ಹೃದಯ ಗೆದ್ದ ವಧು-ವರರು : ಈ ದಿನಗಳಲ್ಲಿ ಇಡೀ ದೇಶವು ಕರೋನಾ ವೈರಸ್ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಕೊರೋನ ಸಾಂಕ್ರಾಮಿಕ ರೋಗವು ನಿರಂತರವಾಗಿ ಹೆಚ್ಚುತ್ತಿದೆ. ಈ ವೈರಸ್ ಅನ್ನು ನಿಲ್ಲಿಸಲು ಮತ್ತು ಅದರ ಸರಪಳಿಯನ್ನು ಕತ್ತರಿಸಲು ದೇಶದಲ್ಲಿ ಅನೇಕ ನಿರ್ಬಂಧಗಳನ್ನು ತರಲಾಗಿದೆ. ಕೆಲವು ಸ್ಥಳಗಳಲ್ಲಿ ಲಾಕ್ಡೌನ್ ಸಹ ಹೇರಲಾಗಿದೆ.

ಆದರೂ ಲಾಕ್ ಡೌನ್ ಉಲ್ಲಂಘಿಸಿ ಅಡ್ಡಾಡುತ್ತಿರುವ, ಸಭೆ ಸಮಾರಂಭ ನಡೆಸುತ್ತಿರುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಅದೆಷ್ಟೇ ಹೇಳಿದರೂ, ಮದುವೆಗೆ ಗುಂಪು ಸೇರುವುದು ಇನ್ನೂ ನಿಂತಿಲ್ಲ. ಪ್ರತಿದಿನ ಒಂದಿಲ್ಲ ಒಂದು ಕಡೆ ಕೊರೋನ ಗೈಡ್ ಲೈನ್ಸ್ ಅನ್ನು ಗಾಳಿಗೆ ತೂರಿದ ವಿಡಿಯೊಗಳು ಬರುತ್ತಲೇ ಇರುತ್ತವೆ. ಈ ಮಧ್ಯೆ ಇದಕ್ಕೆ ವ್ಯತಿರಿಕ್ತವಾದ ವಿಡಿಯೊವೊಂದು ಬಂದಿದೆ.

ಇಲ್ಲಿ ಕೆಳಗಿರುವ ವಿಡಿಯೊದಲ್ಲಿ ಕಾಣಿಸುವ ಜೋಡಿ ಇವತ್ತು ಜನರ ಹೃದಯವನ್ನು ಗೆದ್ದಿದ್ದಾರೆ. ಕರೋನಾ ಬಿಕ್ಕಟ್ಟಿನಿಂದಾಗಿ ಜನಸಂದಣಿಯನ್ನು ನಿಷೇಧಿಸಲಾಗಿದೆ. ಅದು ವಿವಾಹವಾಗಲಿ, ಕಾರ್ಯಕ್ರಮವಾಗಲಿ, ಜನಸಮೂಹವನ್ನು ಎಲ್ಲೆಡೆ ನಿಷೇಧಿಸಲಾಗಿದೆ. ಆದರೂ ಮದುವೆ ಸಮಾರಂಭ ಸರಳವಾಗಿ ನಡೆಯುತ್ತಿಲ್ಲ, ಆದರೆ ಈ ವರ ಕೇವಲ ಬೈಕ್ ಮೇಲೆ ವಧು ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ!

ಈ ರೀತಿಯಾಗಿ ವರನು ತನ್ನ ವಧುವನ್ನು ಕರೆದೊಯ್ಯುವ ರೀತಿ ಪೊಲೀಸರ ಹೃದಯವನ್ನೂ ಗೆದ್ದಿದೆ. ಈ ವೀಡಿಯೊದಲ್ಲಿ ನೀವು ನೋಡುವಂತೆ, ವಧು-ವರರು ಮದುವೆಯಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾರೆ. ಇದ್ದಕ್ಕಿದ್ದಂತೆ ಪೊಲೀಸರು ಅವರನ್ನು ತಡೆಯುತ್ತಾರೆ. ಅವರ ಕಥೆ ಕೇಳಿದ ಮೇಲೆ ನಿಲ್ಲಿಸಿ ಅಲ್ಲಿಯೇ ಹೂಮಾಲೆ ತರಿಸಿ, ಅವರಿಗೆ ಹಾಕಿ ಕರೋನಾ ಅವಧಿಯಲ್ಲಿ ಅವರು ಮದುವೆಯಾದ ರೀತಿಗೆ ತಲೆಬಾಗಿದರು.

ಪೊಲೀಸರು ಇಬ್ಬರಿಗೂ ಹೂಮಾಲೆ ಹಾಕುವ ಮೂಲಕ ಮತ್ತು ಮುಯ್ಯಿ (ಆಯರ್) ನೀಡುವ ಮೂಲಕ ಅವರನ್ನು ಸನ್ಮಾನಿಸಿದರು. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಸದರಿ ವಿಡಿಯೊ ಈಗ ಎಲ್ಲಡೆ ವೈರಲ್ ಆಗಿದೆ. ಸ್ವತ ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ.

ವೀಡಿಯೊವನ್ನು ಹಂಚಿಕೊಳ್ಳುವಾಗ, COVID ಪ್ರೋಟೋಕಾಲ್ ಅನ್ನು ಅನುಸರಿಸಿ ಹೊಸದಾಗಿ ಮದುವೆಯಾಗಿ ಬೈಕ್‌ ನಲ್ಲಿ ಮನೆಗೆ ಹೋಗುತ್ತಿದ್ದವರನ್ನು ಪೊಲೀಸರು ಮನೆಯ ಹಿರಿಯರಂತೆ ಶುಭಾಶಯಗಳನ್ನು ಕೋರಿ ಮುಯ್ಯಿ ನೀಡಿದರು. ಈ ವಿಡಿಯೋ ಪಂಜಾಬ್‌ ನದ್ದಾಗಿದೆ ಎಂದು ಹೇಳಲಾಗುತ್ತಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •