ಬಿಗ್ ಬಾಸ್ ಶೋ ಅದೆಷ್ಟೋ ಕಲಾವಿದರಿಗೆ ಬದುಕಲು ಮುಂದಿನ ಮೆಟ್ಟಿಲನ್ನು ಕಟ್ಟಿಕೊಟ್ಟಿದೆ.. ಮತ್ತಷ್ಟು ಮಂದಿ ಹೆಸರಿಗೆ ಇಲ್ಲದಂತೆ ಮರೆತು ಹೋಗಿದ್ದಾರೆ.. ಆದರೆ ಕೆಲವರು ಮಾತ್ರ ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಅಂದುಕೊಂಡದ್ದನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಹೌದು ಬಿಗ್ ಬಾಸ್ ಶೋ ಒಂದು ರೀತಿ ಬಣ್ಣದ ಬದುಕೆನ್ನಬಹುದು‌.‌. ಶೋ ನಡೆಯುತ್ತಿದ್ದಾಗ ನಿರೀಕ್ಷೆಗೂ ಮೀರಿ ಸುದ್ದಿಯಲ್ಲಿರುತ್ತಾರೆ.. ಆದರೆ ಒಮ್ಮೆ ಶೋ ಮುಗಿದರೆ ಸಾಕು ಮತ್ತೆ ಆ ಸೀಸನ್ ನ ಸ್ಪರ್ಧಿಗಳನ್ನು ನೆನಪಿಸಿಕೊಳ್ಳಬೇಕೆಂದರೆ ಗೂಗಲ್ ಮಾಡಿ ನೋಡುವಂತಾಗಿದೆ.. ಹೆಸರೂ ಕೂಡ ನೆನಪಿಗೆ ಬಾರದಾಗುತ್ತದೆ..

News

ಆದರೆ ಕೆಲವರು ಮಾತ್ರ ಬಿಗ್ ಬಾಸ್ ನಿಂದ ಬಂದ ಹೆಸರನ್ನು ಉಪಯೋಗಿಸಿಕೊಂಡು ಸಿನಿಮಾ ಧಾರಾವಾಹಿಯಂತ ಬ್ಯುಸಿ ಆಗಿದ್ದಾರೆ.. ಹೌದು ಬಿಗ್ ಬಾಸ್ ಗೆ ಬರುವ ಸಾಕಷ್ಟು ಕಲಾವಿದರ ಆಸೆಯೇ ಸಿನಿಮಾದಲ್ಲಿ ಅಭಿನಯಿಸುವುದಾಗಿದೆ.. ಇದರಲ್ಲಿ ಬಹಳಷ್ಟು ಸದಸ್ಯರು ಯಶಸ್ವಿಯೂ ಆಗಿ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಇನ್ನೂ ಕೆಲವರು ಸಾಕು ಈ ಸಹವಾಸ ವೆಂದು ಮುಂಚೆ ಮಾಡುತ್ತಿದ್ದ ಉದ್ಯೋಗವನ್ನೇ ಮುಂದುವರೆಸುತ್ತಿದ್ದಾರೆ..

ಇನ್ನು 2019 ರಲ್ಲಿ ಪ್ರಸಾರಗೊಂಡ ಬಿಗ್ ಬಾಸ್ ಕನ್ನಡ ಸೀಸನ್ ಏಳರಲ್ಲಿ ಕೆಲ ಸದಸ್ಯರು ಮನೆಮಾತಾದರು.. ಶೈನ್ ಶೆಟ್ಟಿ ವಾಸುಕಿ ವೈಭವ್ ಭೂಮಿ ಶೆಟ್ಟಿ.. ದೀಪಿಕಾ ದಾಸ್ ಹೀಗೆ ಕೆಲವರು ಮುಂಚೆಗಿಂತ ಹೆಚ್ಚು ಫೇಮಸ್ ಆದರು.. ವಾಸುಕಿ ವೈಭವ್ ಬಿಗ್ ಬಾಸ್ ಗೆ ಬಂದ ನಂತರ ಬಹಳಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದು ಸಿಕ್ಕಪಟ್ಟೆ ಬ್ಯುಸಿ ಆಗಿದ್ದರೆ.. ಇತ್ತ ಶೈನ್ ಶೆಟ್ಟಿ ಕೂಡ ತಮ್ಮ ಗಲ್ಲಿ ಕಿಚನ್ ನ ಎರಡನೇ ಬ್ರಾಂಚ್ ಕೂಡ ತೆರೆದು ಉದ್ಯನದಲ್ಲಿಯೂ ಯಶಸ್ವಿಯಾಗಿ ಇತ್ತ ತಮ್ಮ ಕನಸು ಸಿನಿಮಾ ಮಾಡುವ ಕನಸನ್ನು ಸಹ ನನಸು ಮಾಡಿಕೊಳ್ಳುತ್ತಿದ್ದಾರೆ..

ಇನ್ನು ಚಂದನ ಅನಂತಕೃಷ್ಣ ಮತ್ತೆ ಧಾರಾವಾಹಿಗೆ ಮರಳಿದ್ದು ಹೂಮಳೆ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.. ಇನ್ನು ದೀಪಿಕಾ ದಾಸ್ ಮಾತ್ರ ಬೇರೆ ಯಾವುದೇ ಧಾರಾವಾಹಿಯಾಗಲಿ ಸಿನಿಮಾ ಆಗಲಿ ಕಾಣಿಸಿಕೊಳ್ಳಲಿಲ್ಲ.. ತಮ್ಮ ಸಾಮಾಜಿಕ ಖಾತೆಗಳಲ್ಲಿ ಕೆಲ ಪ್ರಾಡಕ್ಟ್ ಗಳನ್ನು ಪ್ರಮೋಟ್ ಮಾಡುವ ಜಾಹಿರಾತುಗಳಲ್ಲಿ‌ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ..

ಇನ್ನು ಭೂಮಿ ಶೆಟ್ಟಿ ವಿಚಾರಕ್ಕೆ ಬಂದರೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಶೈನ್ ವಾಸುಕಿ ಜೊತೆ ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಭೂಮಿ‌ ನಂತರ ಮಜಾಭಾರತ ಶೋ ಮೂಲಕ ನಿರೂಪಕಿಯಾಗಿಯೂ ಎಂಟ್ರಿ ಕೊಟ್ಟರು.. ಆದರೆ ಅದ್ಯಾಕೋ ಕೆಲವೇ ಸಂಚಿಕೆಗಳಲ್ಲಿ ಮಜಾಭಾರತದಿಂದ ಭೂಮಿ ಶೆಟ್ಟಿ ಹೊರ ನಡೆದುಬಿಟ್ಟರು.. ಇದಕ್ಕೆ ಸರಿಯಾದ ಕಾರಣವೂ ತಿಳಿಸದೇ ಶೋನಿಂದ ಹೊರ ಬಂದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು..

ಇದೀಗ ಮಜಾಭಾರತದಿಂದ ಹೊರ ಬಂದ ಬಳಿಕ ಭೂಮಿ ಶೆಟ್ಟಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.. ಹೌದು ಇದೇನಪ್ಪಾ ಎಂದುಕೊಳ್ಳಬೇಡಿ.. ಭೂಮಿ ಶೆಟ್ಟಿ ಇಕ್ಕಟ್ಟಿನಲ್ಲಿ ಸಿಲುಕಿರುವ ಸಿಹಿ ಸುದ್ದಿಯನ್ನು ನೀಡಿದ್ದಾರೆ.. ಹೌದು ಭೂಮಿ ಶೆಟ್ಟಿ ತಾವು ಅಂದುಕೊಂಡಂತೆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಸಿನಿಮಾದ ಹೆಸರೇ “ಇಕ್ಕಟ್..” ಎಂದು ಇಡಲಾಗಿದೆ.. ಸಿನಿಮಾದ ಮೊದಲ ಪೋಸ್ಟರ್ ಹಂಚಿಕೊಂಡಿರುವ ಭೂಮಿ ಶೆಟ್ಟಿ ಸ್ನೇಹಿತರೊಟ್ಟಿಗೆ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ತಾವು ಇಕ್ಕಟ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಚಾರ ಹಂಚಿಕೊಂಡಿರುವ ಭೂಮಿ ಶೆಟ್ಟಿ ತಮ್ಮೆಲ್ಲರ ಆಶೀರ್ವಾದವಿರಲಿ ಎಂದಿದ್ದಾರೆ.. ಇನ್ನು ಇಕ್ಕಟ್ ಸಿನಿಮಾದಲ್ಲಿ ಭೂಮಿ ಶೆಟ್ಟಿ ಅವರಿಗೆ ಜೊತೆಯಾಗಿ ನಾಗಭೂಷಣ್ ನಾಯಕನಾಗಿ ಅಭಿನಯಿಸುತ್ತಿದ್ದು ಚಿತ್ರೀಕರಣ ಆರಂಭಗೊಂಡಿದೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •