ಚಂದನ್ ಶೆಟ್ಟಿ ಕನ್ನಡದ ರಾಪರ್ ಗಳಲ್ಲಿ ಅಗ್ರಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ ನಮ್ಮ ಚಂದನ್ ಶೆಟ್ಟಿ ಅವರು ಕೊಲುಮಂಡೆ ಜಂಗಮದೇವ ಎಂಬ ಹಾಡನ್ನು ಮಾಡಿ, ಭಾರಿ ಚರ್ಚೆಗೆ ಕಾರಣವಾಗಿ ಕೊನೆಗೆ ಆ ಹಾಡನ್ನು ಡಿಲೀಟ್ ಮಾಡಬೇಕಾಗಿ ಬಂತು. ಈಗ ನಮ್ಮ ಚಂದನ್ ಶೆಟ್ಟಿ ಅವರು ಮತ್ತೊಂದು ಹೊಸ ಪಾರ್ಟಿ ಸಾಂಗ್ ಅನ್ನು ಮಾಡಿದ್ದಾರೆ. ಹೌದು 2021 ಹೊಸ ವರ್ಷಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೇ! ಚಂದನ್ ಶೆಟ್ಟಿ ಅವರು ತಮ್ಮ ಹೊಸ ಪಾರ್ಟಿ ಹಾಡಿನಲ್ಲಿ ಪತ್ನಿ ನಿವೇದಿತಾ ಗೌಡ ಜೊತೆ ಸಕತ್ ಆಗಿ ಡಾನ್ಸ್ ಮಾಡಿದ್ದಾರೆ! ಸದ್ಯ ಚಂದನ್ ಶೆಟ್ಟಿ ಅವರ ಈ ಹೊಸ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಟ್ರೆಂಡ್ ಆಗುತ್ತಿದೆ! ಹಾಗಾದ್ರೆ ಚಂದನ್ ಶೆಟ್ಟಿ ಅವರ ಹೊಸ ಹಾಡು ಹೇಗಿದೆ ಗೊತ್ತಾ!

ಹೌದು! ಬಹಳ ದಿನಗಳಿಂದ ಚಂದನ್ ಶೆಟ್ಟಿ ಅವರ ಅಭಿಮಾನಿಗಳು ಚಂದನ್ ಶೆಟ್ಟಿ ಅವರ ಹೊಸ ಹಾಡಿಗೋಸ್ಕರ ವೇಟ್ ಮಾಡುತ್ತಿದ್ದರು. ಕೊನೆಗೂ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಚಂದನ್ ಶೆಟ್ಟಿ ಅವರು ತಮ್ಮ ಹೊಸ ಪಾರ್ಟಿ ಸಾಂಗ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಇದು ಎಲ್ಲೆಡೆ ಸಕತ್ ಟ್ರೆಂಡ್ ಆಗುತ್ತಿದೆ! ಇದರಲ್ಲಿ ಪತ್ನಿ ನಿವೇದಿತಾ ಗೌಡ ಅವರು ಕೂಡ ಮಾದಕವಾಗಿ ಡಾನ್ಸ್ ಮಾಡಿದ್ದಾರೆ! ಚಂದನ್ ಶೆಟ್ಟಿ ಅವರ ಹೊಸ ಹಾಡು ಹೇಗಿದೆ ಗೊತ್ತಾ, ಇದರ ನಿವೇದಿತಾ ಗೌಡ ಹಾಗು ಚಂದನ್ ಡಾನ್ಸ್ ಹೇಗಿದೆ ಗೊತ್ತಾ!

ನಮ್ಮ ಕನ್ನಡ ರಾಪರ್ ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡದ ಟಾಪ್ ರಾಪರ್ ಗಳಲ್ಲಿ ಚಂದನ್ ಶೆಟ್ಟಿ ಮೊದಲ ಸ್ಥಾನದಲ್ಲಿ ಇದ್ದಾರೆ! ಚಂದನ್ ಶೆಟ್ಟಿ ಅವರು ಸುಮಾರು 7 ವರ್ಷಗಳಿಂದ ಕನ್ನಡ ಹಾಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಅವರ ಒಂದೊಂದು ವಿಡಿಯೋವನ್ನು ಕೋಟ್ಯಂತರ ಜನ ಯೌಟ್ಯೂಬ್ ನಲ್ಲಿ ನೋಡಿದ್ದಾರೆ! ಇತ್ತೀಚಿಗೆ ಚಂದನ್ ಶೆಟ್ಟಿ ಅವರ ಪೊಗರು ಚಿತ್ರದ ಖರಾಬು ಹಾಡು ಯೌಟ್ಯೂಬ್ ನಲ್ಲಿ ಟ್ರೆಂಡ್ ಆಗಿ, ಕನ್ನಡದ ಎಲ್ಲಾ ವಿಡಿಯೋಗಳನ್ನು ಮೀರಿಸಿ ಬರೋಬ್ಬರಿ 130 ಮಿಲಿಯನ್ ಜನ ನೋಡಿದ್ದಾರೆ! ಇದಲ್ಲದೆ ಕಳೆದ ವಾರವಷ್ಟೇ ಚಂದನ್ ಶೆಟ್ಟಿ ಅವರ ಕೊಲುಮಂಡೆ ಹಾಡು ಬಿಡುಗಡೆ ಆಗಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು! ಅಷ್ಟಕ್ಕೂ ಚಂದನ್ ಶೆಟ್ಟಿ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ!

ಹೌದು! ಚಂದನ್ ಶೆಟ್ಟಿ ಅವರು ಕನ್ನಡದ ಬಹು ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು! ಚಂದನ್ ಶೆಟ್ಟಿ ಅವರು ಪುನೀತ್ ರಾಜಕುಮಾರ್, ಧ್ರುವ ಸರ್ಜಾ ಸೇರಿದಂತೆ ಕನ್ನಡದ ಹಲಾರು ಸೂಪರ್ ಸ್ಟಾರ್ಗಳ ಸಿನಿಮಾಗೆ ಕೆಲಸ ಮಾಡಿದ್ದಾರೆ! ಅಂದಹಾಗೆ ಚಂದನ್ ಶೆಟ್ಟಿ ಅವರು ಒಂದು ಹಾಡಿಗೆ ಪಡೆಯುವ ಸಂಭಾವನೆ ಬರೋಬ್ಬರಿ 25 ಲಕ್ಷ ಅಂತೆ! ಪೊಗರು ಚಿತ್ರದ ಖರಾಬು ಹಾಡಿಗೆ ಚಂದನ್ ಶೆಟ್ಟಿ ಪಡೆದಿರುವ ಸಂಭಾವನೆ ಬರೋಬ್ಬರಿ 25 ಲಕ್ಷ ಅಂತೇ! ಇದಲ್ಲದೆ ತಮ್ಮದೇ ಚಾನಲ್ ನಲ್ಲಿ ಚಂದನ್ ಶೆಟ್ಟಿ ಅವರು ಹಾಡನ್ನು ಮಾಡಿದ್ರೆ ಯೌಟ್ಯೂಬ್ ನಿಂದ ಚಂದನ್ ಶೆಟ್ಟಿ ಅವರು ಸಾಕಷ್ಟು ಹಣವನ್ನು ಗಳಿಸುತ್ತಾರೆ!

ಸದ್ಯ ಚಂದನ್ ಶೆಟ್ಟಿ ಅವರು ಪೊಗರು ಚಿತ್ರದ ಟೈಟಲ್ ಹಾಡಿನ ಮೇಲೆ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಇದು ಬಿಡುಗಡೆ ಆಗುತ್ತದೆ ! ಇದಲ್ಲದೆ ಚಂದನ್ ಶೆಟ್ಟಿ ತಮ್ಮ ರಾಪ್ ಹಾಡುಗಳ ಮೇಲೆ ಕೂಡ ಕೆಲಸ ಮಾಡುತ್ತಿದ್ದು, ತಮ್ಮದೇ ಮನೆಯಲ್ಲಿ ಸ್ಟುಡಿಯೋ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ! ಚಂದನ್ ಶೆಟ್ಟಿ ಅವರ 3 ಪೆಗ್ ಹಾಡಿನ ನಂತರ, ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು! ಇತ್ತೀಚಿಗೆ ಕೊಲುಮಂಡೆ ಹಾಡನ್ನು ಬಿಡುಗಡೆ ಮಾಡಿ ಎರಡೇ ಇಂದಕ್ಕೆ 2 ಮಿಲಿಯನ್ ಜನ ಅದನ್ನು ವೀಕ್ಷಣೆ ಮಾಡಿದ್ದರು. ನಂತರ ಕಾರಣಾಂತರ ಗಳಿಂದ ಆ ಹಾಡನ್ನು ಯೌಟ್ಯೂಬ್ ನಿಂದ ತೆಗೆಯ ಬೇಕಾಯಿತು! ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಸ್ಪರ್ಧೆ ಯಲ್ಲಿ 50 ಲಕ್ಷ ಗೆದ್ದು, ಅದರಿಂದ ಬಂದ ಹಣದಿಂದ, ಸಾಕಷ್ಟು ಜನರಿಗೆ ಸಹಾಯ ಕೂಡ ಮಾಡಿದ್ದಾರೆ! ಇದಲ್ಲದೆ ಸಾಕಷ್ಟು ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಕೂಡ ಮಾಡುತ್ತಿದ್ದಾರೆ, ತಮ್ಮ ಹಾಡುಗಳಲ್ಲಿ, ಕೆಲಸ ಕೊಡುತ್ತಿದ್ದಾರೆ! ಚಂದನ್ ಶೆಟ್ಟಿ ಅವರ ಈ ಒಳ್ಳೆ ಕೆಲಸಗಳಿಗೆ ಒಂದು ಸಲಾಂ!

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •