ಹೌದು ಸ್ನೇಹಿತರೆ ಈಗಾಗಲೇ ಕರೋನವೈರಸ್ ದಿಂದಾಗಿ ಬಹುತೇಕ ಜನರು ತತ್ತರಿಸಿ ಹೋಗಿದ್ದಾರ. ಈ ಕರೋನ ವೈರಸ್ ಕಾಯಿಲೆ ಬಂದಮೇಲೆ ಸಾಕಷ್ಟು ಜನರು ಹಾಗೂ ಇಡಿ ಮನುಕುಲವೇ ಹೆಚ್ಚು ನೋವು ಸಾವುಗಳನ್ನು ಈಗ ಅನುಭವಿಸುತ್ತಿದೆ. ಇದರ ನಡುವೆ ನಿತ್ಯಾನಂದ ಸ್ವಾಮಿ ಈಗ ಮತ್ತೆ ಸುದ್ದಿಯಾಗಿದ್ದು, ಈ ಹಿಂದೆಯೇ ನಿತ್ಯಾನಂದ ಅವರು ಯಾರು ಎಂಬುದೇ ಸಾಕಷ್ಟು ಜನರಿಗೆ ಗೊತ್ತೇ ಇರಲಿಲ್ಲ. ಸಿಡಿ ಮೂಲಕ ಇಡೀ ದೇಶಕ್ಕೆ ಪರಿಚಯವಾದ ನಿತ್ಯಾನಂದ ಅವರು, 2019ರಲ್ಲಿ ಇಕ್ವಾಡಾರ್ ಬಳಿ ದ್ವೀಪ ಒಂದನ್ನು ಖರೀದಿಸಿ ಕೈಲಾಸ ದೇಶವೆಂದು ಹೆಸರಿಟ್ಟಿದ್ದರು ಎಂದು ಕೇಳಿಬಂದಿತ್ತು.

ಅಲ್ಲಿ ತನ್ನದೇ ಆದ ಸಂವಿಧಾನ, ಅಲ್ಲಿಯ ವೈವಾಟು, ಕರೆನ್ಸಿ, ಪಾಸ್ಪೋರ್ಟ್ ಹೀಗೆ ತುಂಬಾ ಸುದ್ದಿಯಾಗಿದ್ದರು, ಜೊತೆಗೆ ಅಷ್ಟೇ ವೈರಲ್ ಆಗಿ ಟ್ರೋಲ್ ಸಹ ಆಗಿದ್ದರು. ಹೌದು ಇದೇ ಕೈಲಾಸಕ್ಕೆ ಭಾರತೀಯರು ಹಾಗೂ ಬ್ರೆಜಿಲ್ ಯುರೋಪಿಯನ್ ಇನ್ನೂ ಕೆಲ ದೇಶದ ಪ್ರಜೆಗಳು ಈ ಕೈಲಾಸಕ್ಕೆ ಬರುವಂತಿಲ್ಲ ಎಂದು ಕೊರೊನದ ಕುರಿತು ನಿತ್ಯಾನಂದ ಆದೇಶ ಮಾಡಿದ್ದಾರಂತೆ. ನಿತ್ಯಾನಂದರ ಈ ಹೇಳಿಕೆ ಟ್ವಿಟರ್ ಖಾತೆಯ ಮೂಲಕ ಕಂಡುಬಂದಿದೆ.

ಹೌದು ಸೋಶಿಯಲ್ ಪ್ರಿಯರಿಗೆ ಈ ಹೇಳಿಕೆ ಬೆನ್ನಲ್ಲೇ,  ಕೈಲಾಸ ದೇಶ ನಿಜಕ್ಕೂ ಇದೆಯಾ ಮತ್ತು ಈ ಕೈಲಾಸಕ್ಕೆ ಪ್ರವಾಸಿಗರು ಹೋಗುತ್ತಾರಾ ಮತ್ತು ಈ ನಿತ್ಯಾನಂದ ಕೈಲಾಸ ಎಂದು ಹೇಳುತ್ತಿರುವುದು ನಿಜವೇ ಎಂದು ಚರ್ಚೆ ಮಾಡುತ್ತಿದ್ದಾರೆ. ಹಾಗೇನೇ ಮತ್ತೊಮ್ಮೆ ಈ ನಿತ್ಯಾನಂದರನ್ನ ಟ್ರೋಲ್ ಸಹ ಮಾಡುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •