹಾರಿದರೆ ಶುಭ ಸಂಕೇತವಾಗಿರುತ್ತದೆ. ಬೆಳಿಗ್ಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಗೋಮಾತೆಯ ದರ್ಶನವಾದರೆ ಮುಂಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿದೆ ಎಂಬುದರ ಸಂಕೇತವಾಗಿರುತ್ತದೆ.

ಸಾಧು ಸಂತರು, ಬ್ರಾಹ್ಮಣರು , ಅರ್ಚಕರು ನೀವು ಕೆಲಸಕ್ಕೆ ಹೋಗುವ ಸಮಯದಲ್ಲಿ ಎದುರಿಗೆ ಬಂದು ಆಶೀರ್ವಾದ ಮಾಡಿದರೆ ಮುಂದೆ ಒಳ್ಳೆಯ ದಿನಗಳು ಬರಲಿದೆ ಎಂಬುದರ ಸಂಕೇತವಾಗಿರುತ್ತದೆ. ಸಂಜೆಯ ಸಮಯದಲ್ಲಿ ಯಾರಾದರೂ ನಿಮಗೆ ತುಂಬಿದ ಬಿಂದಿಗೆ ಕೊಟ್ಟರೆ,ತುಂಬಿದ ಹಾಲಿನ ಪಾತ್ರೆ ಕೊಟ್ಟರೆ,ಸಿಹಿ ಪದಾರ್ಥಗಳನ್ನು ಕೊಟ್ಟರೆ ಇದು ಕೂಡ ಜೀವನದಲ್ಲಿ ಒಳ್ಳೆಯದಾಗುವುದರ ಸಂಕೇತವಾಗಿರುತ್ತದೆ. ಈ ಮೇಲೆ ತಿಳಿಸಿರುವ ಯಾವುದೇ ರೀತಿಯ ಸೂಚನೆಗಳು ಕಂಡು ಬಂದರೆ ಅದು ಶುಭ ಸಂಕೇತವಾಗಿರುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...