ಕೊರೊನಾ ಬಿಕ್ಕಟ್ಟಿನಿಂದ ಹೊಡೆತ ಬಿದ್ದಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಅಗತ್ಯ ಇರುವ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸರ್ಕಾರ ಮುಕ್ತವಾಗಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಅವರು ಬುಧವಾರ ಹೇಳಿದ್ದಾರೆ. ಸಿಐಐನಿಂದ ಆಯೋಜಿಸಿದ್ದ ವರ್ಚುವಲ್ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ. ಸರ್ಕಾರಕ್ಕೆ ವಿವಿಧ ಸಚಿವಾಲಯ ಹಾಗೂ ವಲಯಗಳಿಂದ ಸಲಹೆಗಳು ಬರುತ್ತಿವೆ. ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ನಿರೀಕ್ಷೆಯ ಸಲಹೆಗಳವು ಎಂದು ಬಜಾಜ್ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲ ಘೋಷಣೆ ಮಾಡಿದರು. ಬೇಡಿಕೆ ಹಾಗೂ ಬಂಡವಾಳ ವೆಚ್ಚ ಹೆಚ್ಚಳ ಆಗಲಿ ಎಂಬ ಕಾರಣದಿಂದ ಮಾಡಿದ ಘೋಷಣೆಗಳು ಅದಾಗಿದ್ದವು.

Nirmala-Sitharaman

ಕಳೆದ ಮಾರ್ಚ್ ತಿಂಗಳಲ್ಲಿ ಸರ್ಕಾರದಿಂದ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ (PMGKP) ಅಡಿಯಲ್ಲಿ 1.70 ಕೋಟಿ ಪ್ಯಾಕೇಜ್ ಘೋಷಿಸಲಾಗಿತ್ತು. ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಬಡವರು, ಆರ್ಥಿಕ ದುರ್ಬಲ ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡೇ ಆ ಪ್ಯಾಕೇಜ್ ಘೋಷಿಸಲಾಯಿತು.

ಆ ನಂತರ ಮೇ ತಿಂಗಳಲ್ಲಿ ಆತ್ಮನಿರ್ಭರ್ ಭಾರತ್ ಅಭಿಯಾನ ಪ್ಯಾಕೇಜ್ ಅಡಿಯಲ್ಲಿ 20.97 ಲಕ್ಷ ಕೋಟಿ ಘೋಷಿಸಲಾಯಿತು. ಆಗ ಮುಖ್ಯವಾಗಿ ಪೂರೈಕೆ ಕಡೆ ಹಾಗೂ ದೀರ್ಘಾವಧಿ ಸುಧಾರಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಘೋಷಣೆಗಳನ್ನು ಮಾಡಲಾಯಿತು. ಮತ್ತೊಂದು ಸುತ್ತಿನ ಉತ್ತೇಜನ ಪ್ಯಾಕೇಜ್ ಆಯ್ಕೆ ಮುಚ್ಚಿಲ್ಲ ಎಂದು ಈ ವಾರದ ಆರಂಭದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •