Nirmala

ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿ ನಿರ್ಮಲಾ ಚನ್ನಪ್ಪ ಅವರ ಪತಿ ಕೂಡ ಖ್ಯಾತ ನಟ..!

Home

ನಟಿ ಕಮ್ ನಿರ್ಮಾಪಕಿ ನಿರ್ಮಲಾ ಚನ್ನಪ್ಪ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳಲ್ಲಿ ಒಬ್ಬರು ಎಂಬುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಅಂದಿನಿಂದ, ನೆಟ್ಟಿಗರು ನಿರ್ಮಲಾ ಚನ್ನಪ್ಪ ಯಾರು ಎಂಬ ವಿಚಾರ ತಿಳಿದುಕೊಳ್ಳಲು ಬಯಸುತ್ತಿದ್ದಾರೆ.  ಆದ್ದರಿಂದ ಈ ಲೇಖನದಲ್ಲಿ ನಿರ್ಮಲಾ ಚನ್ನಪ್ಪ ಯಾರು? ಅವರ ಪತಿ ಯಾರು? ಹೀಗೆ ಅವರ ವೈಯಕ್ತಿಕ ಜೀವನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡಲಾಗುತ್ತಿದೆ ನೋಡಿ.

Nirmala

ನಿರ್ಮಲಾ ಚನ್ನಪ್ಪ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಕೊನೆಯ ಸ್ಪರ್ಧಿ. ಶೋ ಪ್ರಾರಂಭವಾದ ಮೊದಲ ದಿನ ನಿರ್ಮಲಾ ಚನ್ನಪ್ಪ ಅವರ ಬಗ್ಗೆ ವೀಕ್ಷಕರಿಗೆ ಪರಿಚಯಿಸಲಾಯಿತು. ಬಿಗ್ ಬಾಸ್ ಮನೆಯೊಳಗೆ ಹೋದ ನಂತರ ಎಲ್ಲರೊಂದಿಗೂ ನಗು ನಗುತ್ತಾ ಚೆನ್ನಾಗಿರುವ ನಿರ್ಮಲಾ ಅವರು ಟಾಸ್ಕ್ ವಿಚಾರವಾಗಿ ಮೊದಲ ವಾರವೇ ನಾಮಿನೇಟ್ ಆದರು. ಅವರ ಪ್ರಕಾರ ಟಾಸ್ಕ್  ಸಮಯದಲ್ಲಿ ಅವರು ಅತ್ಯುತ್ತಮವಾಗಿ ಟಾಸ್ಕ್ ಪೂರೈಸಲಿಲ್ಲ. ಆದ್ದರಿಂದ ಅವರು ಗುಂಪಿನಲ್ಲಿ ಲೂಸರ್ ಎಂದು ಘೋಷಿಸಿಕೊಂಡರು. ನಂತರ ಅವರನ್ನು ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದರು. ಆದರೆ ನಿರ್ಮಲಾ ಅವರು ಶೋ ನಿಂದ ಹೊರ ಬರುತ್ತಾರೆಯೇ ಅಥವಾ ಮನೆಯಲ್ಲಿಯೇ ಇರುತ್ತಾರೆಯೇ ಎಂಬುದು ಶನಿವಾರದ ಸಂಚಿಕೆಯಲ್ಲಿ ತಿಳಿಯುತ್ತದೆ.

 

View this post on Instagram

 

A post shared by Nirmala Channappa (@nirmalachannapa)

ನಿರ್ಮಲಾ ಚನ್ನಪ್ಪ ಅವರು ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಿರ್ಮಲಾ ಸತ್ಯ ಎಂದೂ ಕರೆಯಲ್ಪಡುವ ನಿರ್ಮಲಾ ಚನ್ನಪ್ಪ ಅವರು ನಟಿ, ನಿರ್ದೇಶಕಿ ಮತ್ತು ಡಬ್ಬಿಂಗ್ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ನಿರ್ಮಾಲಾ ಚನ್ನಪ್ಪ ಜಿಗರ್‌ಥಂಡ ಮತ್ತು ಕಿರಗೂರಿನ ಗಯ್ಯಾಳಿಗಳು ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2012 ರಲ್ಲಿ ತಲ್ಲಣ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಸಹ ಗೆದ್ದರು. ಅವರು ಹಲವಾರು ದೂರದರ್ಶನ ಕಾರ್ಯಕ್ರಮಗಳನ್ನು ಸಹ ನಿರ್ಮಿಸಿದ್ದಾರೆ. ನಿರ್ಮಲಾ ಚನ್ನಪ್ಪ ಅವರ ಇನ್‌ಸ್ಟಾಗ್ರಾಮ್ ಖಾತೆ ನೋಡಿದರೆ ಅವರು ಹೆಚ್ಚಾಗಿ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸೆಲೆಬ್ರಿಟಿಗಳ ಜೊತೆಗೆ ತೆಗೆಸಿಕೊಂಡ ಚಿತ್ರಗಳನ್ನು ಕಾಣಬಹುದು. ಅವರು ಆಗಾಗ್ಗೆ ತಮ್ಮ ಮಗನೊಂದಿಗಿರುವ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಾರೆ. ಮೊದಲೇ ಹೇಳಿದ ಹಾಗೆ ನಿರ್ಮಲಾ ನಟಿ ಮಾತ್ರವಲ್ಲ, ನಿರ್ಮಾಪಕಿ ಕೂಡ ಹೌದು. ನಿರ್ಮಲಾ ಚನ್ನಪ್ಪ ಅವರು ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಎಂದು ಕರೆಯಲ್ಪಡುವ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ನಿರ್ಮಲಾ ಚನ್ನಪ್ಪ ಸಂಭಾವನೆಗೆ ಸಂಬಂಧಿಸಿದಂತೆ ಯಾವುದೇ ವಿವರಗಳು ಆನ್‌ ಲೈನ್‌ನಲ್ಲಿ ಲಭ್ಯವಿಲ್ಲ.

Nirmala

ಅಂದಹಾಗೆ ನಿರ್ಮಲಾ ಸತ್ಯ ಅವರನ್ನು ಮದುವೆಯಾಗಿದ್ದು, ಅವರು ಕೂಡ ಖ್ಯಾತ ನಟರೇ. ದಂಪತಿಗಳಿಗೆ ಒಬ್ಬ ಮಗನಿದ್ದಾನೆ. ನಿರ್ಮಲಾ ಅವರ ಪತಿ ಸತ್ಯ ಅವರು ‘ಆ ದಿನಗಳು’ ಚಿತ್ರದಲ್ಲಿ ‘ಸರ್ದಾರ್’ ಪಾತ್ರದಲ್ಲಿ ನಟಿಸಿ ಜನಪ್ರಿಯರಾದರು. ಈ ಚಿತ್ರದ ನಂತರ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಅನೇಕ ಆಫರ್’ಗಳು ಬಂದವು. ಸರ್ದಾರ್ ಸತ್ಯ ಎಂದೇ ಜನಪ್ರಿಯರಾದ ಸತ್ಯ ನಂತರ ‘ಸ್ಲಮ್ ಬಾಲಾ’ದಲ್ಲಿ ಪ್ರಮುಖ ನಟನಾಗಿ ಅಭಿನಯಿಸಿದರು. ಸ್ಲಮ್ ಬಾಲಾ’ದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳಲ್ಲಿ ಒಬ್ಬರಾದ ಶುಭಾ ಪೂಂಜಾ ಕೂಡ ಇದ್ದಾರೆ. ಸತ್ಯ ಗುಂಡ್ರಗೋವಿ, ರಾಜಧಾನಿ, ಶಾರ್ಪ್ ಶೂಟರ್, ಲೈಫ್ 360 ಮತ್ತು ಚಂಬಲ್ ‘ನಲ್ಲಿಯೂ ನಟಿಸಿದ್ದಾರೆ.

Nirmala

ಬಿಗ್ ಬಾಸ್ ಕನ್ನಡದ ಎಂಟನೇ ಸೀಸನ್ ಫೆಬ್ರವರಿ 28 ಭಾನುವಾರದಂದು ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ನಿರೂಪಣೆಯ ಈ ಶೋನಲ್ಲಿ ಒಟ್ಟು 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಅದ್ದೂರಿಯಾಗಿ ಆರಂಭವಾದ ಈ ಶೋನಲ್ಲಿ ಹೆಚ್ಚು ಕಡಿಮೆ ಕಿರುತೆರೆಯಿಂದ ಬಂದವರೇ ಹೆಚ್ಚು.  ಆದರೆ ಸ್ಪರ್ಧಿಗಳನ್ನು ಮೂಲತಃ ಬೆಂಗಳೂರು, ಮಲೆನಾಡು, ದಕ್ಷಿಣ ಕನ್ನಡ ಮತ್ತು ಉತ್ತರ ಕರ್ನಾಟಕದಿಂದ ಆಯ್ಕೆ ಮಾಡಲಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...