ನಿಖಿಲ್ ಕುಮಾರಸ್ವಾಮಿ ಸ್ಯಾಂಡಲ್ವುಡ್ ನ ಯುವರಾಜ ಎಂದೇ ಕರೆಯಲ್ಪಡುವ ನಿಖಿಲ್ ಅವರು ಸ್ಯಾಂಡಲ್ವುಡ್ ಮಾತ್ರವಲ್ಲದೇ ರಾಜಕೀಯದಲ್ಲಿಯೂ ಸಕ್ರೀಯರಾಗಿದ್ದು ಜೆಡಿಎಸ್ ಪಕ್ಷದ ಯುವ ದಳದ ಅಧ್ಯಕ್ಷರೂ ಹೌದು.‌‌. ಇನ್ನು ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಹಾಗೂ ರೇವತಿ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.. ಮದುವೆಯ ಬಳಿಕ ಪತ್ನಿ ರೇವತಿ ಅವರೊಡನೆ ಬಿಡದಿಯ ತೋಟದಲ್ಲಿ ವಾಸಿಸುತ್ತಿದ್ದ ನಿಖಿಲ್ ಅವರು ಕೃಷಿ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿದ್ದರು.. ಇನ್ನು ಪತ್ನಿಯೊಟ್ಟಿಗಿನ ಹಾಗೂ ತೋಟದಲ್ಲಿನ ಕೃಷಿ ಕಾಯಕದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ನಿಖಿಲ್ ಅವರು ಆಗಾಗ ಸುದ್ದಿಯಾಗುತ್ತಲೇ ಇದ್ದರು‌.

ಇದೀಗ ಮತ್ತೊಮ್ಮೆ ನಿಖಿಲ್ ಅವರ ವಿಚಾರ ಸದ್ದು ಮಾಡುತ್ತಿದ್ದು ಇದೀಗ ಖುದ್ದು ನಿಖಿಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.. ನನ್ನ ಅವರ ಸಂಬಂಧ ಮುಗಿದಿದೆ ಈ ಬಗ್ಗೆ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.. ಅಷ್ಟಕ್ಕೂ ನಿಖಿಲ್ ಅವರು ಹೇಳಿದ್ದು ಯಾರ ಬಗ್ಗೆ? ಇಲ್ಲಿದೆ ನೋಡಿ..

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಭರ್ಜರಿಯಾಗಿಯೇ ಪ್ರಚಾರ ನಡೆಸುತ್ತಿದ್ದಾರೆ.. ರಾಜರಾಜೇಶ್ವರಿ ನಗರದ ಉಪಚುನಾವಣಾ ಅಖಾಡದಲ್ಲಿ ಅತ್ತ ಬಿಜೆಪಿ ಇಂದ ಮುನಿರತ್ನ ಅವರು ನಿಂತಿದ್ದರೆ ಇತ್ತ ಕಾಂಗ್ರೆಸ್ ನಿಂದ ಡಿ ಕೆ ರವಿ ಅವರ ಪತ್ನಿ ಕುಸುಮಾ ಅವರು ಸ್ಪರ್ಧಿಸಿದ್ದಾರೆ.. ಇನ್ನು ಜೆ ಡಿ ಎಸ್ ಪಕ್ಷದಿಂದಲೂ ಅಭ್ಯರ್ಥಿ ಸ್ಪರ್ಧಿಸಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿಗೆ ನೇರ ಹಣಾಹಣಿ ಎನ್ನಲಾಗುತ್ತಿದೆ.. ಆದರೆ ಮೂರು ಪಕ್ಷಗಳ ಅಭ್ಯರ್ಥಿಗಳು ಜೋರಾಗಿಯೆ ಪ್ರಚಾರ ನಡೆಸಿದ್ದಾರೆ.. ಆದರೆ ಯುವ ಜನತಾ ದಳದ ಅಧ್ಯಕ್ಷರಾಗಿರುವ ನಿಖಿಲ್ ಅವರು ಚುನಾವಣಾ ಪ್ರಚಾರಕ್ಕೆ ಬಾರದೇ ಇದ್ದದ್ದಕ್ಕೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದರು.. ಮುನಿರತ್ನ ಅವರು ಹಾಗೂ ನಿಖಿಲ್ ಅವರು ಆತ್ಮೀಯರು ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಅದೇ ಕಾರಣಕ್ಕೆ ನಿಖಿಲ್ ಅವರು ಪ್ರಚಾರ ಮಾಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದವು..

Nikhil Kumaraswamy

ಈ ವಿಚಾರ ಹಬ್ಬುತ್ತಿದ್ದಂತೆ ನಿಖಿಲ್ ಅವರು ಶಿರಾ ಉಪಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವ ವಿಚಾರ ಅಧಿಕೃತವಾಗಿ ಹೊರ ಬಂತು.. ನಿಖಿಲ್ ಅವರು ಸಹ ಹತ್ತಿರದ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಿ ಶಿರಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.. ಆದರೆ ರಾಜರಾಜೇಶ್ವರಿ ನಗರದಲ್ಲಿ ಮಾತ್ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಇನ್ನೂ ಪ್ರಶ್ನೆಗಳು ಹಾಗೆಯೇ ಉಳಿದವು.. ಇದೇ ಕಾರಣಕ್ಕೆ ನಿನ್ನೆ ಮಾದ್ಯಮದವರು ನಿಖಿಲ್ ಅವರನ್ನು ಪ್ರಶ್ನೆ ಮಾಡಲಾಗಿ ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ.. ತಮ್ಮ ಹಾಗೂ ಮುನಿರತ್ನ ಅವರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ..

ಹೌದು “ಮುನಿರತ್ನ ಅವರು ನನ್ನ ಬಳಿ ಬಂದು ಅಭಿಮನ್ಯು ಪಾತ್ರ ಮಾಡಬೇಕು ಎಂದು ಕೇಳಿಕೊಂಡರು.. ನಾನು ಆ ಪಾತ್ರದ ಬಗ್ಗೆ ನನ್ನ ತಂದೆ ಜೊತೆ ಚರ್ಚಿಸಿದಾಗ ಅವರೂ ಸಹ ಒಳ್ಳೆಯ ಪಾತ್ರ ಮಾಡು ಎಂದರು.. ನಾನು ಆ ಸಿನಿಮಾ ಮಾಡಿದೆ.. ಅಷ್ಟೇ.. ಕುರುಕ್ಷೇತ್ರ ಸಿನಿಮಾ‌ ಮುಗಿಯುತ್ತಿದ್ದಂತೆ ನನ್ನ ಅವರ ಸಂಬಂಧವೂ ಮುಗಿದಿದೆ.. ಒಬ್ಬ ನಟ ಮತ್ತು ನಿರ್ಮಾಪಕರಿಗೆ ಇರುವ ಸಂಬಂಧವಷ್ಟೇ ನನ್ನ ಅವರ ನಡುವೆ ಇದ್ದದ್ದು.. ಅದನ್ನು ನೀವುಗಳು ಬೇರೆ ರೀತಿಯಲ್ಲಿ ಮಾತನಾಡಿ ಅದಕ್ಕೆ ಬೇರೆ ಅರ್ಥ ಬರುವುದು ಬೇಡ.. ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ.. ಪಕ್ಷದ ನಿಯಮದಂತೆಯೇ ನಡೆಯುವೆ.. ನನ್ನ ಹಾಗೂ ಮುನಿರತ್ನ ಅವರ ಸಂಬಂಧದ ವಿಚಾರ ಮತ್ತೆ ಮಾತನಾಡಬೇಡಿ‌ ಎಂದು ಮನವಿ ಮಾಡಿಕೊಂಡಿದ್ದಾರೆ..

ಈ ಮೂಲಕ ಮುನಿರತ್ನ ಅವರ ಜೊತೆಗಿನ ಸ್ನೇಹ ಸಿನಿಮಾಗಷ್ಟೇ ಸೀಮಿತ ಎಂದಿರುವ ನಿಖಿಲ್ ಅವರು ಶಿರಾ ಕ್ಷೇತ್ರದ ಚುನಾವಣಾ ಪ್ರಚಾರದ ನಂತರ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರ ವಿರುದ್ಧದ ಪ್ರಚಾರದಲ್ಲಿ ಪಾಲ್ಗೊಳ್ಳಬಹುದಾಗಿದೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •