ಬಿಗ್ ಬಾಸ್ ಕನ್ನಡ ಸೀಸನ್ 5 ನ ವಿನ್ನರ್ ಕನ್ನಡ ರಾಪರ್ ಚಂದನ್ ಶೆಟ್ಟಿ. ಹಾಗೂ ಅದೇ ಸೀಸನ್ ನಲ್ಲಿ ಕಾಮನ್ ಮ್ಯಾನ್ ಲಿಸ್ಟ್ ನಲ್ಲಿ ಎಂಟ್ರಿ ಕೊಟ್ಟಿದ್ದ ಹುಡುಗಿ ನಿವೇದಿತಾ ಗೌಡ. ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದರು. 99 ದಿನಗಳ ಕಾಲ ಬಿಗ್ ಮನೆಯಲ್ಲಿದ್ದರು ಚಂದನ್ ನಿವೇದಿತಾ. ಫೈನಲ್ಸ್ ಕೊನೆಯ ಹಂತದ ಸಮಯದಲ್ಲಿ ನಿವೇದಿತಾ ಗೌಡ ಎಲಿಮಿನೇಟ್ ಆಗಿದ್ದರು. ಚಂದನ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಬಿಗ್ ಬಾಸ್ ಜರ್ನಿ ನಂತರವೂ ಇವರಿಬ್ಬರ ಫ್ರೆಂಡ್ಶಿಪ್ ಮುಂದುವರೆದಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.ಯುವದಸರ ಕಾರ್ಯಕ್ರಮದಲ್ಲಿ ಮೈಸೂರು ಜನರ ಮುಂದೆ ನಿವೇದಿತಾರಿಗೆ ಪ್ರೇಮ ನಿವೇದನೆ ಮಾಡಿದ್ದರು ಚಂದನ್. ನಿವೇದಿತಾ ಕೂಡ ಒಪ್ಪಿಕೊಂಡಿದ್ದರು. ಹಿರಿಯರ ಆಶೀರ್ವಾದ ಮತ್ತು ಒಪ್ಪಿಗೆ ಪಡೆದು, ಕಳೆದ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ನಿವೇದಿತಾ ಚಂದನ್, ತಮ್ಮ ಮನೆಯಲ್ಲಿ ನಡೆಯುವ ಘಟನೆಗಳು, ಒಬ್ಬರಿಗೊಬ್ಬರು ಕೊಡುವ ಸರ್ಪ್ರೈಸ್ ಗಳ ಬಗ್ಗೆ ಪೋಸ್ಟ್ ಮಾಡಿಕೊಳ್ಳುತ್ತಾರೆ. ನಿವೇದಿತಾ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಅಭಿಮಾನಿಗಳು ಕೂಡ ಇದ್ದಾರೆ.ನಮಗೆಲ್ಲ ಗೊತ್ತಿರುವ ಹಾಗೆ ನಿವೇದಿತಾ ಗೌಡ ಮೈಸೂರಿನ ಹುಡುಗಿ. ಅವರು ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲಿಯೇ. ಚಂದನ್ ನಿವೇದಿತಾ ಮದುವೆ ಆಗಿದ್ದು ಸಹ ಮೈಸೂರಿನಲ್ಲಿಯೇ. ನಿವೇದಿತಾ ಅವರ ತಾಯಿ ಹೆಸರು ಹೇಮಾ. ಹೇಮಾ ಮತ್ತು ನಿವೇದಿತಾ ಅವರನ್ನು ಜೊತೆಯಾಗಿ ನೋಡಿದರೆ, ಅಮ್ಮ ಮಗಳು ಎಂದು ಅನ್ನಿಸುವುದಿಲ್ಲ. ಅಕ್ಕ ತಂಗಿ ಎಂದುಕೊಳ್ಳಬಹುದು. ಹೇಮಾ ಅವರು ಈಗಲೂ ಎಷ್ಟು ಚಿಕ್ಕವರ ಹಾಗೆ ಕಾಣುತ್ತಾರೆ ಎಂದರೆ, ಕೆಲವೊಮ್ಮೆ ಜನ ಹೇಮಾ ಅವರೇ ನಿವೇದಿತಾ ಗೌಡ ಎಂದುಕೊಂಡಿದ್ದ ಉದಾಹರಣೆ ಸಹ ಇದೆ. ನಿವೇದಿತಾ ಗೌಡ ಅವರಿಗೆ ತಂದೆ ತಾಯಿ ಎಂದರೆ ತುಂಬಾ ಪ್ರೀತಿ.ಮದುವೆ ನಂತರ ಬೆಂಗಳೂರಿನಲ್ಲೇ ಇರುವ ನಿವೇದಿತಾ ಆಗೊಮ್ಮೆ ಈಗೊಮ್ಮೆ ತಾಯಿ ಮನೆಗೆ ಹೋಗಿ ಬರುತ್ತಿದ್ದರು. ಆದರೆ ಈಗ ಲಾಕ್ ಡೌನ್ ಕಾರಣ ಮೈಸೂರಿಗೆ ಹೋಗಲು ಆಗದೆ ಇದ್ದಾರೆ. ಹಾಗಾಗಿ ಪ್ರತಿದಿನ ತಂದೆ ತಾಯಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾರೆ. ನಿವೇದಿತಾ ಗೌಡ ಹಾಗು ಅವರ ತಾಯಿಯ ಸುಂದರ ಹಾಗು ಅಪರೂಪದ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು. ಸದ್ಯ ನಿವೇದಿತಾ ಗೌಡ ಅವರು ಲಾಕ್ ಡೌನ್ ಆಗಿರುವುದರಿಂದ ಯಾವ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳದೆ, ಚಂದನ್ ಶೆಟ್ಟಿ ಹಾಗು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •